ಪ್ರೊ ಕಬಡ್ಡಿ: ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ, ಕುತೂಹಲಕಾರಿ ಮಾಹಿತಿ!

ಅಹ್ಮದಾಬಾದ್, ಅಕ್ಟೋಬರ್ 15: ಸೋಮವಾರ (ಅಕ್ಟೋಬರ್ 14) ಅಹ್ಮದಾಬಾದ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಎಲಿಮಿನೇಟರ್ 1 ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್, ಯುಪಿ ಯೋಧ ವಿರುದ್ಧ 48-45ರ ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಹೀಗಾಗಿ ಸೆಮಿಫೈನಲ್ ಪಂದ್ಯಗಳು ರಂಗೇರಿವೆ.

PKL7 ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್ ಗೆ ಬಹುಪರಾಕ್!

ಅಹ್ಮದಾಬಾದ್‌ನ ಏಕ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ಅಕ್ಟೋಬರ್ 16ರ ಬುಧವಾರ ನಡೆಯುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಸೀಸನ್‌ ಅಂಕಪಟ್ಟಿಯ ಟಾಪರ್ ದಬಾಂಗ್ ಡೆಲ್ಲಿ ಕೆಸಿ ತಂಡಗಳು ಕಾದಾಡಲಿವೆ.

ಐಸಿಸಿ ಟೆಸ್ಟ್ Ranking: ಮೊದಲ ಸ್ಥಾನದ ಸಮೀಪ ವಿರಾಟ್ ಕೊಹ್ಲಿ

ಬೆಂಗಳೂರು ಬುಲ್ಸ್‌ನಲ್ಲಿ ಪವನ್ ಕುಮಾರ್ ಶೆಹ್ರಾವತ್, ದಬಾಂಗ್‌ ಡೆಲ್ಲಿಯಲ್ಲಿ ನವೀನ್ ಕುಮಾರ್ ಇರುವುದರಿಂದ ಮೊದಲ ಸೆಮಿಫೈನಲ್ ಜಿದ್ದಾಜಿದ್ದಿ ಅನ್ನಿಸುವುದರಲ್ಲಿ ಸಂದೇಹವಿಲ್ಲ.

ಬೆಂಗಾಲ್-ಮುಂಬೈ ಕಾಳಗ

ಬೆಂಗಾಲ್-ಮುಂಬೈ ಕಾಳಗ

ಅಕ್ಟೋಬರ್ 16ರ ಬುಧವಾರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಯು ಮುಂಬಾ ತಂಡಗಳು ಸ್ಪರ್ಧಿಸಲಿವೆ. ಬೆಂಗಳೂರು-ಡೆಲ್ಲಿ ಸೆಮಿಫೈನಲ್ ಪಂದ್ಯ 7.30 pmಗೆ, ಬೆಂಗಾಲ್ ವಾರಿಯರ್ಸ್-ಯು ಮುಂಬಾ ಸೆಮಿಫೈನಲ್ 8.30 pmಗೆ ಆರಂಭವಾಗಲಿದೆ.

ಪವನ್-ನವೀನ್ ಜಿದ್ದಾಜಿದ್ದಿ

ಪವನ್-ನವೀನ್ ಜಿದ್ದಾಜಿದ್ದಿ

ಎರಡೂ ಸೆಮಿಫೈನಲ್ ಪಂದ್ಯಗಳೂ ಕುತೂಹಲಕಾರಿಯೇ ಆದರೂ ಆರಂಭಿಕ ಪಂದ್ಯ ಇನ್ನೂ ಆಕರ್ಷಕ ಎನ್ನಿಸಲಿದೆ. ಯಾಕೆಂದರೆ ಈ ಪಂದ್ಯದಲ್ಲಿ ಸೀಸನ್‌ ದಾಖಲೆ ರೈಂಡಿಂಗ್ ಪಾಯಿಂಟ್ (39 ಅಂಕ) ಹೊಂದಿರುವ ಪವನ್ ಕುಮಾರ್ ಬುಲ್ಸ್ ಪರ, ನವೀನ್ ಎಕ್ಸ್‌ಪ್ರೆಸ್ ಡೆಲ್ಲಿ ಪರ ಆಕರ್ಷಣೆ ಮೂಡಿಸಲಿದ್ದಾರೆ. ಪಂದ್ಯವೊಂದರಲ್ಲಿ ಅತೀ ಹೆಚ್ಚು ರೈಡಿಂಗ್ ಪಾಂಯಿಂಟ್‌ ಗೆದ್ದ ಎರಡನೇ ದಾಖಲೆ ಪಾಟ್ನಾದ ಪರ್ದೀಪ್ ನರ್ವಾಲ್ (35 ಅಂಕ) ಹೆಸರಿನಲ್ಲಿದೆ.

ಪವನ್‌ಗೆ ದಾಖಲೆ ಅಂಕ

ಪವನ್‌ಗೆ ದಾಖಲೆ ಅಂಕ

7ನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿನ ಟಾಪ್ ರೈಡರ್‌ಗಳ ಒಟ್ಟು ಅಂಕಗಳನ್ನು ಗಮನಿಸಿದರೆ ಬೆಂಗಳೂರು ಬುಲ್ಸ್‌ನ ಪವನ್ ಕುಮಾರ್ 23 ಪಂದ್ಯಗಳಲ್ಲಿ 335 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಪಾಟ್ನಾ ಪೈರೇಟ್ಸ್‌ನ ಪರ್ದೀಪ್ ನರ್ವಾಲ್ (22 ಪಂದ್ಯ, 304 ಅಂಕ), ದಬಾಂಗ್ ಡೆಲ್ಲಿಯ ನವೀನ್ ಕುಮಾರ್ (21 ಪಂದ್ಯ, 270 ಅಂಕ) ಅಗ್ರ 3ರಲ್ಲಿದ್ದಾರೆ.

19ಕ್ಕೆ ಅಂತಿಮ ಹಣಾಹಣಿ

19ಕ್ಕೆ ಅಂತಿಮ ಹಣಾಹಣಿ

ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡಗಳು ಅಕ್ಟೋಬರ್ 19ರ ಶನಿವಾರ ನಡೆಯುವ ಫೈನಲ್‌ನಲ್ಲಿ ಸ್ಪರ್ಧಿಸುತ್ತವೆ. ಪ್ಲೇ ಆಫ್‌ನಿಂದ ಫೈನಲ್‌ವರೆಗಿನ ಎಲ್ಲಾ ಪಂದ್ಯಗಳು ಅಹ್ಮದಾಬಾದ್‌ನ ಏಕ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲೇ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಈ ಬಾರಿಯೂ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, October 15, 2019, 12:45 [IST]
Other articles published on Oct 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X