ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಯು ಮುಂಬಾ ವಿರುದ್ಧ ರೋಚಕವಾಗಿ ಗೆದ್ದ ಹರಿಯಾಣ ಸ್ಟೀಲರ್ಸ್

PKL 2022: Haryana Steelers Clinch Last Minute Thriller Against U Mumba

ಮಂಗಳವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಂಗಳವಾರ ನಡೆದ ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ 9 ರ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ಯು ಮುಂಬಾ ವಿರುದ್ಧ 35-33 ಅಂಕಗಳ ರೋಚಕ ಜಯ ಸಾಧಿಸಿದೆ.

ಹರಿಯಾಣ ಸ್ಟೀಲರ್ಸ್‌ನ ಡಿಫೆಂಡರ್ ಮೋಹಿತ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡಕ್ಕೆ ರೋಚಕ ಜಯ ತಂದುಕೊಡುವಲ್ಲಿ ನೆರವಾದರು. ಅವರು 7 ಟ್ಯಾಕಲ್ ಅಂಕಗಳನ್ನು ಪಡೆಯುವ ಮೂಲಕ, ಸ್ಟೀಲರ್ಸ್‌ಗೆ ಗೆಲುವು ತಂದುಕೊಟ್ಟರು. ಮಂಜೀತ್ ಕೂಡ ಅತ್ಯುತ್ತಮವಾಗಿ ಆಡಿ 7 ರೈಡಿಂಗ್ ಪಾಯಿಂಟ್ ಪಡೆದರು.

ಆರಂಭದಲ್ಲಿ ಮೀಟೂ ನಾಲ್ಕು ಪಾಯಿಂಟ್‌ಗಳ ಸೂಪರ್ ರೈಡ್ ಮಾಡುವ ಮೂಲಕ ಸ್ಟೀಲರ್ಸ್‌ಗೆ ಮುನ್ನಡೆ ಒದಗಿಸಿದರು. ಗುಮಾನ್ ಯಶಸ್ವಿ ದಾಳಿಯ ಮೂಲಕ ಯು ಮುಂಬಾಗೆ ಒಂದು ಅಂಕವನ್ನು ಗಳಿಸಿಕೊಟ್ಟರಯ. ನಂತರ ಮುಂಬೈ ರಕ್ಷಣಾ ಪಡೆ ಮೀಟೂವನ್ನು ಯಶಸ್ವಿಯಾಗಿ ಟ್ಯಾಕಲ್ ಮಾಡುವ ಮೂಲಕ ಸ್ಕೋರ್ 6-6 ರಲ್ಲಿ ಸಮವಾಯಿತು. ಮೋಹಿತ್ ಆಶಿಶ್ ಅವರನ್ನು ಬಲಿಷ್ಠ ಟ್ಯಾಕಲ್ ಮೂಲಕ ಔಟ್ ಮಾಡಿದ್ದರಿಂದ ಸ್ಟೀಲರ್ಸ್ ನಂತರ ಒಂದು ಅಂಕದ ಮುನ್ನಡೆ ಗಳಿಸಿತು.

PKL 2022 : ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್PKL 2022 : ಪುಣೇರಿ ಪಲ್ಟನ್ ವಿರುದ್ಧ 51-39 ಅಂಕಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್

ಮೊದಲಾರ್ಧದಲ್ಲಿ ಮೋಹಿತ್ ರಕ್ಷಣೆಯಲ್ಲಿ ಉತ್ತಮ ಫಾರ್ಮ್ ಮುಂದುವರೆಸಿದರು, ಟ್ಯಾಕಲ್‌ನಲ್ಲಿ ಅವರು 100 ಪ್ರತಿಶತ ಸ್ಟ್ರೈಕ್‌ರೇಟ್ ಕಾಯ್ದುಕೊಂಡರು. ಆದರೂ ಉಭಯ ತಂಡಗಳು ಪ್ರತಿ ಅಂಕ ಗಳಿಸಲು ಸಾಕಷ್ಟು ಹರಸಾಹಸಪಟ್ಟವು. ಮೊದಲಾರ್ಧದಲ್ಲಿ ಯು ಮುಂಬಾ 13-12 ರೊಂದಿಗೆ ಒಂದು ಅಂಕದ ಮುನ್ನಡೆ ಸಾಧಿಸಿತು.

PKL 2022: Haryana Steelers Clinch Last Minute Thriller Against U Mumba

ರೋಚಕ ಜಯ ಸಾಧಿಸಿದ ಹರಿಯಾಣ

ದ್ವಿತೀಯಾರ್ಧದ ಆರಂಭದಲ್ಲಿ ಆಶಿಶ್ ರೈಡ್ ಪಾಯಿಂಟ್ ಪಡೆಯುವ ಮೂಲಕ ಯು ಮುಂಬಾ ಎರಡು ಅಂಕಗಳ ಮುನ್ನಡೆ ಸಾಧಿಸಿತು. ಆದರೆ, ರಾಕೇಶ್ ನರ್ವಾಲ್ ಸೂಪರ್ ರೈಡ್ ಮಾಡಿ ಎರಡು ಪಾಯಿಂಟ್ ಪಡೆಯುವ ಮೂಲಕ ಹರಿಯಾಣ ಸ್ಟೀಲರ್ಸ್ ಸ್ಕೋರ್ ಸಮಬಲಗೊಳಿಸಿದರು.

ನಂತರ ಯು ಮುಂಬಾದ ಜೈ ಭಗವಾಬ್ ಮೂರು ಅಂಕಗಳ ಸೂಪರ್ ರೈಡ್ ಮಾಡುವ ಮೂಲಕ ಮುಂಬೈ ಮೇಲುಗೈ ಸಾಧಿಸಿತು. ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ 22-17 ಅಂಕಗಳ ಮುನ್ನಡೆ ಸಾಧಿಸಿದರು.

ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಮಂಜೀತ್ ಗುಮಾನ್ ರೈಡಿಂಗ್ ಪಾಯಿಂಟ್ ಗಳಿಸುವ ಮೂಲಕ ಹರಿಯಾಣಕ್ಕೆ ನೆರವಾದರು. ಎರಡು ಪಾಯಿಂಟ್‌ಗಳ ಸೂಪರ್ ರೈಡ್ ಮಾಡಿದರು. ನಂತರ ಸ್ಟೀಲರ್ಸ್ ಯು ಮುಂಬಾವನ್ನು ಆಲ್‌ಔಟ್ ಮಾಡುವ ಮೂಲಕ 31-28ರಲ್ಲಿ ಮುನ್ನಡೆ ಸಾಧಿಸಿದರು.

ಮೋಹಿತ್ ಮತ್ತು ಜೈದೀಪ್ ತಡವಾಗಿ ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆಯುವುದರೊಂದಿಗೆ, ಹರಿಯಾಣ ಸ್ಟೀಲರ್ಸ್ 35-33 ರಿಂದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Story first published: Tuesday, November 29, 2022, 23:37 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X