ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪ್ರೀಮಿಯರ್ ಲೀಗ್ ಟೂರ್ನಿ: 3 ದಶಕದ ಚಾಂಪಿಯನ್ ಪಟ್ಟ ಕನಸು ನನಸಾಗಿಸಿಕೊಂಡ ಲಿವರ್‌ಪೂಲ್

Liverpool Crowned Champions Of England After 30 Years

ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಚಾಂಪಿಯನ್‌ಷಿಪ್ ಫುಟ್ಬಾಲ್ ಟೂರ್ನಿಯಲ್ಲಿ ಲಿವರ್‌ಪೂಲ್ ತಂಡ ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಚೆಲ್ಸಿಯಾ ತಂಡ ಮ್ಯಾಂಚೆಸ್ಟರ್ ಸಿಟಿ ತಂಡವನ್ನು 2-1 ಗೋಲುಗಳಿಂದ ಸೋಲಿಸುವುದರೊಂದಿಗೆ ಲಿವರ್‌ಪೂಲ್ ತಂಡದ ಚಾಂಪಿಯನ್ ಪಟ್ಟ ಅಧಿಕೃತವಾಗಿದೆ.

ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಜುರ್ಗಾನ್ ಕ್ಲೋಪ್ ನೇತೃತ್ವದ ಲಿವರ್‌ಪೂಲ್ ತಂಡ ಉಳಿದೆಲ್ಲಾ ತಂಡಗಳಿಗೆ ಅಸಾಧ್ಯವೆನಿಸಿದ ಮುನ್ನಡೆಯನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಉಳಿದ ಏಳು ಪಂದ್ಯಗಳಲ್ಲಿ ಯಾವುದೇ ತಂಡಕ್ಕೂ ಲಿವರ್‌ಪೂಲ್ ತಂಡವನ್ನು ಹಿಂದಿಕ್ಕುವುದು ಅಸಾಧ್ಯ ಎಂಬುದು ಅಧಿಕೃತಗೊಂಡಿದ್ದು ಲಿವರ್‌ಪೂಲ್ ಮೊದಲ ಬಾರಿಗೆ ಪ್ರೀಮಿಯರ್ ಲೀಗ್ ಚಾಂಪಿಯನ್ ಎನಿಸಿದೆ. ಒಟ್ಟಾರೆಯಾಗಿ ಲಿವರ್ ಪೂಲ್ ತಂಡಕ್ಕೆ ಇದು 19ನೇ ಲೀಗ್ ಪ್ರಶಸ್ತಿಯಾಗಿದೆ.

ರೊನಾಲ್ಡೋ ಗೋಲ್ ಮಿಸ್, ಇಟಾಲಿಯನ್ ಕಪ್ ಫೈನಲ್‌ಗೆ ಯುವೆಂಟಸ್ರೊನಾಲ್ಡೋ ಗೋಲ್ ಮಿಸ್, ಇಟಾಲಿಯನ್ ಕಪ್ ಫೈನಲ್‌ಗೆ ಯುವೆಂಟಸ್

ಈ ಋತುವಿನಲ್ಲಿ ಲಿವರ್‌ಪೋಲ್ ಆಡಿದ 31 ಪಂದ್ಯಗಳ ಪೈಕಿ 28ರಲ್ಲಿ ಗೆಲುವನ್ನು ಸಾಧಿಸಿದೆ. ಕಳೆದ ಬಾರಿಯ ಚಾಂಪಿಯನ್ ತಂಡ ಮ್ಯಾಂಚೆಸ್ಟರ್ ಸಿಟಿ ತಂಡಕ್ಕಿಂತ 23 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿದ್ದು ಲೀಗ್‌ನಲ್ಲಿ ಇನ್ನೂ ಏಳು ಪಂದ್ಯಗಳು ಉಳಿದುಕೊಂಡಿರುವಂತೆಯೇ ಚಾಂಪಿಯನ್ ಪಟ್ಟಕ್ಕೇರಿದೆ. ಸ್ಟ್ಯಾಮ್‌ಫೋರ್ಡ್ ಬ್ರಿಡ್ಜ್‌ನಲ್ಲಿ ಚೆಲ್ಸಿಯಾ ತಂಡ ಲಿವರ್‌ಪೂಲ್‌ಗೆ ಅನುಕೂಲಕರ ಫಲಿತಾಂಶವನ್ನು ತಂದುಕೊಟ್ಟಿತು.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮ್ಯಾಂಚೆಸ್ಟರ್ ಸಿಟಿ ತಂಡ ಗುರುವಾರದ ಸೋಲಿನೊಂದಿಗೆ 23 ಅಂಕಕ್ಕೇ ತೃಪ್ತಿಪಡುವಂತಾಗಿದೆ. ಬುಧವಾರ ಎನ್‌ಫೀಲ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡವನ್ನು 4-0 ಅಂತರದಲ್ಲಿ ಸೋಲಿಸುವ ಮೂಲಕ ಲಿವರ್‌ಪೂಲ್ ತಂಡ ಪ್ರಶಸ್ತಿಯಿಂದ ಕೇವಲ ಎರಡು ಅಂಕಗಳಷ್ಟೇ ದೂರವಿತ್ತು.

ಕೊರೊನಾ ವೈರಸ್: 2022ರ ವಿಶ್ವಕಪ್ ಫುಟ್ಬಾಲ್ ನಡೆಯುವ ಭರವಸೆ ನೀಡಿದ ಕತಾರ್ಕೊರೊನಾ ವೈರಸ್: 2022ರ ವಿಶ್ವಕಪ್ ಫುಟ್ಬಾಲ್ ನಡೆಯುವ ಭರವಸೆ ನೀಡಿದ ಕತಾರ್

ಈ ಹಿಂದೆ ಟೂರ್ನಿಯೊಂದರಲ್ಲಿ ಲಿವರ್‌ಪೂಲ್ ತಂಡ ಐದು ಪಂದ್ಯಗಳು ಉಳಿದುಕೊಂಡಿರುವಂತೆಯೇ ಗೆಲುವು ಸಾಧಿಸಿದ್ದು ದಾಖಲೆಯಾಗಿದ್ದು ಆದರೆ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದು 7 ಪಂದ್ಯಗಳಿರುವಂತೆಯೇ ಚಾಂಪಿಯನ್ ಎನಿಸಿಕೊಂಡಿದೆ.

Story first published: Friday, June 26, 2020, 15:33 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X