For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಹಾಂಕಾಂಗ್ ಎದುರು ಪುರುಷರ ಹಾಕಿ ತಂಡ ದಾಖಲೆ ಜಯ

Asian Games 2018: India beat Hong Kong 26-0

ಜಕಾರ್ತಾ, ಆಗಸ್ಟ್ 22: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಅಪೂರ್ವ ಸಾಧನೆಗಳನ್ನು ಮೆರೆಯುತ್ತಿದೆ. ಈ ನಡುವೆ ಭಾರತದ ಪುರುಷರ ಹಾಕಿ ತಂಡ ಹಾಂಕಾಂಗ್ ಎದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಬುಧವಾರ ನಡೆದ ಗ್ರೂಪ್ ಎಯ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಂಕಾಂಗ್ ತಂಡವನ್ನು ಬರೋಬ್ಬರಿ 26-0ಯಿಂದ ಸೋಲಿಸಿ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಯುಎಸ್ಎ ಎದುರು 24-1 ಅಂತರದ ಗೋಲ್ ದಾಖಲಿಸಿದ ದಾಖಲೆ ಭಾರತದ ಹೆಸರಿನಲ್ಲಿತ್ತು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಯುಎಸ್ಎ ವಿರುದ್ಧ ಭಾರತ 24-1 ಅಂತರದ ಗೋಲ್ ದಾಖಲಿಸಿದ್ದು ಸುಮಾರು 86 ವರ್ಷಗಳ ಹಿಂದೆ ಅನ್ನೋದು ವಿಶೇಷ. 1932ರಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ನಾಯಕತ್ವದ ಭಾರತದ ತಂಡ ಯುಎಸ್ಎ ವಿರುದ್ಧ 24-1ರ ಗೋಲ್ ದಾಖಲಿಸಿತ್ತು. ಹೀಗಾಗಿ ಭಾರತ ತನ್ನ ಹಳೆ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದ ಪಂದ್ಯವೊಂದರಲ್ಲಿ ತಂಡವೊಂದರ ವಿರುದ್ಧ ಅಧಿಕ ಗೋಲ್ ಸಿಡಿಸಿದ ದಾಖಲೆ ಮಾತ್ರ ನ್ಯೂಜಿಲ್ಯಾಂಡ್ ತಂಡದ ಹೆಸರಿನಲ್ಲಿದೆ. 1994ರಲ್ಲಿ ನ್ಯೂಜಿಲ್ಯಾಂಡ್ ತಂಡ ಸಮೋವಾ ಎದುರು ಭರ್ಜರಿ 36-1ರ ಗೋಲ್ ಬಾರಿಸಿತ್ತು.

Story first published: Wednesday, August 22, 2018, 21:33 [IST]
Other articles published on Aug 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+