ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Hockey World Cup 2023: ಪೆನಾಲ್ಟಿ ಗೋಲು ದಾಖಲಿಸಲು ವಿಫಲ, ಭಾರತ-ಇಂಗ್ಲೆಂಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

Hockey World Cup 2023: India And England Match End With Goalless Draw

ಜನವರಿ 15ರ ಭಾನುವಾರ ರಾತ್ರಿ ರೂರ್ಕೆಲಾದಲ್ಲಿ ನಡೆದ ಹಾಕಿ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 60 ನಿಮಿಷಗಳ ಎರಡೂ ತಂಡಗಳು ಮೈದಾನದಲ್ಲಿ ಕಾದಾಡಿದರೂ ಒಂದೇ ಒಂದು ಗೋಲು ಕೂಡ ದಾಖಲಿಸಲು ಸಾಧ್ಯವಾಗಲಿಲ್ಲ.

ವಿಶ್ವ ಹಾಕಿ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಮತ್ತು ಆರನೇ ರ್‍ಯಾಂಕ್‌ನ ಇಂಗ್ಲೆಂಡ್ ನಡುವಿನ ರೋಚಕ ಹೋರಾಟ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದರು. ಕೊನೆಯದಾಗಿ ಯಾವುದೇ ಗೋಲು ದಾಖಲಾಗದೆ ಡ್ರಾನಲ್ಲಿ ಅಂತ್ಯವಾಗಿದ್ದು ಕೊಂಚ ಬೇಸರ ತರಿಸಿದೆ.

Hockey World Cup 2023: ಸ್ಪೇನ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತ ಶುಭಾರಂಭHockey World Cup 2023: ಸ್ಪೇನ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಭಾರತ ಶುಭಾರಂಭ

ಭಾರತ ಹಾಕಿ ವಿಶ್ವಕಪ್‌ 2023ರ ಮೊದಲನೇ ಪಂದ್ಯದಲ್ಲಿ 2-0 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಿತ್ತು. ಮತ್ತೊಂದೆಡೆ ಇಂಗ್ಲೆಂಡ್‌ ಕೂಡ ತನ್ನ ಮೊದಲನೇ ಪಂದ್ಯದಲ್ಲಿ ವೇಲ್ಸ್ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತ್ತು.

ಭಾರತ ತಂಡ ಕ್ವಾರ್ಟರ್‌ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಬೇಕೆಂದರೆ, ಗುಂಪಿನ ಅಂಕಪಟ್ಟಿಯ ಮೊದಲನೇ ಸ್ಥಾನ ಪಡೆಯಬೇಕಾಗಿದೆ. ರೂರ್ಕೆಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯ ಡ್ರಾಗೊಂಡ ನಂತರ, ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

Hockey World Cup 2023: India And England Match End With Goalless Draw

ವೇಲ್ಸ್ ವಿರುದ್ಧ ಗೆಲ್ಲಲೇಬೇಕಿದೆ ಭಾರತ

ಆಡಿದ ಎರಡು ಪಂದ್ಯಗಳಲ್ಲಿ ಭಾರತ ಒಂದು ಗೆಲುವು ಒಂದು ಡ್ರಾ ಮಾಡಿಕೊಂಡಿದೆ. ಇಂಗ್ಲೆಂಡ್ ಕೂಡ ಒಂದು ಗೆಲುವು, ಒಂದು ಪಂದ್ಯ ಡ್ರಾ ಮಾಡಿಕೊಂಡಿದ್ದರು. ವೇಲ್ಸ್ ವಿರುದ್ಧ 5-0 ಅಂತರದ ಗೋಲುಗಳ ಜಯ ಸಾಧಿಸಿದ ಕಾರಣ ಅವರು ಅಗ್ರಸ್ಥಾನದಲ್ಲಿದ್ದಾರೆ.

ಭಾರತ ತನ್ನ ಮುಂದಿನ ಪಂದ್ಯವನ್ನು ವೇಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ನೇತೃತ್ವದ ಭಾರತ ತಂಡ ಹೆಚ್ಚಿನ ಗೋಲು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಯೋಜನೆಯಲ್ಲಿದೆ.

ಡಿ ಪೂಲ್‌ನಲ್ಲಿ ಭಾರತ ಎರಡು ಅಥವಾ ಮೂರನೇ ಸ್ಥಾನ ಪಡೆದರೆ, ಮುಂದಿನ ಹಂತಕ್ಕೆ ಪ್ರವೇಶ ಪಡೆಯಲು ಕ್ರಾಸ್ ಓವರ್ ಪಂದ್ಯಗಳನ್ನು ಆಡಬೇಕಾಗುತ್ತದೆ. ಭಾರತವು ಪೂಲ್‌ನಲ್ಲಿ ಎರಡನೇ ಸ್ಥಾನ ಪಡೆದರೆ, ಅವರು ನೆದರ್‌ಲ್ಯಾಂಡ್ಸ್, ನ್ಯೂಜಿಲೆಂಡ್, ಚಿಲಿ ಮತ್ತು ಮಲೇಷ್ಯಾ ಹೊಂದಿರುವ ಪೂಲ್ ಸಿಯಲ್ಲಿ ಮೂರನೇ ಸ್ಥಾನ ಪಡೆದ ತಂಡದ ವಿರುದ್ಧ ಆಡಬೇಕಾಗುತ್ತದೆ. ಭಾರತವು ಮೂರನೇ ಸ್ಥಾನ ಪಡೆದರೆ, ಅವರು ಪೂಲ್ ಸಿ ನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸುತ್ತಾರೆ.

ಜನವರಿ 19 ರಂದು ಭುವನೇಶ್ವರದಲ್ಲಿ ವೇಲ್ಸ್ ವಿರುದ್ಧ ಭಾರತ ಅಂತಿಮ ಗುಂಪಿನ ಪಂದ್ಯ ಆಡಲಿದೆ. ಇಂಗ್ಲೆಂಡ್ ಸ್ಪೇನ್ ವಿರುದ್ಧ ಸೆಣೆಸಲಿದೆ.

Story first published: Sunday, January 15, 2023, 22:34 [IST]
Other articles published on Jan 15, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X