ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತವನ್ನು 2-1ರಿಂದ ಸೋಲಿಸಿ ಸಾಫ್ ಕಪ್ ಎತ್ತಿದ ಮಾಲ್ಡೀವ್ಸ್

SAFF Cup final : Maldives defeat defending champion India

ಢಾಕಾ, ಸೆಪ್ಟೆಂಬರ್, 15 : ಡಿಫೆಂಡಿಂಗ್ ಚಾಂಪಿಯನ್ ಭಾರತವನ್ನು 2-1ರ ಅಂತರದಿಂದ ಸೋಲಿಸಿರುವ ಮಾಲ್ಡೀವ್ಸ್ ಸಾಫ್ ಸುಜುಕಿ ಕಪ್ ಅನ್ನು ಎತ್ತಿಹಿಡಿದಿದೆ.

ಏಳು ಬಾರಿ ಚಾಂಪಿಯನ್ ಆಗಿದ್ದ ಭಾರತ ಈ ಬಾರಿ ಕೂಡ ಸಾಫ್ ಕಪ್ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿತ್ತು. ಶನಿವಾರ ಸಂಜೆ ಬಂಗಬಂಧು ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ ಭಾರೀ ಆಘಾತ ನೀಡಿದ ಮಾಲ್ಡೀವ್ಸ್ ಚಾಂಪಿಯನ್ ಆಗಿ ಮೆರೆದಾಡಿದೆ.

ಒಬ್ಬರನ್ನು ಹೊರತುಪಡಿಸಿ 23 ವರ್ಷಕ್ಕಿಂತ ಕೆಳಗಿರುವ ಯುವ ಆಟಗಾರರನ್ನೇ ಹೊಂದಿದ್ದ ಭಾರತ ಒಂದೂ ಪಂದ್ಯ ಸೋಲದೆ ಅಜೇಯವಾಗುಳಿದಿತ್ತು. ಆದರೆ, ಫೈನಲ್ ನಲ್ಲಿ ಮಾಲ್ಡೀವ್ಸ್ ಗೆ ಸೋತು ಚಾಂಪಿಯನ್ ಶಿಪ್ ಕಪ್ಪನ್ನು ಬಳುವಳಿಯಾಗಿ ನೀಡಿದೆ.

ಆದರೆ, ಸಂಪೂರ್ಣ ಶ್ರೇಯ ಮಾಲ್ಡೀವ್ಸ್ ತಂಡಕ್ಕೆ ಸಲ್ಲಬೇಕು. ಕಡೆಯವರೆಗೂ ಅದ್ಭುತ ಹೋರಾಟ ಮನೋಭಾವ ತೋರಿದ ಮಾಲ್ಡೀವ್ಸ್ ತಂಡ ಅರ್ಹವಾಗಿ ಚಾಂಪಿಯನ್ ತಂಡ ಎನ್ನಿಸಿದೆ.

ಒಂದೂ ಗೋಲನ್ನು ಬಿಟ್ಟುಕೊಡದಿದ್ದ ಮಾಲ್ಡೀವ್ಸ್ ಅಂತಿಮ ಹಂತದವರೆಗೂ 2-0 ಅಂತರದಿಂದ ಮುಂದೆ ಇತ್ತು. ಆದರೆ, ಕಟ್ಟಕಡೆಯ ಕ್ಷಣಗಳಲ್ಲಿ ಒಂದು ಗೋಲು ಗಳಿಸಿದ ಭಾರತ ಸೋಲಿನ ಅಂತರವನ್ನು ಒಂದು ಗೋಲಿನಿಂದ ಇಳಿಸಿತು. ಸುಮೀತ್ ಪಾಸ್ಸಿ ಅವರು ಗೋಲು ಗಳಿಸಿದರು.

ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಮಾಲ್ಡೀವ್ಸ್ ಗಳಿಸಿದ ಗೋಲುಗಳು ಭಾರತ ಮತ್ತೆ ಮೇಲೇಳದಂತೆ ಮಾಡಿದವು. ಮಾಲ್ಡೀವ್ಸ್ ಪರ ಇಬ್ರಾಹಿಂ ಹುಸೇನ್ ಅವರು 19ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ದ್ವಿತೀಯಾರ್ಧದಲ್ಲಿ ಅಲಿ ಫಾಸಿರ್ ಅವರು 73ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಯುವ ಭಾರತದ ತಂಡ ಅತ್ಯುತ್ತಮವಾಗಿಯೇ ಆಡಿದರೂ, ದ್ವೀಪ ರಾಷ್ಟ್ರದ ಆಟಗಾರರನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಭಾರತದ ವಿರುದ್ಧ ರಕ್ಷಣಾತ್ಮಕವಾಗಿಯೇ ಆಡುತ್ತಿದ್ದ ಮಾಲ್ಡೀವ್ಸ್ ಆಟಗಾರರು ನಂತರ ಭರ್ಜರಿ ಕೌಂಟರ್ ಅಟ್ಯಾಕ್ ಆರಂಭಿಸಿದರು. ಭಾರತಕ್ಕೆ ಹಲವು ಬಾರಿ ಗೋಲು ಗಳಿಸಲು ಅವಕಾಶ ಸಿಕ್ಕಿದ್ದರೂ ಗೋಲಾಗಿ ಪರಿವರ್ತನೆಯಾಗಲೇ ಇಲ್ಲ.

Story first published: Saturday, September 15, 2018, 22:11 [IST]
Other articles published on Sep 15, 2018
Read in English: India lose SAFF Cup title
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X