ಏಷ್ಯಾಕಪ್ 2022: ಭಾರತಕ್ಕೆ ನಾಕೌಟ್ ಹಾದಿ ಕಠಿಣ: ಇಂಡೋನೇಷ್ಯಾ ವಿರುದ್ಧ ದೊಡ್ಡ ಗೆಲುವಿನ ಮೇಲೆ ಕಣ್ಣು!

ಈ ಬಾರಿಯ ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ಗೆ ಸಾಕಷ್ಟು ನಿರೀಕ್ಷೆಯೊಂದಿಗೆ ಕಾಲಿಟ್ಟ ಭಾರತ ಆರಂಭಿಕ ಎರಡು ಪಂದ್ಯಗಳಲ್ಲಿಯೂ ನಿರಾಸೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಡ್ರಾ ಹಾಗೂ ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ಈಗ ನಾಕೌಟ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಹಿಂದುಳಿದಿದೆ. ಸದ್ಯ ಭಾರತ ತಂಡ ತನ್ನ ಸ್ವಂತ ಸಾಮರ್ಥ್ಯಗೊಂದಿಗೆ ಇತರ ತಂಡಗಳ ಫಲಿತಾಂಶವನ್ನು ಕೂಡ ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದೆ.
ಏಷ್ಯಾ ಕಪ್‌ನ ಹಾಲಿ ಚಾಂಪಿಯನ್ ತಂಡ ಕೂಡ ಆಗಿರುವ ಭಾರತ ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿತ್ತು. ಹೀಗಾಗಿ ಸಹಜವಾಗಿಯೇ ಈ ಬಾರಿಯ ಏಷ್ಯ ಕಪ್ ಟೂರ್ನಿಯಲ್ಲಿ ಭಾರತದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಭಾರತ ನೀಡಿದ ಪ್ರದರ್ಶನ ನಿರಾಸೆ ಮೂಡಿಸಿದೆ.

ಪಾಕಿಸ್ತಾನ, ಜಪಾನ್ ವಿರುದ್ಧ ನೀರಸ ಪ್ರದರ್ಶನ
ಲೀಗ್ ಹಂತದಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ತಂಡದಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮುಖಾಮುಖಿಯಾದ ಭಾರತ ಹಾಕಿ ತಂಡ ಅಂತಿಮ ಹಂತದಲ್ಲಿ ಒಂದು ಗೋಲು ಗಳಿಸುವ ಮೂಲಕ 1-1 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ನಂತರ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ 2-5 ಗೋಲುಗಳ ಅಂತರದ ಸೋಲು ಅನುಭವಿಸುವ ಮೂಲಕ ನಾಕೌಟ್ ಹಾದಿಯನ್ನು ಕಠಿಣಗೊಳಿಸಿದೆ.

ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ
ಜಪಾನ್ ವಿರುದ್ಧದ ಸೋಲಿನ ನಂತರ ಭಾರತ ಪೂಲ್ ಎ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಎರಡು ಸ್ಥಾನಗಳಲ್ಲಿ 6 ಅಂಕಗಳಿಸಿರುವ ಜಪಾನ್ ಹಾಗೂ 4 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ತಂಡವಿದೆ. ಲೀಗ್ ಹಂತದಲ್ಲಿ ಭಾರತಕ್ಕೆ ಒಂದು ಪಂದ್ಯ ಮಾತ್ರವೇ ಬಾಕಿಯಿದ್ದು ಈ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಮಾತ್ರವಲ್ಲದೆ ಪಾಕಿಸ್ತಾನ ತಂಡ ಜಪಾನ್ ತಂಡವನ್ನು ಗುರುವಾರ ಎದುರಿಸಲಿದ್ದು ಈ ಪಂದ್ಯದಲ್ಲಿ ಜಪಾನ್ ಗೆಲುವು ಸಾಧಿಸಿದರೆ ಮಾತ್ರವೇ ಭಾರತಕ್ಕೆ ಮುಂದಿನ ಹಂತಕ್ಕೇರುವ ಅವಕಾಶ ದೊರೆಯಲಿದೆ.

ಭಾರತ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ
ಈ ಬಾರಿಯ ಏಷ್ಯಾ ಕಪ್ ಹಾಕಿ ಟೂರ್ನಿಗೆ ಭಾರತ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಕಣಕ್ಕಿಳಿದಿಲ್ಲ. ಹೆಚ್ಚಾಗಿ ಯುವ ಆಟಗಾರನ್ನೇ ಹೊಂದಿದೆ ಭಾರತೀಯ ತಂಡ. ಅನನುಭವಿಗಳೇ ಹೆಚ್ಚಾಗಿದ್ದು ಅಂಡರ್-19 ತಂಡದಲ್ಲಿದ್ದ ಆಟಗಾರರ ಈ ಟೂರ್ನಿಯಲ್ಲಿ ಹೆಚ್ಚಿನ ಅವಕಾಶವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಲು ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications