ಪ್ರೊ ಕಬಡ್ಡಿ: ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ತಂಡ ಫೈನಲ್ ಗೆ

Posted By:

ಮುಂಬೈ, ಅಕ್ಟೋಬರ್ 25 : ರೈಡಿಂಗ್ ಹಾಗೂ ಡಿಫೆಂಡಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್ ಫಾರ್ಚೂನ್ ಜೈಂಟ್ಸ್ 5ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುತ್ತಿರುವ ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ತಂಡ 42-17 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶ ಮಾಡಿತು.

Pro Kabaddi: Gujarat Fortunegiants Enter Final, Thrash Bengal Warriors 42-17

ಗುಜರಾತ್ ಪರ ಸ್ಟಾರ್ ರೈಡರ್ ಗಳಾದ ಸಚಿನ್ 9 ಹಾಗೂ ಮಹೇಂದ್ರ ರಜಪೂತ್ 8 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಮೊದಲಾರ್ಧದಲ್ಲಿ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ಮೂಡಿಬಂತು. ಬಳಿಕ ಸ್ಟಾರ್ ರೈಡರ್ ಸಚಿನ್ ಮಿಂಚಿನ ದಾಳಿ ನಡೆಸುವ ಮೂಲಕ ಆರಂಭದಿಂದಲೇ ತಂಡಕ್ಕೆ ಅಂಕಗಳ ಮುನ್ನಡೆ ತಂದುಕೊಟ್ಟರು.

ದ್ವಿತಿಯಾರ್ಧದ ಆರಂಭದಲ್ಲಿಯೇ 20-10 ಅಂಕಗಳೊಂದಿಗೆ 10 ಅಂಕಗಳ ಮುನ್ನಡೆ ಸಾಧಿಸಿದ ಗುಜರಾತ್ ನಿರಂತರ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಅಂತಿಮವಾಗಿ ಗುಜರಾತ್ 42-17 ಅಂಕಗಳೊಂದಿಗೆ ಭರ್ಜರಿ ಜಯ ಸಾಧಿಸಿತು.

* ಅಕ್ಟೋಬರ್ 28- ಫೈನಲ್ ಪಂದ್ಯ ನಡೆಯಲಿದೆ.

Story first published: Wednesday, October 25, 2017, 9:54 [IST]
Other articles published on Oct 25, 2017
Please Wait while comments are loading...