ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಬಡ್ಡಿ: ಗುಜರಾತ್ ವಿರುದ್ಧ ರೋಚಕ ಪಂದ್ಯ ಡ್ರಾಗೊಳಿಸಿಕೊಂಡ ಬೆಂಗಳೂರು!

Pro Kabaddi League 2018: Bengaluru play draw against Gujarat

ಅಹ್ಮದಾಬಾದ್, ನವೆಂಬರ್ 18: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾ ಇಂಡೋರ್ ಅರೆನಾದಲ್ಲಿ ಶನಿವಾರ (ನವೆಂಬರ್ 17) ನಡೆದ ಆತಿಥೇಯ ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ರೋಚಕ ಪಂದ್ಯ 30-30ರ ಸಮಬಲದೊಂದಿಗೆ ಅಂತ್ಯಗೊಂಡಿದೆ.

ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ

ಅಂಕಪಟ್ಟಿಯ ಏರುಪೇರಿಗೆ ಸಂಬಂಧಿಸಿ ಈ ಇಂಟರ್ ಝೋನ್ ಪಂದ್ಯ ಕೊಂಚ ಮಟ್ಟಿನಲ್ಲಿ ಗುಜರಾತ್ ಗೆ ಲಾಭವಾಗಿಯೂ ಬೆಂಗಳೂರಿಗೆ ನಷ್ಟವಾಗಿಯೂ ಪರಿಣಮಿಸಿದೆ. ಬುಲ್ಸ್ ಪರ ಪವನ್ ಕುಮಾರ್, ಫಾರ್ಚೂನ್ ಜೈಂಟ್ಸ್ ಪರ ಸಚಿನ್ ಜಿದ್ದಾಜಿದ್ದಿಯ ಆಟ ಪ್ರದರ್ಶಿಸಿದರು.

ಬೆಂಗಳೂರು ತಂಡದಿಂದ ಪವನ್ 10, ರೋಹಿತ್ ಕುಮಾರ್ 6, ಸಂದೀಪ್ 4 ಅಂಕ ಸೇರಿಸಿ ಬಲ ತುಂಬಿದರು. ಆತಿಥೇಯ ಗುಜರಾತ್ ನಿಂದ ಅಷ್ಟೇ ಪೈಪೋಟಿಯ ಪ್ರದರ್ಶನ ಕಂಡು ಬಂತು. ಗುಜರಾತ್ ಪರ ಸಚಿನ್ 11, ಸುನಿಲ್ ಕುಮಾರ್ ಮತ್ತು ರೋಹಿತ್ ಗುಲಿಯಾ ತಲಾ 4 ಪಾಯಿಂಟ್ ಸೇರಿಸಿ ರೋಚಕ ಸೆಣಸಾಟಕ್ಕೆ ಸಾಕ್ಷಿಯಾದರು.

ಎಂಎಸ್‌ಎಲ್‌: ಎಬಿಡಿ ಬ್ಯಾಟಿಂಗ್ ಅಬ್ಬರ ವ್ಯರ್ಥ, ಕೇಪ್ ಟೌನ್ ಬ್ಲಿಟ್ಜ್‌ಗೆ ಜಯಎಂಎಸ್‌ಎಲ್‌: ಎಬಿಡಿ ಬ್ಯಾಟಿಂಗ್ ಅಬ್ಬರ ವ್ಯರ್ಥ, ಕೇಪ್ ಟೌನ್ ಬ್ಲಿಟ್ಜ್‌ಗೆ ಜಯ

ಈ ಪಂದ್ಯದ ಬಳಿಕ ಗುಜರಾತ್ ಆಡಿರುವ 10 ಪಂದ್ಯಗಳಲ್ಲಿ 7 ಜಯ, 1 ಸೋಲು, 2 ಪಂದ್ಯ ಡ್ರಾದೊಂದಿಗೆ ಎ ಝೋನ್ ಅಂಕಪಟ್ಟಿಯಲ್ಲಿ 42 ಅಂಕಗಳೊಂದಿಗೆ ಮುಂಬೈ (56 ಅಂಕ) ಬೆನ್ನಿಗಿದೆ. ಬಿ ಝೋನ್ ನಲ್ಲಿರುವ ಬೆಂಗಳೂರು 9ರಲ್ಲಿ 6 ಜಯ, 2 ಸೋಲು, 1 ಡ್ರಾದೊಂದಿಗೆ 35 ಅಂಕ ಸಂಪಾದಿಸಿ ಅಗ್ರ ಸ್ಥಾನದಲ್ಲಿದೆ.

Story first published: Sunday, November 18, 2018, 0:49 [IST]
Other articles published on Nov 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X