ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜ್ವರದ ಕಾರಣಕ್ಕೆ ಬಾಲಕಿಯನ್ನು ಮನೆ ಖಾಲಿ ಮಾಡಿಸಿದ ಮಾಲೀಕನ ವಿರುದ್ಧ ಬೈಚುಂಗ್ ಭುಟಿಯಾ ದೂರು

Sikkim Teen Evicted From Bengal Home Over ‘Regular Flu’: Bhaichung Bhutia

ಲಾಕ್‌ಡೌನ್ ಸಂದರ್ಭದಲ್ಲಿ ಬಾಡಿಗೆದಾರರನ್ನು ಮನೆಯಿಂದ ಹೊರಹಾಕಬಾರದು ಎಂದು ಸರ್ಕಾರವೇ ಹೇಳಿದೆ. ಆದರೆ ಅದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುವುದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಬಾಲಕಿಯೊಬ್ಬಳಿಗೆ ಜ್ವರ ಇದೆ ಎಂಬ ಕಾರಣಕ್ಕೆ ಮನೆಯ ಮಾಲೀಕ ಕುಟುಂಬವನ್ನೇ ಮನೆಯಿಂದ ಹಿರಹಾಕಿದ ಘಟನೆ ನಡೆದಿದೆ.

ಈ ಘಟನೆ ಬೆಳಕಿಗೆ ಬಂದಿದ್ದು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಬುಟಿಯಾ ಅವರಿಂದಾಗಿ. ಈ ವಿಚಾರವಾಗಿ ಸ್ವತಃ ಬೈಚುಂಗ್ ಭುಟಿಯಾ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಕ್ಕಿಂ ನಿವಾಸಿ ಅಥಿನಾ ಲಿಂಬುಗೆ ಲಘು ಜ್ವರ ಕಾಣಿಸಿಕೊಂಡಿತ್ತು. ನಂತರ ಆಕೆಯ ಮನೆಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ಅಥಿನಾ ಯಾರ ಸಹಾಯವಿಲ್ಲದೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಲೆದಾಡಿದಳು. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ, ಭುಟಿಯಾ ತನ್ನ ಸ್ನೇಹಿತರೊಂದಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಬಾಲಕಿಗೆ ಸಾಮಾನ್ಯ ಜ್ವರ ಇದ್ದು, ಅವಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಮನೆ ಮಾಲೀಕರು ಮನೆ ಬಾಡಿಗೆಗೆ ಕೊಡಲು ನಿರಾಕರಿಸಿದರು.ಭೂಟಿಯಾ ಮತ್ತು ಅವನ ಸ್ನೇಹಿತರು ಬಾಲಕಿಗೆ ವೈದ್ಯಕೀಯ ನೆರವು ನೀಡಿ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಹುಡುಗಿ ಚೇತರಿಸಿಕೊಂಡ ನಂತರ, ತಮ್ಮ ಬಾಡಿಗೆ ಮನೆಗೆ ತೆರಳಿದಾಗ ಮಾಲೀಕರು ಅವಳಿಗೆ ಮನೆಗೆ ಹೋಗಲು ಅನುಮತಿ ನೀಡಲಿಲ್ಲ.

ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಭುಟಿಯಾ, 'ಇಂತಹ ಕಷ್ಟದ ಸಮಯದಲ್ಲೂ ಜನರು ಪರಸ್ಪರ ಸಹಾಯ ಮಾಡದಿರುವುದು ದುರದೃಷ್ಟಕರ. ಈ ಹುಡುಗಿ ಸಿಕ್ಕಿಂನಿಂದ ಬಂದಿದ್ದು, ಸಾಕಷ್ಟು ನೋವು ಅನುಭವಿಸಿದ್ದಾರೆ. ನಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ. ಅವಳಿಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Story first published: Sunday, April 19, 2020, 23:49 [IST]
Other articles published on Apr 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X