PKL 2022 : ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್

ಮಂಗಳವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸುವ ಮೂಲಕ ಜಯದ ಹಾದಿಗೆ ಮರಳಿದ್ದಾರೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪುಣೇರಿ ಪಲ್ಟನ್ ಗುಜರಾತ್ ಜೈಂಟ್ಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಗುಜರಾತ್ ಜೈಂಟ್ಸ್ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಲು ಆಕ್ರಮಣಕಾರಿ ಆಟವಾಡಿತು.

ಆರಂಭದಲ್ಲಿ ಉತ್ತಮ ಆಟವಾಡಿದ ಪುಣೇರಿ ಪಲ್ಟನ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ, ಅಸ್ಲಾಮ್ ಇನಾಮದಾರ್ ಮತ್ತು ಸಂಕೇತ್‌ ಸಾವಂತ್ ಅವರನ್ನು ಗುಜರಾತ್ ಜೈಂಟ್ಸ್ ನಾಯಕ ಚಂದ್ರನ್ ರಂಜಿತ್ ಔಟ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ ಶಕ್ತಿ ತುಂಬಿದರು. ಆದರೂ, ಪಲ್ಟಾನ್ ಗುಜರಾತ್ ಜೈಂಟ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ 15-8 ಅಂಕಗಳ ಮುನ್ನಡೆ ಪಡೆಯಿತು.

ಶಾಹೀನ್ ಅಫ್ರಿದಿ ಅನುಪಸ್ಥಿತಿಯಲ್ಲಿ ಈತ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾನೆ ಎಂದ ಡ್ಯಾನಿಶ್ ಕನೇರಿಯಾಶಾಹೀನ್ ಅಫ್ರಿದಿ ಅನುಪಸ್ಥಿತಿಯಲ್ಲಿ ಈತ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾನೆ ಎಂದ ಡ್ಯಾನಿಶ್ ಕನೇರಿಯಾ

ಆಲ್ ಔಟ್ ನಂತರ ಗುಜರಾತ್ ಜೈಂಟ್ಸ್ ಮೈಕೊಡವಿಕೊಂಡು ನಿಂತಿತು, ಆಟದಲ್ಲಿ ಬಲಿಷ್ಠವಾಗಿ ವಾಪಸಾದ ಅವರು, ಸತತವಾಗಿ ಪಾಯಿಂಟ್ಸ್ ಪಡೆಯುವ ಮೂಲಕ ಅಂಕಗಳ ನಡುವಿನ ಅಂತರ ಕಡಿಮೆ ಮಾಡಿದರು. ಅಲ್ಲಿಂದ ಸತತವಾಗಿ ಎರಡೂ ತಂಡಗಳು ಪಾಯಿಂಟ್‌ಗಳನ್ನು ಗಳಿಸಿದವು. ಮೊದಲಾರ್ಧದ ಅಂತ್ಯಕ್ಕೆ ಪುಣೇರಿ ಪಲ್ಟನ್ 22-21ರ ಒಂದು ಅಂಕಗಳ ಮುನ್ನಡೆಯನ್ನು ಮಾತ್ರ ಕಾಯ್ದುಕೊಳ್ಳಲು ಯಶಸ್ವಿಯಾಯಿತು.

ದ್ವಿತೀಯಾರ್ಧದಲ್ಲಿ ಅಬ್ಬರಿಸಿದ ದೈತ್ಯರು

ಆದರೆ, ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ ಅಬ್ಬರದ ಆಟವಾಡಿತು. ದಹಿಯಾ ಪ್ರತಿ ರೈಡಿಂಗ್‌ನಲ್ಲಿ ಕೂಡ ಪಾಯಿಂಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಪುಣೇರಿ ಪಲ್ಟನ್‌ ತಂಡವನ್ನು ಎರಡನೇ ಬಾರಿ ಆಲೌಟ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ 31-25 ಅಂಕಗಳ ಮುನ್ನಡೆ ಸಾಧಿಸಿದರು.

ಅಲ್ಲಿಂದ ಮುಂದೆ, ಗುಜರಾತ್ ಜೈಂಟ್ಸ್ ಪಣೇರಿ ಪಲ್ಟನ್ ಮೇಲೆ ಒತ್ತಡವನ್ನು ಹೇರುತ್ತಲೇ ಹೋಯಿತು. ದಹಿಯಾ ತಮ್ಮ ಯಶಸ್ವೀ ರೈಡಿಂಗ್‌ಗಳ ಮೂಲಕ ಗುಜರಾತ್ ಜೈಂಟ್ಸ್‌ಗಳಿಗೆ ಅಂಕಗಳನ್ನು ತಂದುಕೊಡುತ್ತಲೇ ಇದ್ದರು, ಮತ್ತೊಮ್ಮೆ ಪುಣೇರಿ ಪಲ್ಟನ್ ತಂಡವನ್ನು ಆಲೌಟ್ ಮಾಡಿ ಅಂಕಗಳ ಅಂತರವನ್ನು 44-32ಕ್ಕೆ ಹೆಚ್ಚಿಸಿಕೊಂಡರು.

ಅದಾದ ನಂತರ ಕೊನೆಯ ನಿಮಿಷದವರೆಗೆ ಕೂಡ ಗುಜರಾತ್ ಜೈಂಟ್ಸ್ ಪುಣೇರಿ ಪಲ್ಟನ್‌ಗೆ ಆಟದಲ್ಲಿ ವಾಪಸಾಗಲು ಯಾವುದೇ ಅವಕಾಶವನ್ನು ಕೊಡಲಿಲ್ಲ. ದಹಿಯಾ ಬರೋಬ್ಬರಿ 19 ರೈಡಿಂಗ್‌ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಅಂತಿಮವಾಗಿ ಗುಜರಾತ್ 51-39 ಅಂಕಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸತತ ಸೋಲಿನ ಸರಪಳಿಯನ್ನು ಕಳಚಿಕೊಂಡು ಹೊರಬಂದಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 29, 2022, 22:36 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X