ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಗೂಳಿಗಳ ಆರ್ಭಟಕ್ಕೆ ಹೆದರಿದ ತಮಿಳ್ ತಲೈವಾಸ್, ಪಾಯಿಂಟ್‌ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ

PKL 2022: Bengaluru Bulls Beat Tamil Thalaivas To Become Topper In Points Table

ಬೆಂಗಳೂರು ಗೂಳಿಗಳ ಆರ್ಭಟಕ್ಕೆ ತಮಿಳ್ ತಲೈವಾಸ್ ಫುಲ್ ಸೈಲೆಂಟ್ ಆಯಿತು. ಪುಣೆಯ ಬಾಲೆವಾಡಿಯ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ತಲೈವಾಸ್ ವಿರುದ್ಧ 40-34 ಅಂಕಗಳ ಜಯ ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ರೈಡರ್ ಭರತ್ 14 ಅಂಕಗಳೊಂದಿಗೆ ಬೆಂಗಳೂರು ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನೀರಜ್ ನರ್ವಾಲ್ ಮತ್ತು ಸೌರಭ್ ನಂದಲ್ ಅಂತಿಮ ಕ್ಷಣಗಳಲ್ಲಿ ಮಿಂಚುವ ಮೂಲಕ ಬೆಂಗಳೂರು ಜಯವನ್ನು ಖಚಿತಪಡಿಸಿದರು.

ಭರತ್ ಮಿಂಚಿನ ದಾಳಿಯ ಸಹಾಯದಿಂದ ಬುಲ್ಸ್ ಮೊದಲ ಐದು ನಿಮಿಷಗಳಲ್ಲಿ ತಲೈವಾಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಬೆಂಗಳುರು ಬುಲ್ಸ್ ಸಂಪೂರ್ಣ ಪ್ರಾಬಲ್ಯ ಸಾಧಿಸುತ್ತದೆ ಎಂದುಕೊಂಡಿತ್ತಾದರೂ, ತಲೈವಾಸ್ ನಂತರ ಉತ್ತಮ ಹೋರಾಟ ಮಾಡಿತು. ನರೇಂದರ್ ರೈಡಿಂಗ್‌ನಲ್ಲಿ ನಿರಂತರ ಪಾಯಿಂಟ್ ಪಡೆಯುವ ಮೂಲಕ ಬುಲ್ಸ್ ತಂಡಕ್ಕೆ ಪ್ರತಿರೋಧ ತೋರಿದರು.

ಐಪಿಎಲ್‌ನಿಂದ ನನ್ನ ಆಟ ಸುಧಾರಿಸಿದೆ ಮತ್ತೆ ಐಪಿಎಲ್‌ ಆಡುತ್ತೇನೆ ಎಂದ ಫೈನಲ್ ಪಂದ್ಯದ ಹೀರೋಐಪಿಎಲ್‌ನಿಂದ ನನ್ನ ಆಟ ಸುಧಾರಿಸಿದೆ ಮತ್ತೆ ಐಪಿಎಲ್‌ ಆಡುತ್ತೇನೆ ಎಂದ ಫೈನಲ್ ಪಂದ್ಯದ ಹೀರೋ

PKL 2022: Bengaluru Bulls Beat Tamil Thalaivas To Become Topper In Points Table

ದ್ವಿತಿಯಾರ್ಧ ಆರ್ಭಟಿಸಿದ ಗೂಳಿಗಳು

ಮೊದಲಾರ್ಧದ ಅಂತಿಮ ಐದು ನಿಮಿಷಗಳಲ್ಲಿ ಬುಲ್ಸ್ ತಂಡದ ಮೇಲೆ ಪ್ರಾಬಲ್ಯ ಸಾಧಿಸಿದ ತಮಿಳ್ ತಲೈವಾಸ್ 19-18 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿತು. ಆದರೆ, ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಗೂಳಿಗಳು ಆರ್ಭಟಿಸಿದವು.

ತಮಿಳ್ ತಲೈವಾಸ್ ತಂಡವನ್ನು ಎರಡನೇ ಬಾರಿ ಆಲೌಟ್ ಮಾಡುವ ಮೂಲಕ 28-25 ಅಂಕಗಳ ಮುನ್ನಡೆ ಸಾಧಿಸಿದರು. ನಂತರ ಬುಲ್ಸ್ ಮುನ್ನಡೆಯನ್ನು ಕಾಪಾಡಿಕೊಳ್ಳುತ್ತಲೇ ಹೋಯಿತು. ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ಹೆಚ್ಚಿನ ಪ್ರತಿರೋಧವನ್ನು ತೋರಲಿಲ್ಲ. ಅಂತಿಮ ಕ್ಷಣದವರೆಗೂ ಬುಲ್ಸ್ ಪಾಯಿಂಟ್‌ಗಳನ್ನು ಗಳಿಸಿದರು.

ಬೆಂಗಳೂರು ಬುಲ್ಸ್
ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್

ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್

ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್

ತಮಿಳು ತಲೈವಾಸ್
ರೈಡರ್ಸ್: ಪವನ್ ಕುಮಾರ್ (ಸೆಹ್ರಾವತ್), ಅಜಿಂಕ್ಯ ಅಶೋಕ್ ಪವಾರ್, ಜತಿನ್, ಹಿಮಾಂಶು, ಹಿಮಾಂಶು, ನರೇಂದರ್

ಡಿಫೆಂಡರ್ಸ್: ಸಾಗರ್, ಅಂಕಿತ್, ಎಂ. ಅಭಿಷೇಕ್, ಆಶಿಶ್, ಎಂಡಿ ಆರಿಫ್ ರಬ್ಬಾನಿ, ಹಿಮಾಂಶು, ಮೋಹಿತ್, ಸಾಹಿಲ್, ಅರ್ಪಿತ್ ಸರೋಹಾ

ಆಲ್ ರೌಂಡರ್ಸ್: ವಿಶ್ವನಾಥ್ ವಿ., ತನುಶನ್ ಲಕ್ಷ್ಮಮೋಹ, ಕೆ.ಅಭಿಮನ್ಯು

Story first published: Sunday, November 13, 2022, 23:13 [IST]
Other articles published on Nov 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X