ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಕಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕುಂದಾಪುರದ ರಿಷಾಂಕ್ ದೇವಾಡಿಗ

Nammura Pratibhe: Indian Kabaddi player Rishank Devadiga life and his achievement

ಕಬಡ್ಡಿ ಕ್ರೀಡೆಯಲ್ಲಿ ಕರ್ನಾಟಕದ ಸಾಕಷ್ಟು ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಮಿಂಚಿದ್ದಾರೆ. ಈ ಪೈಕಿ ಕುಂದಾಪುರದ ಗಂಗೊಳ್ಳಿಯ ರಿಷಾಂಕ್ ದೇವಾಡಿಗ ಕೂಡ ಒಬ್ಬರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ರಿಷಾಂಕ್ ದೇವಾಡಿಗ ಪ್ರೋ ಕಬಡ್ಡಿ ಲೀಗ್ ಮೂಲಕ ಸ್ಟಾರ್ ಕಬಡ್ಡಿ ಆಟಗಾರ ಎನಿಸಿಕೊಂಡಿದ್ದು ಕಬಡ್ಡಿ ಪ್ರೇಮಿಗಳ ಮನೆಮಾತಾಗಿದ್ದಾರೆ.

ಬಡತನದಲ್ಲಿ ಬೆಳೆದ ರಿಷಾಂಕ್ ದೇವಾಡಿಗ ಬಾಲ್ಯದಿಂದಲೇ ಕಬಡ್ಡಿ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ಈ ಆಸಕ್ತಿಯ ಮೇಲೆ ಸತತ ಪರಿಶ್ರಮ ಹಾಕಿತ್ತಾ ಸಾಗಿದ ರಿಷಾಂಕ್ ಈ ಕ್ರೀಡೆಯಲ್ಲಿಯೇ ಸಾಧನೆ ಮಾಡುತ್ತಾ ಸಾಗಿದ್ದಾರೆ. ಇದೀಗ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸ್ಟಾರ್ ಆಟಗಾರರ ಪೈಕಿ ರಿಷಾಂಕ್ ದೇವಾಡಿಗ ಕೂಡ ಒಬ್ಬರಾಗಿದ್ದಾರೆ. ಹಾಗಾದರೆ ರಿಷಾಂಕ್ ದೇವಾಡಿಗ ಅವರ ಸಾಧನೆಯ ಹಾದಿ ಹೇಗಿತ್ತು. ಈ ಬಗೆಗಿನ ಸ್ಪೂರ್ತಿದಾಯಕ ಮಾಹಿತಿ ಇಲ್ಲಿದೆ..

ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್

7ನೇ ವಯಸ್ಸಿನಲ್ಲಿ ಕಬಡ್ಡಿ ಬಗ್ಗೆ ಒಲವು

7ನೇ ವಯಸ್ಸಿನಲ್ಲಿ ಕಬಡ್ಡಿ ಬಗ್ಗೆ ಒಲವು

ರಿಷಾಂಕ್ ತಮ್ಮ 7ನೇ ವಯಸ್ಸಿನಲ್ಲಿ ಕಬಡ್ಡಿ ಆಡಲು ಆರಂಭಿಸುವ ಮೂಲಕ ಈ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಆ ಬಾಲ್ಯದಲ್ಲಿಯೇ ತಮ್ಮ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಮಿಂಚಲು ಆರಂಬಿಸಿದ್ದರು. ನಂತರ ಶಾಲೆಗೆ ಹೋಗಲು ಆರಂಬಿಸಿದ ಬಳಿಕ ರಿಷಾಂಕ್ ಕಬಡ್ಡಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದರು. ತನ್ನ ವಯಸ್ಸಿನ ಇತರ ಆಟಗಾರರಿಗಿಂತ ರಿಆಂಕ್ ಅವರ ಸಾಮರ್ಥ್ಯ ಉತ್ಕೃಷ್ಟಮಟ್ಟದಲ್ಲಿದ್ದದ್ದು ಎಲ್ಲರ ಗಮನಕ್ಕೂ ಬಂದಿತ್ತು. ಇಂತಾ ಸಂದರ್ಭದಲ್ಲಿ ಮನೆಯಲ್ಲಿ ಆರ್ಥಿಕ ಸಮಸ್ಯೆಯೂ ಕಾಣಿಸಿಕೊಂಡಾಗ ಕಬಡ್ಡಿ ಹಾಗೂ ವಿದ್ಯಾಭ್ಯಾಸದ ಕಡೆಗೆ ಒಟ್ಟಾಗಿ ಗಮನ ನೀಡುವುದು ರಿಷಾಂಕ್ ಪಾಲಿಗೆ ಸುಲಭದ ಸವಾಲಾಗಿರಲಿಲ್ಲ.

ಬಡತನದಲ್ಲಿ ಬೆಳೆದ ರಿಷಾಂಕ್

ಬಡತನದಲ್ಲಿ ಬೆಳೆದ ರಿಷಾಂಕ್

ಕರ್ನಾಟಕ ಮೂಲದವರಾದರೂ ರಿಷಾಂಕ್ ಹುಟ್ಟಿದ್ದು ಮುಂಬೈನಲ್ಲಿ. ಈಗ ಕುಂದಾಪುರದ ಗಂಗೊಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣ ರಿಷಾಂಕ್ ಬಾಲ್ಯ ಸವಾಲಿನಿಂದ ಕೂಡಿತ್ತು. ಆದರೆ ರಿಷಾಂಕ್ ದೇವಾಡಿಗ ಅವರ ತಾಯಿ ಬ್ಯೂಟಿ ಪಾರ್ಲರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಾ ರಿಷಾಂಕ್ ಹಾಗೂ ರಿಷಾಂಕ್ ಸೋದರಿಯ ವಿಸ್ಯಾಭ್ಯಾಸಕ್ಕೆ ಯಾವುದೇ ಅಡಚನೆಯಾಗದಂತೆ ನೋಡಿಕೊಂಡರು. ಮಕ್ಕಳ ವಿದ್ಯಾಭ್ಯಾಸದ ಮೇಲೆ ಹೆಚ್ಚಿನ ಒತ್ತು ನೀಡಿದ್ದ ರಿಷಾಂಕ್ ತಾಯಿಗೆ ಮಗ ಕಬಡ್ಡಿ ಮೇಲೆ ಆಸಕ್ತಿ ತೋರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು. ದೈಹಿಕ ಕ್ರೀಡೆಯಾಗಿರುವ ಕಾರಣ ಮಗನಿಗೆ ಗಾಯಗಳಾಗಬಹುದು, ವಿದ್ಯಾಭ್ಯಾಸದ ಮೇಲೆ ಗಮನ ಕಡಿಮೆಯಾಗಬಹುದು ಎಂಬ ಆತಂಕ ಅವರಿಗಿತ್ತು. ಆದರೆ ರಿಷಾಂಕ್ ಎವೆರಡನ್ನೂ ಉತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದರು. ಕಬಡ್ಡಿ ಆಡುತ್ತಲೇ ರಿಷಾಂಕ್ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು.

ಹೋಟೆಲ್‌ನಲ್ಲಿ ವೈಟರ್ ಆಗಿ ಕೆಲಸ

ಹೋಟೆಲ್‌ನಲ್ಲಿ ವೈಟರ್ ಆಗಿ ಕೆಲಸ

ಇನ್ನು ಕುಟುಂಬದಲ್ಲಿ ಆರ್ಥಿಕವಾಗಿ ಸಾಕಷ್ಟು ಸವಾಲುಗಳು ಇರುವುದನ್ನು ಗಮನಿಸಿದ ರಿಷಾಂಕ್ ತನ್ನ ಖರ್ಚಿಗೆ ಬೇಕಾದ ಹಣ ಸಂಪಾದಿಸುವ ಸಲುವಾಗಿ ಹೋಟೆಲ್‌ಗೆ ಸೇರಿಕೊಂಡಿದ್ದರು. ವೈಟರ್ ಆಗಿಯೂ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದ ಅವರು ತಮ್ಮ ಪ್ರಾಥಮಿಕ ಖರ್ಚುಗಳನ್ನು ತಾವೇ ನೋಡಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಅದಾದ ಮುಂಬೈ ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದ ರಿಷಾಂಕ್ ದೇನಾ ಬ್ಯಾಂಕ್ ಪರವಾಗಿ ಆಡಿದ್ದರು. ಬಳಿಕ ಕೆಲಸ ತೊರೆದ ಅವರು ಕಬಡ್ಡಿಗೆ ಪೂರ್ಣ ಪ್ರಮಾಣದ ಗಮನ ನಿಡಲು ಆರಂಭಿಸಿದರು

ಭಾರತವನ್ನು ಪ್ರತಿನಿಧಿಸಿದ ರಿಷಾಂಕ್, ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚು

ಭಾರತವನ್ನು ಪ್ರತಿನಿಧಿಸಿದ ರಿಷಾಂಕ್, ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚು

2015ರಲ್ಲಿ ರಿಷಾಂಕ್ ದೇವಾಡಿಗ ಭಾರತ ತಂಡದ ಪರವಾಗಿ ಆಡುವ ಅವಕಾಶವನ್ನು ಗಳಿಸಿದರು. 2018ರಲ್ಲಿ ದುಬೈನಲ್ಲಿ ನಡೆದ ಕಬಡ್ಡಿ ಮಾಸ್ಟರ್ಸ್ ಟೂರ್ನಿ ವೃತ್ತಿ ಜೀವನದ ಪ್ರಮುಖ ಘಟ್ಟವಾಗಿತ್ತು. ಈ ಟೂರ್ನಿಯನ್ನು ಭಾರತ ಗೆದ್ದಾಗ ಗೆದ್ದ ತಂಡದ ಭಾಗವಾಗಿದ್ದರು ರಿಷಾಂಕ್ ದೇವಾಡಿಗ. ಇನ್ನು ಪ್ರೊ ಕಬಡ್ಡಿ ಲೀಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ರಿಷಾಂಕ್ ಸ್ಟಾರ್ ರೈಡರ್ ಆಗಿ ಮಿಂಚಿದ್ದಾರೆ. ಪ್ರಸ್ತುತ ಬೆಂಗಾಲ್ ವಾರಿಯರ್ಸ್ ತಂಡದ ಭಾಗವಾಗಿದ್ದಾರೆ ರಿಷಾಂಕ್ ದೇವಾಡಿಗ.

Story first published: Tuesday, July 5, 2022, 19:16 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X