ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಲಿವರ್‌ಪೂಲ್‌ನಲ್ಲಿ ಮುಳುಗಿದ ಎಫ್‌ಸಿ ಬಾರ್ಸಿಲೋನಾ

Liverpool stuns Barcelona to reach Champions League final

ಚಾಂಪಿಯನಸ್‌ ಲೀಗ್‌ ಸೆಮಿಫೈನಲ್ಸ್‌ನಲ್ಲಿ ರೆಡ್ಸ್‌ ಪಡೆಗೆ 4-3 ಸರಾಸರಿ ಗೋಲ್‌ಗಳ ಜಯ

ಆನ್ಫೀಲ್ಡ್‌, ಮೇ 08: ಯಾರಿಂದಲೂ ಊಹಿಸಲಾಗದ ರೀತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಲಿವರ್‌ಪೂಲ್‌ ತಂಡ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿ ಸೆಮಿಫೈನಲ್ಸ್‌ನ 2ನೇ ಹಂತದ ಪಂದ್ಯದಲ್ಲಿ ಬಲಿಷ್ಠ ಎಫ್‌ಸಿ ಬಾರ್ಸಿಲೋನಾಗೆ 4-0 (4-3ರ ಸರಾಸರಿ) ಗೋಲ್‌ಗಳಿಂದ ಆಘಾತ ನೀಡಿ ಫೈನಲ್‌ಗೆ ದಾಪುಗಾಲಿಟ್ಟಿದೆ.

ಇಲ್ಲಿನ ಆನ್ಫೀಲ್ಡ್‌ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿರೆಡ್ಸ್‌ ಖ್ಯಾತಿಯ ಆತಿಥೇಯ ಲಿವರ್‌ಪೂಲ್‌ ತಂಡ ತನ್ನ ಸ್ಟಾರ್‌ ಆಟಗಾರ ಮೋ ಸಲ್ಹಾ ಅವರ ಸೇವೆ ಇಲ್ಲದೇ ಇದ್ದರೂ ಗೋಲ್‌ಗಳ ಸುರಿಮಳೆ ಮಳೆ ಹರಿಸಿತು.

ಬಾರ್ಸಿಲೋನಾದ ಕ್ಯಾಂಪ್‌ನೌನಲ್ಲಿ ನಡೆದ ಸೆಮಿಫೈನಲ್ಸ್‌ನ ಮೊದಲ ಹಂತದ ಪಂದ್ಯದಲ್ಲಿ 0-3 ಅಂತರದ ಸೋಲನುಭವಿಸಿದ್ದ ಲಿವರ್‌ ಪೂಲ್‌ ತಂಡಕ್ಕೆ ಎರಡನೇ ಹಂತದ ಸೆಮಿಫೈನಲ್ಸ್‌ ಪಂದ್ಯದಲ್ಲಿ 4-0 ಅಂತರದ ಜಯ ದಾಖಲಿಸಲೇ ಬೇಕಿದ್ದ ಒತ್ತಡವಿತ್ತು. ಅದರಲ್ಲೂ ಲಿಯೋನೆಲ್‌ ಮೆಸ್ಸಿ ಅವರಂತಹ ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ಬಾರ್ಸಿಲೋನಾ ಎದುರು ಇಂಥದ್ದೊಂದು ಜಯ ದಾಖಲಿಸುವುದು ಅಸಾಧ್ಯಕ್ಕೆ ನಂತರದ ಮಾತಾಗಿತ್ತು.

 ಚಾಂಪಿಯನ್ಸ್‌ ಲೀಗ್‌: ಮೆಸ್ಸಿ ಮ್ಯಾಜಿಕ್‌, ಬಾರ್ಸಿಲೋನಾಗೆ ಜಯ ಚಾಂಪಿಯನ್ಸ್‌ ಲೀಗ್‌: ಮೆಸ್ಸಿ ಮ್ಯಾಜಿಕ್‌, ಬಾರ್ಸಿಲೋನಾಗೆ ಜಯ

ಒಟ್ಟಾರೆ 54 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ತವರಿನ ಅಭಿಮಾನಿಗಳ ಎದುರು ಅದ್ಭುತ ಆಟವಾಡಿದ ಲಿವರ್‌ಪೂಲ್‌ ತಂಡದ ಪರ ಬದಲಿ ಆಟಗಾರರಾದ ಡಿವೋಕ್‌ ಒರಿಗಿ (7 ಮತ್ತು 79ನೇ ನಿ.) ಮತ್ತು ಜಾರ್ಜಿನಿಯೊ ವಿನಾಲ್ಡಮ್‌ (54 ಮತ್ತು 56ನೇ ನಿ.) ತಲಾ ಎರಡು ಗೋಲ್‌ಗಳನ್ನು ದಾಖಲಿಸಿ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.

ಆರಂಭದಲ್ಲೇ ಬಾರ್ಸಿಲೋನಾಗೆ ಆಘಾತ

ಆತಿಥೇಯ ಲಿವರ್‌ಪೂಲ್‌ ತಂಡ ಪಂದ್ಯ ಶುರುವಾರ ಮೊದಲ ನಿಮಿಷದಿಂದಲೂ ಹೆಚ್ಚು ಆಕ್ರಮಣಕಾರಿ ಆಟವಾಡಿ ಎದುರಾಳಿ ಮೇಲೆ ಒತ್ತಡ ಹೇರಿತು. ಪರಿಣಾಮ ಒತ್ತಡ ನಿಭಾಯಿಸುವಲ್ಲಿ ವಿಫಲಗೊಂಡ ಎಫ್‌ಸಿಬಿ ಏಳೇ ನಿಮಿಷಗಳಲ್ಲಿ ಗೋಲ್‌ ಬಿಟ್ಟುಕೊಟ್ಟಿತು. ಡಿಫೆಂಡರ್‌ ಜಾರ್ಡಿ ಆಲ್ಬಾ ಎಸಗಿದ ಪ್ರಮಾದದಿಂದಾಗಿ ಸ್ಯಾಡಿಯೊ ಮೇನ್‌ ಚೆಂಡನ್ನು ಸಹ ಅಟಗಾರ ಜಾರ್ಡನ್‌ ಹೆಂಡರ್ಸನ್‌ಗೆ ಪಾಸ್‌ ಮಾಡಿದರು. ಆದರೆ, ಬಾರ್ಸಿಲೋನಾದ ಕೀಪರ್‌ ಮಾರ್ಕ್‌ಆಂಡ್ರೆ ಹೆಂಡರ್ಸನ್‌ ಅವರ ಪ್ರಯತ್ನವನ್ನು ತಡೆದರಾದರೂ, ಅವರ ಕೈಯಿಂದ ಚಿಮ್ಮುದ ಚೆಂಡನ್ನು ಒರಿಗಿ ಗೋಲ್‌ ಪೆಟ್ಟಿಗೆಗೆ ಸೇರಿಸಿದರು.

ದ್ವಿತೀಯಾರ್ಧದಲ್ಲಿ ವಿನಾಲ್ಡಮ್‌ ಮಿಂಚು

ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಲಿವರ್‌ಪೂಲ್‌ ಯಶಸ್ಸು ಗಳಿಸಿತ್ತಾದರೂ, ಸರಾಸರಿ ಗೋಲ್‌ಗಳ ಅಂತರದಲ್ಲಿ ಬಾರ್ಸಿಲೋನಾ 3-1ರ ಮುನ್ನಡೆಯಲ್ಲಿತ್ತು. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದ ದಿ ರೆಡ್ಸ್‌ ಪಡೆಗೆ 54 ಮತ್ತು 56ನೇ ನಿಮಿಷದಲ್ಲಿಸತತ ಎರಡು ಗೋಲ್‌ಗಳನ್ನು ತಂದುಕೊಟ್ಟ ಜಾರ್ಜಿನಿಯೊ ವಿನಾಲ್ಡಮ್‌ ಡಬಲ್‌ ಸಂಭ್ರಮ ಆಚರಿಸಿದರು. ಬದಲಿ ಆಟಗಾರನಾಗಿ ಕಣಕ್ಕಿಳಿದು ಎರಡು ಗೋಲ್‌ ಗಳಿಸುವ ಮೂಲಕ ವಿನಾಲ್ಡಮ್‌ ಆತಿಥೇಯ ಪ್ರೇಕ್ಷಕರ ಎದುರು ಹೀರೊ ಆದರು. ಇದರೊಂದಿಗೆ ಸರಾಸರಿ ಗೋಲ್‌ಗಳ ಅಂತರದಲ್ಲಿ 3-3ರ ಸಮಬಲ ತಂದುಕೊಂಡ ಲಿವರ್‌ಪೂಲ್‌ ತಂಡದ ಆತ್ಮವಿಶ್ವಾಸ ಮುಗಿಲು ಮುಟ್ಟಿತ್ತು.

ಒರಿಗಿ ಗೆಲುವಿನ ಗೋಲ್‌

ಪಂದ್ಯದ ಅಂತ್ಯದ ಹೊತ್ತಿಗೆ ಗೆಲುವಿಗಾಗಿ ಸಂಪೂರ್ಣವನ್ನೂ ಪಣಕ್ಕಿಟ್ಟಿದ್ದ ಲಿವರ್‌ಪೂಲ್‌ ತಂಡ ಬಾರ್ಸಿಲೋನಾದ ಭದ್ರ ಡಿಫೆನ್ಸ್‌ ವಿಭಾಗವನ್ನು ಮುರಿಯುವಲ್ಲಿ ಮತ್ತೆ ಯಶಸ್ವಿಯಾಯಿತು. 79ನೇ ನಿಮಿಷದಲ್ಲಿ ಬಾರ್ಸಿಲೋನಾ ಡಿಫೆಂಡರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಅಲೆಕ್ಸಾಂಡರ್‌ ಅರ್ನಾಲ್ಡ್‌ ಗೋಲ್‌ ಗಳಿಸುವ ಅವಕಾಶಕ್ಕಾಗಿ ಕಾದಿದ್ದ ಒರಿಗಿಗೆ ಚೆಂಡನ್ನು ನೀಡಿದರು. ಇದರ ಲಾಭ ಪಡೆದ ಒರಿಗಿ ಸುಲಭವಾಗಿ ಗೋಲ್ ಗಳಿಸುವ ಮೂಲಕ ತಂಡಕ್ಕೆ ಜಯದ ಮಾಲೆ ತೊಡಿಸಿದರು.

ಜೂನ್‌ 1ಕ್ಕೆ ಫೈನಲ್‌ ಪಂದ್ಯ

ಪ್ರಶಸ್ತಿ ಸುತ್ತಿಗೆ ಕಾಲಿಟ್ಟ ಮೊದಲ ತಂಡವಾಗಿರುವ ಲಿವರ್‌ಪೂಲ್‌, ಮ್ಯಾಡ್ರಿಡ್‌ನ ವಾಂಡಾ ಮೆಟ್ರೊಪಾಲಿಟಾನೊ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಜೂನ್‌ 1ರಂದು
ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಟೊಟೆನ್‌ಹ್ಯಾಮ್‌ ಹಾಟ್‌ಸ್ಪುರ್‌ ಅಥವಾ ಏಜಾಕ್ಸ್‌ ವಿರುದ್ಧ ಪೈಪೋಟಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ಸ್‌ನ 2ನೇ ಹಂತದ ಪಂದ್ಯ ಬುಧವಾರ ತಡರಾತ್ರಿ ನಡೆಯಲಿದ್ದು, ಟೊಟೆನ್‌ಹ್ಯಾಮ್‌ ಹಾಟ್‌ಸ್ಪುರ್‌ ಸರಾಸರಿ ಗೋಲ್‌ಗಳಲ್ಲಿ ಏಜಾಕ್ಸ್‌ ಎದುರು 0-1ರ ಹಿನ್ನಡೆಯಲ್ಲಿದೆ.

Story first published: Wednesday, May 8, 2019, 15:24 [IST]
Other articles published on May 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X