ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್‌ ಸೀಸನ್ 8ಕ್ಕೆ ಉಳಿಸಿಕೊಳ್ಳಲಾದ ಆಟಗಾರರ ಬಣದಲ್ಲಿ 59 ಪ್ಲೇಯರ್ಸ್

59 players retained for Pro Kabaddi League season 8

ಮುಂಬೈ: ಕೊರೊನಾ ವೈರಸ್ ಕಾಟದಿಂದಾಗಿ ಬದಿಗೆ ಸರಿದಿದ್ದ ಭಾರತದ ಮಣ್ಣಿನ ಕ್ರೀಡೆ ಪ್ರೊ ಕಬಡ್ಡಿ ಲೀಗ್ ಮತ್ತೆ ಬರಲಿದೆ. ಪ್ರೊ ಕಬಡ್ಡಿ ಲೀಗ್‌ ಸೀಸನ್ 8 ಮುಂಬರುವ ಡಿಸೆಂಬರ್‌ನಿಂದ ಪ್ರಾರಂಭಗೊಳ್ಳಲಿದೆ. ಈ ಸೀಸನ್‌ಗೆ ಸಂಬಂಧಿಸಿ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಬೇರೆ ಬೇರೆ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯ ಮಾಹಿತಿ ನೀಡಿದೆ. ಈ ಪಟ್ಟಿಯಲ್ಲಿ ಒಟ್ಟು 59 ಆಟಗಾರರಿದ್ದಾರೆ.

ಐಪಿಎಲ್‌ ಜಾಹೀರಾತಿನಲ್ಲಿ ಮಿಂಚಿದ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ: ವಿಡಿಯೋಐಪಿಎಲ್‌ ಜಾಹೀರಾತಿನಲ್ಲಿ ಮಿಂಚಿದ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ: ವಿಡಿಯೋ

ಎಲೈಟ್ ರಿಟೇನ್ಡ್ ಪ್ರೇಯರ್‌ಗಳಲ್ಲಿ 22 ಮಂದಿ, ಯಂಗ್ ಪ್ಲೇಯರ್ಸ್ ವಿಭಾಗದಲ್ಲಿ 6 ಮಂದಿ, ನ್ಯೂ ಯಂಗ್ ಪ್ಲೇಯರ್ಸ್ ವಿಭಾಗದಲ್ಲಿ 32 ಹೀಗೆ ಒಟ್ಟು 59 ಆಟಗಾರರನ್ನು ಪ್ರೊ ಕಬಡ್ಡಿ ಲೀಗ್‌ ಸೀಸನ್ 8ಕ್ಕೆ ಉಳಿಸಿಕೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಟೂರ್ನಿಗಾಗಿ ತಂಡಗಳು ಒಟ್ಟು ಸೇರುವ ಪ್ರಕ್ರಿಯೆ ನಡೆಯುತ್ತಿವೆ," ಎಂದು ಪ್ರೊ ಕಬಡ್ಡಿ ಲೀಗ್ ತಿಳಿಸಿದೆ.

"ಉಳಿಸಿಕೊಳ್ಳಲಾಗದ ಆಟಗಾರರು ಮತ್ತು ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 6 ಮತ್ತು 7ರಲ್ಲಿ ತಂಡದಲ್ಲಿದ್ದ ಎಲ್ಲಾ ಆಟಗಾರರು ಆಗಸ್ಟ್ 29ರಿಂದ 31ರ ವರೆಗೆ ನಡೆಯಲಿರುವ ಹರಾಜಿನಲ್ಲಿ ಪಾಲ್ಗೊಳ್ಳಿದ್ದಾರೆ," ಎಂದು ಪ್ರೊ ಕಬಡ್ಡಿ ಲೀಗ್‌ ಮಾಹಿತಿ ನೀಡಿದೆ. ಸ್ಟಾರ್ ಆಟಗಾರರಾದ ಪರ್ದೀಪ್ ನರ್ವಾಲ್, ದೀಪಕ್ ಹೂಡಾ, ರಾಹುಲ್ ಚೌಧರಿ ಮೊದಲಾದವರು ಈ ಬಾರಿಯೂ ಮಿಂಚಲಿದ್ದಾರೆ.

IPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ತನ್ನ ನಾಯಕ ಮಣೀಂದರ್ ಸಿಂಗ್ ಮತ್ತು ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್ ಅವರನ್ನು ಉಳಿಸಿಕೊಂಡಿದೆ. ಕೆಪಿಎಲ್ 7ನಲ್ಲಿ ಹೆಚ್ಚು ಪಾಯಿಂಟ್ಸ್‌ ಗಳಿಸಿದ್ದ ಪವನ್ ಕುಮಾರ್ ಶೆಹರಾವತ್ ಅವರನ್ನು ಬೆಂಗಳೂರು ಬುಲ್ಸ್ ಉಳಿಸಿಕೊಂಡಿದೆ. ಇನ್ನು ಡಬಾಂಗ್ ಡೆಲ್ಲಿ ತಂಡ ನವೀನ್ ಕುಮಾರ್ ಅವರನ್ನು ಯುವ ಆಟಗಾರರ ವಿಭಾಗದಲ್ಲಿ ಉಳಿಸಿಕೊಂಡಿದೆ.

ಇನ್ನು ಫಝಲ್ ಅತ್ರಾಚಲಿ ಅವರನ್ನು ಯು ಮುಂಬಾ, ಪರ್ವೇಶ್ ಭೈನ್ಸ್ವಾಲ್ ಮತ್ತು ಸುನೀಲ್ ಕುಮಾರ್ ಅವರನ್ನು ಗುಜರಾತ್ ಜೈಂಟ್ಸ್, ವಿಕಾಶ್ ಖಂಡೋಲಾ ಅವರನ್ನು ಹರಿಯಾಣ ಸ್ಟೀಲರ್ಸ್ ಮತ್ತು ನಿತೇಶ್ ಕುಮಾರ್ ಅವರನ್ನು ಯು.ಪಿ. ಯೋಧ ತನ್ನ ತಂಡದಲ್ಲೇ ಉಳಿಸಿಕೊಂಡಿದೆ.

Story first published: Saturday, August 21, 2021, 10:15 [IST]
Other articles published on Aug 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X