ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ಶ್ರೇಷ್ಠ Ranking ಸಾಧನೆ ತೋರಿದ ಭಾರತದ ಹಾಕಿ ಪುರುಷರು

Indian mens hockey team achieves all-time highest ranking, jumps to 4th spot

ಲೌಸನ್ನೆ, ಮಾರ್ಚ್ 3: ಭಾರತದ ಪರುಷರ ಹಾಕಿ ತಂಡ ವಿಶ್ವ ರ್ಯಾಂಕಿಂಗ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆ ತೋರಿದೆ. ಇದೇ ಮೊದಲ ಬಾರಿಗೆ ಭಾರತ ತಂಡ ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಫೆಡರೇಶನ್ ಇಂಟರ್ ನ್ಯಾಷನಲ್ ಹಾಕಿ (ಎಫ್‌ಐಎಚ್‌) ಸೋಮವಾರ (ಮಾರ್ಚ್ 2) ಪ್ರಕಟಿಸಿರುವ ರ್ಯಾಂಕ್ ಪಟ್ಟಿಯಲ್ಲಿ ಭಾರತದ ಪುರುಷರು ಉತ್ತಮ ಶ್ರೇಯಾಂಕದಲ್ಲಿ ಮಿನುಗಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಬೆನ್ನಿಗೆ ನಿಂತ ಪಾಕ್‌ ಮಾಜಿ ನಾಯಕಟೀಮ್ ಇಂಡಿಯಾ ನಾಯಕ ವಿರಾಟ್ ಬೆನ್ನಿಗೆ ನಿಂತ ಪಾಕ್‌ ಮಾಜಿ ನಾಯಕ

ಎರಡನೇ ಆವೃತ್ತಿಯ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಟೂರ್ನಿಯ ಆರಂಭಿಕ ಮೂರು ಸುತ್ತುಗಳಲ್ಲಿ ಭಾರತದ ಪುರುಷರ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ಈ ಮೊದಲು ಐದನೇ ಶ್ರೇಯಾಂಕದಲ್ಲಿದ್ದ ತಂಡ, ನಾಲ್ಕನೇ ಶ್ರೇಯಾಂಕಕ್ಕೆ ಜಿಗಿತ ಕಂಡಿದೆ.

ಕೊರೊನಾವೈರಸ್ ಭೀತಿ: ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದಕ್ಕೆಕೊರೊನಾವೈರಸ್ ಭೀತಿ: ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದಕ್ಕೆ

ಇದಕ್ಕಿಂತ ಖುಷಿಯ ಇನ್ನೊಂದು ಸಂಗತಿಯೆಂದರೆ ಒಲಿಂಪಿಕ್ಸ್ ಚಾಂಪಿಯನ್ಸ್ ಅರ್ಜೆಂಟೀನಾವನ್ನು ಭಾರತ ಐದನೇ ಸ್ಥಾನಕ್ಕೆ ತಳ್ಳಿದೆ. ಸದ್ಯ ಅಗ್ರ ಸ್ಥಾನದಲ್ಲಿ ವಿಶ್ವ ಚಾಂಪಿಯನ್ಸ್ ಬೆಲ್ಜಿಯಂ ಇದ್ದರೆ, ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ, ಮೂರನೇ ಸ್ಥಾನದಲ್ಲಿ ನೆದರ್‌ಲ್ಯಾಂಡ್ಸ್‌ ತಂಡಗಳಿವೆ.

ತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋ

ಐದಕ್ಕಿಂತ ಕೆಳಗೆ ಆದರೆ ಹತ್ತರೊಳಗಿನ ಶ್ರೇಯಾಂಕಗಳಲ್ಲಿ ಅರ್ಜೆಂಟೀನಾ, ಜರ್ಮನಿ, ಇಂಗ್ಲೆಂಡ್, ನ್ಯೂಜಿಲೆಂಡ್, ಸ್ಪೇನ್ ಮತ್ತು ಕೆನಡಾ ದೇಶಗಳಿವೆ. ಮಹಿಳಾ ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ನೆದರ್‌ಲ್ಯಾಂಡ್ಸ್‌, ಆಸ್ಟ್ರೇಲಿಯಾ, ಅರ್ಜೆಂಟೀನಾ ಅಗ್ರ ಮೂರರಲ್ಲಿ ಸ್ಥಾನ ಪಡೆದಿವೆ.

Story first published: Tuesday, March 3, 2020, 0:11 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X