ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೇಮರ್ 1 ಮಿ. ಡಾಲರ್ ದೇಣಿಗೆ

Neymar donates $1M to fight coronavirus

ರಿಯೋ ಡಿ ಜನೈರೋ, ಏಪ್ರಿಲ್ 4: ಮಾರಕ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ಬ್ರೆಜಿಲ್‌ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ 1 ಮಿಲಿಯನ್ ಡಾಲರ್ (7,64,19,000 ರೂ.) ದೇಣಿಗೆ ನೀಡಿದ್ದಾರೆ ಎಂದು ಟಿವಿ ನೆಟ್ವರ್ಕ್ ಎಬಿಟಿ ವರದಿ ಹೇಳಿದೆ. ಬ್ರೆಜಿಲ್ ಭಾಗದಲ್ಲಿ ಕೊರೊನಾ ಹತ್ತಿಕ್ಕಲು ನೇಮರ್ ಕೈ ಜೋಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆಯಿರುವ 5 ಬ್ಯಾಟ್ಸ್‌ಮನ್‌ಗಳುಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆಯಿರುವ 5 ಬ್ಯಾಟ್ಸ್‌ಮನ್‌ಗಳು

ಸದ್ಯ ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್ಬಾಲ್ ಕ್ಲಬ್ ಪರ ಆಡುವ ನೇಮರ್, ವಿಶ್ವದಲ್ಲಿ ಮೂರನೇ ಅತ್ಯಧಿಕ ಸಂಭಾವನೆ ಪಡೆಯುವ ಸ್ಟಾರ್ ಆಟಗಾರ. ತನ್ನ ದೇಣಿಗೆಯನ್ನು ನೇಮರ್, ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (ಯುಎನ್‌ಐಸಿಇಎಫ್‌) ಮತ್ತು ತನ್ನ ಸ್ನೇಹಿತ ಲೂಸಿಯಾನೊ ಹಕ್ ಸ್ಥಾಪಿಸಿರುವ ಚಾರಿಟಿ ಸಂಸ್ಥೆಗೆ ಹಂಚಿದ್ದಾರೆ ಎಂದು ಬ್ರೆಜಿಲ್ ಮಾಧ್ಯಮ ತಿಳಿಸಿದೆ.

ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ ಕೇದಾರ್ ಜಾಧವ್ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ ಕೇದಾರ್ ಜಾಧವ್

ದೇಣಿಗೆ ನೀಡಿರುವ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಲು ಮಾತ್ರ ನೇಮರ್ ನಿರಾಕರಿಸಿದ್ದಾರೆ. 'ದೇಣಿಗೆ ಅಥವಾ ಹಣದ ವಿಚಾರವಾಗಿ ನಾವು ಯಾವತ್ತಿಗೂ ಮಾತನಾಡಬಾರದು,' ಎಂದು 28ರ ಹರೆಯದ ನೇಮರ್ ಹೇಳಿದ್ದಾರೆ. ನೇಮರ್ ಸ್ನೇಹಿತ ಹಕ್, ರಿಯೋ ಡಿ ಜನೈರೋ ಆಸುಪಾಸಿನಲ್ಲಿ ಬಡಕುಟುಂಬಗಳಿಗೆ ತನ್ನ ಚಾರಿಟಿ ಮೂಲಕ ನೆರವೀಯುತ್ತಿದ್ದಾರೆ.

ಪ್ರೇಯಸಿಯ ಭೇಟಿಗೆ ರಾತ್ರಿ 2 ಗಂಟೆಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?ಪ್ರೇಯಸಿಯ ಭೇಟಿಗೆ ರಾತ್ರಿ 2 ಗಂಟೆಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?

ನೇಮರ್ ಅವರ ತಂಡದ ಮತ್ತೊಬ್ಬ ಆಟಗಾರ ಕೈಲಿಯನ್ ಎಂಬಪ್ಪೆ ಸಹ ಕಳೆದ ತಿಂಗಳು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಫ್ರೆಂಚ್ ಚಾರಿಟಿಯೊಂದಕ್ಕೆ ಗಣನೀಯ ದೇಣಿಗೆ ನೀಡಿದ್ದರು. ಆದರೆ ಎಂಬಪ್ಪೆ ಕೂಡ ದೇಣಿಗೆಯ ಮೌಲ್ಯವನ್ನು ಎಲ್ಲೂ ಹೇಳಿಕೊಂಡಿಲ್ಲ.

Story first published: Saturday, April 4, 2020, 10:25 [IST]
Other articles published on Apr 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X