ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಾನವೀಯ ಗುಣಕ್ಕಾಗಿ ಅಭಿಮಾನಿಗಳ ಮನ ಗೆದ್ದ ಮೊಹಮ್ಮದ್ ಸಲಾ

Mohamed Salah saved a homeless man from abuse wins hearts

ಇಂಗ್ಲೆಂಡ್: ಈಜಿಪ್ಟ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕಾಗಿ ಆಡುವ ಮತ್ತು ಲಿವರ್‌ಪೂಲ್ ಕ್ಲಬ್‌ನ ಫಾರ್ವರ್ಡ್ ಆಟಗಾರರಾಗಿರುವ ಮೊಹಮ್ಮದ್ ಸಲಾ ಮೈದಾನದ ಹೊರಗೆ ಮಾನವೀಯ ಗುಣಕ್ಕಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಬೀದಿಯಲ್ಲಿ ಹಲ್ಲೆಗೊಳಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಸಲಾ, ತೊಂದರೆಗೊಳಗಾದ ವ್ಯಕ್ತಿಗೆ ಧನ ಸಹಾಯವೂ ಮಾಡಿದ್ದಾರೆ.

ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಬಗ್ಗೆ ಗೊತ್ತಿಲ್ಲದೆ ನಾನು ಹಾಗೆ ಹೇಳಬಾರದಿತ್ತು: ಆಶಿಶ್ ನೆಹ್ರಾದೇವದತ್ ಪಡಿಕ್ಕಲ್ ಬ್ಯಾಟಿಂಗ್ ಬಗ್ಗೆ ಗೊತ್ತಿಲ್ಲದೆ ನಾನು ಹಾಗೆ ಹೇಳಬಾರದಿತ್ತು: ಆಶಿಶ್ ನೆಹ್ರಾ

ಇಂಗ್ಲೆಂಡ್‌ನ ಲಿವರ್ ಪೂಲ್‌ ಬಳಿಯ ಆನ್‌ಫೀಲ್ಡ್ ಸ್ಟೇಡಿಯಂ ಸಮೀಪ ಈ ಘಟನೆ ಕಾಣ ಸಿಕ್ಕಿದೆ ಎನ್ನಲಾಗಿದೆ. ಸಲಾ ನಿರ್ಗತಿಕ ವ್ಯಕ್ತಿಗೆ ಸಹಾಯ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಲಾ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಹೈದರಾಬಾದ್ vs ಪಂಜಾಬ್, ಎರಡರಲ್ಲಿ ಬಲಿಷ್ಠ ಯಾವುದು?ಐಪಿಎಲ್: ಹೈದರಾಬಾದ್ vs ಪಂಜಾಬ್, ಎರಡರಲ್ಲಿ ಬಲಿಷ್ಠ ಯಾವುದು?

ವರದಿಯ ಪ್ರಕಾರ, ಪೆಟ್ರೋಲ್ ಬಂಕ್‌ ಸಮೀಪ ಸಲಾ ಕಾರಿನಲ್ಲಿ ಬರುತ್ತಿದ್ದಾಗ ಡೇವಿಡ್ ಕ್ರೇಗ್ ಎನ್ನುವ ವ್ಯಕ್ತಿಗೆ ಒಂದಿಷ್ಟು ಮಂದಿ ಕಿರುಕುಳ ನೀಡುತ್ತಿದ್ದರು. ಆ ಕೂಡಲೇ ಕಾರಿನಿಂದ ಇಳಿದು ಬಂದ ಸಲಾ, ಕಿರುಕುಳ ನೀಡುತ್ತಿದ್ದವರಿಂದ ಕ್ರೇಗ್ ಅವರನ್ನು ರಕ್ಷಿಸಿದರು.

ಕಿರುಕುಳ ನೀಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಸಲಾ ಅನಂತರ ಸಮೀಪದ ಏಟಿಎಂಗೆ ತೆರಳಿ ಕ್ರೇಗ್‌ಗೆ £100 (9,462 ರೂ.) ನೀಡಿದರು. ಘಟನೆ ಬಗ್ಗೆ ವಿವರಿಸಿರುವ ಕ್ರೇಗ್‌, 'ನನ್ನನ್ನು ರಕ್ಷಿಸಿದ ಸಲಾ, ಕಿರುಕುಳ ನೀಡುತ್ತಿದ್ದವರತ್ತ ತಿರುಗಿ, ಕೆಲ ವರ್ಷಗಳ ಬಳಿಕ ನೀವೂ ಹೀಗಾಗಬಹುದು ಎಂದರು. ಮತ್ತೆ ನನ್ನ ಕೈಗೆ £100 ಕೊಟ್ಟಾಗ ನನಗದನ್ನು ನಂಬಲಾಗಲಿಲ್ಲ. ನನ್ನ ಪಾಲಿಗೆ ಸಲಾ ನಿಜ ನೀವನದ ಹೀರೋ. ಆತನಿಗೆ ನನ್ನ ಧನ್ಯವಾದಗಳು,' ಎಂದಿದ್ದಾರೆ.

Story first published: Thursday, October 8, 2020, 17:51 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X