ಭವಿಷ್ಯದ ಸ್ಟಾರ್ಸ್ ರೂಪಿಸಲು ಐಎಸ್‍ಎಲ್ ಹಾಗೂ ಪ್ರೀಮಿಯರ್ ಲೀಗ್ ಒಪ್ಪಂದ

ಮುಂಬೈ, ಮಾರ್ಚ್ 01: ದೇಶದ ಫುಟ್‍ಬಾಲ್ ಬೆಳವಣಿಗೆಗೆ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಐಎಸ್‍ಎಲ್ (ಇಂಡಿಯನ್ ಸೂಪರ್ ಲೀಗ್) ಹಾಗೂ ಇಂಗ್ಲೆಂಡಿನ ಪ್ರೀಮಿಯರ್ ಲೀಗ್ (ಪಿಎಲ್) ನಡುವಿನ ಒಪ್ಪಂದವನ್ನು ಮತ್ತೊಮ್ಮೆ ನವೀಕರಿಸಲಾಗಿದ್ದು ಭವಿಷ್ಯದ ಪುಟ್‍ಬಾಲಿಗರಿಗೆ ವೇದಿಕೆಯಾಗಲಿದೆ.

ನವಿ ಮುಂಬೈನಲ್ಲಿ ಶುಕ್ರವಾರ ರಿಲಯೆನ್ಸ್ ಫೌಂಡೇಷನ್‍ನ ರಿಲಯನ್ಸ್ ಕಾರ್ಪೋರೇಟ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ''ಮುಂಬೈ 2020 ನೆಕ್ಸ್ಟ್ ಜನರೇಷನ್ ಫುಟ್‍ಬಾಲ್ ಟೂರ್ನಿ''ಯ ಕೊನೆಯ ಲೀಗ್ ಪಂದ್ಯದ ಸಂದರ್ಭದಲ್ಲಿ ಈ ಒಪ್ಪಂದವನ್ನು ಪರಿಷ್ಕರಿಸಲಾಯಿತು, ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಷನ್ ಹಾಗೂ ಫುಟ್‍ಬಾಲ್ ಸ್ಪೋರ್ಟ್ಸ್ ಡೆವಲಪ್‍ಮೆಂಟ್ ಮುಖ್ಯಸ್ಥೆ ನೀತಾ ಅಂಬಾನಿ ಮತ್ತು ಪ್ರೀಮಿಯರ್ ಲೀಗ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ಸ್ ಮಾಸ್ಟ್ರೆಸ್ ಒಪ್ಪಂದದ ವಿಷಯ ಪ್ರಕಟಿಸಿದರು.

ಐಎಸ್‌ಎಲ್ 2020: ಚೆನ್ನೈನಲ್ಲಿ ಬಲಿಷ್ಠ ತಂಡಗಳ ಸೆಮಿಫೈನಲ್ ಕದನಐಎಸ್‌ಎಲ್ 2020: ಚೆನ್ನೈನಲ್ಲಿ ಬಲಿಷ್ಠ ತಂಡಗಳ ಸೆಮಿಫೈನಲ್ ಕದನ

ಇದೇ ವೇಳೆ ಮಾತನಾಡಿದ ನೀತಾ ಅಂಬಾನಿ, ''ಇಂಗ್ಲೆಂಡ್ ಪ್ರೀಮಿಯರ್ ಲೀಗ್ ಜತೆಗೆ ಹೊಸ ಒಪ್ಪಂದವನ್ನು ನಡೆಸಿರುವುದು ಸಂತೋಷದ ಸಂಗತಿಯಾಗಿದೆ, ಆಡಳಿತ, ಪ್ರತಿಭಾ ಶೋಧ, ವಾಣಿಜ್ಯ ಬೆಳವಣಿಗೆ, ತರಬೇತಿ ಹಾಗೂ ರೆಫರಿಗಳ ಕೊಡುಕೊಳ್ಳುವಿಕೆಗೆ ಮುಕ್ತವಾದ ವಾತಾವರಣ ನಿರ್ಮಾಣವಾಗಿದೆ'' ಎಂದರು.

ಬಳಿಕ ಮಾತನಾಡಿದ ರಿಚಡ್ರ್ಸ ಮಾಸ್ಟ್ರೆಸ್, ''ಕಳೆದ 6 ವರುಷಗಳಿಂದ ಭಾರತದಲ್ಲಿ ಫುಟ್‍ಬಾಲ್ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆ. ಸಾಕಷ್ಟು ಕೆಲಸಗಳನ್ನೂ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ'' ಎಂದು ತಿಳಿಸಿದರು.

ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಮುಂಬೈ ಕಪ್ ಟೂರ್ನಿಯಲ್ಲಿ ಪ್ರೀಮಿಯರ್ ಲೀಗ್‍ನ ಮೂರು ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಚೆಲ್ಸಿ ಎಫ್‍ಸಿ, ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಸೌಥಾಂಪ್ಟನ್ ಎಫ್‍ಸಿ 14 ವಯೋಮಿತಿಯೊಳಗಿ ತಂಡಗಳು ಭಾಗವಹಿಸುತ್ತಿವೆ. ಬೆಂಗಳೂರು ಎಫ್‍ಸಿ, ಗೋವಾ ಎಫ್‍ಸಿ ಮತ್ತು ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ ತಂಡಗಳ ವಿರುದ್ಧ ಪ್ರೀಮಿಯರ್ ಲೀಗ್ ತಂಡಗಳು ಆಡುತ್ತವೆ.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Sunday, March 1, 2020, 11:13 [IST]
Other articles published on Mar 1, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X