ಪ್ರೊ ಕಬಡ್ಡಿ 2019: ಪಲ್ಟನ್‌ ವಿರುದ್ಧವೂ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್‌

ಚೆನ್ನೈ, ಆಗಸ್ಟ್‌ 21: ನಿರಾಶಾದಾಯಕ ಪ್ರದರ್ಶನ ಮುಂದುವರಿಸಿರುವ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ತಂಡ, ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿನ ತನ್ನ 9ನೇ ಲೀಗ್‌ ಪಂದ್ಯದಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಪುಣೇರಿ ಪಲ್ಟನ್‌ ತಂಡದ ವಿರುದ್ಧವೂ ಮುಗ್ಗರಿಸಿದೆ.

ಇಲ್ಲಿನ ಜವಾಹರಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಚರಣದಲ್ಲಿ ಬುಧವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಪರದಾಡಿದ ಬುಲ್ಸ್‌ 31-23 ಅಂಕಗಳಿಂದ ಪುಣೇರಿ ಪಲ್ಟನ್‌ ಎದುರು ಪಲ್ಟಿ ಹೊಡೆಯಿತು.

ಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XIಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XI

ಪಂದ್ಯದಲ್ಲಿ ಬೆಂಗಳೂರು ಪರ ಕೊನೆಗೂ ಲಯ ಕಂಡುಕೊಂಡ ನಾಯಕ ರೋಹಿತ್‌ ಕುಮಾರ್‌ ಒಟ್ಟು 7 ಅಂಕಗಳನ್ನು ಗಳಿಸವ ಮೂಲಕ ತಂಡದ ಹೋರಾಟವನ್ನು ಹಿಡಿದಿಟ್ಟಿದ್ದರು. ಆದರೆ, ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ (5) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದದ್ದು ಬುಲ್ಸ್‌ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಕೆಪಿಎಲ್‌ 2019: ಭರತ್‌ ಚಿಪ್ಲಿ ಭರ್ಜರಿ ಬ್ಯಾಟಿಂಗ್‌, ಬುಲ್ಸ್ ಗೆ ಸುಲಭ ಜಯಕೆಪಿಎಲ್‌ 2019: ಭರತ್‌ ಚಿಪ್ಲಿ ಭರ್ಜರಿ ಬ್ಯಾಟಿಂಗ್‌, ಬುಲ್ಸ್ ಗೆ ಸುಲಭ ಜಯ

ರೇಡಿಂಗ್‌ನಲ್ಲಿ ಬಲಿಷ್ಠವಾಗಿರುವ ಬುಲ್ಸ್‌ ಪಡೆಯನ್ನು ಕಟ್ಟಿಹಾಕಲು ಡಿಫೆನ್ಸ್‌ ಕಡೆಗೆ ಹೆಚ್ಚಿನ ಒತ್ತು ನೀಡಿದ ಪಲ್ಟನ್‌ ಪಡೆ ಜಯ ದಕ್ಕಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಡಿಫೆನ್ಸ್‌ನಲ್ಲಿ ಭದ್ರ ಕೋಟೆಯಂತೆ ನಿಂತ ಸುರ್ಜೀತ್‌ ಸಿಂಗ್‌ ಒಟ್ಟಾರೆ 6 ಅಂಕಗಳನ್ನು ಗಳಿಸುವ ಮೂಲಕ ಬುಲ್ಸ್‌ ರೇಡರ್‌ಗಳಿಗೆ ಸಿಂಹಸ್ವಪ್ನವಾದರು. ಅವರಿಗೆ ಹಜಾಧವ್‌ ಬಾಬಾಸಾಹೆಬ್‌ ಶಹಾಜಿ (5) ಉತ್ತಮ ಸಾಥ್‌ ನೀಡಿದರು. ಜೊತೆಗೆ ರೇಡಿಂಗ್‌ ವಿಭಾಗದಲ್ಲೂ ಮಂಜೀತ್‌ 7 ಅಂಕಗಳನ್ನು ಗಳಿಸುವ ಮೂಲಕ ಗೆಲುವಿಗೆ ಬಲವಾದರು.

ಈ ಸೋಲಿನೊಂದಿಗೆ ಬೆಂಗಳರು ಬುಲ್ಸ್‌ ಆಡಿದ 9 ಪಂದ್ಯಗಳಿಂದ 27 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದಿದೆ. ಇದರಲ್ಲಿ ಐದು ಗೆಲುವು ಮತ್ತು 4 ಸೋಲುಗಳಿವೆ.

ಟೆಸ್ಟ್‌ ಕ್ರಿಕೆಟ್‌: ಪಂಟರ್‌ ದಾಖಲೆ ಮುರಿಯಲು ಸಜ್ಜಾದ ಕಿಂಗ್‌ ಕೊಹ್ಲಿ!ಟೆಸ್ಟ್‌ ಕ್ರಿಕೆಟ್‌: ಪಂಟರ್‌ ದಾಖಲೆ ಮುರಿಯಲು ಸಜ್ಜಾದ ಕಿಂಗ್‌ ಕೊಹ್ಲಿ!

ಮತ್ತೊಂದೆಡೆ ಅಷ್ಟೇ ಪಂದ್ಯಗಳನ್ನು ಆಡಿರುವ ಪುಣೇರಿ ಪಲ್ಟನ್‌ 3 ಜಯ ಮತ್ತು 5 ಸೋಲು ಹಾಗೂ 1 ಡ್ರಾ ಫಲಿತಾಂಶಗಳೊಂದಿಗೆ ಒಟ್ಟು 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ (12)ದಿಂದ ಮೇಲೇರಿ 10ನೇ ಸ್ಥಾನ ಪಡೆದುಕೊಂಡಿದೆ.

ಪ್ಲೇ ಆಫ್ಸ್‌ ಹಂತಕ್ಕೇರಲು ಮುಂದಿನ ಪಂದ್ಯಗಳಲ್ಲಿ ಗೆಲುವಿನ ಫಾರ್ಮುಲಾ ಕಂಡುಕೊಳ್ಳುವ ಒತ್ತಡದಲ್ಲಿರುವ ಬುಲ್ಸ್‌ ಪಡೆ, ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬಲಿಷ್ಠ ದಬಾಂಗ್‌ ಡೆಲ್ಲಿ ವಿರುದ್ಧ ಪೈಪೋಟಿ ನಡೆಸಲಿದೆ. ಮತ್ತೊಂದೆಡೆ ಪುಣೇರಿ ಪಲ್ಟನ್‌ ತಂಡ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಸೆಣಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, August 21, 2019, 21:17 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X