ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2018: ಹರ್ಯಾಣ ಸ್ಟೀಲರ್ಸ್ ಸೋಲಿಸಿದ ಬೆಂಗಳೂರು ಬುಲ್ಸ್

Pro Kabaddi League 2018: Bulls beat Steelers 42-34

ಪುಣೆ, ಅಕ್ಟೋಬರ್ 24: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ ಇಂಟರ್ ಜೋನ್ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹರ್ಯಾಣ ಸ್ಟೀಲರ್ಸ್ ಎದುರು 42-34ರ ಜಯ ಸಾಧಿಸಿದೆ. ಇದರೊಂದಿಗೆ ಬೆಂಗಳೂರು ಬುಲ್ಸ್ ಝೋನ್ ಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದೆ.

ಭಾರತ vs ವಿಂಡೀಸ್, ಏಕದಿನ: ರೋಚಕ ಪಂದ್ಯವನ್ನು 'ಟೈ' ಮಾಡಿದ ಹೋಪ್ಭಾರತ vs ವಿಂಡೀಸ್, ಏಕದಿನ: ರೋಚಕ ಪಂದ್ಯವನ್ನು 'ಟೈ' ಮಾಡಿದ ಹೋಪ್

ಬೆಂಗಳೂರಿನಿಂದ ಪವನ್ ಕುಮಾರ್ ಭರ್ಜರಿ 20 ಪಾಯಿಂಟ್ ಗಳನ್ನು ಸೇರಿಸಿದರು. ಮತ್ತೊಬ್ಬ ಆಟಗಾರ ರೋಹಿತ್ ಕುಮಾರ್ ಕೂಡ 8 ಪಾಯಿಂಟ್ ಕಲೆ ಹಾಕಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು. ಸ್ಟೀಲರ್ಸ್ ಪರ ವಿಕಾಶ್ ಖಂಡೋಲಾ ಉತ್ತಮ ಆಟವಾಡಿದರು.

ಒಟ್ಟು 29 ರೈಡಿಂಗ್ ಪಾಯಿಂಟ್ಸ್, 7 ಟ್ಯಾಕ್ಲ್, 4 ಆಲೌಟ್, 2 ಎಕ್ಸ್ಟ್ರಾ ಪಾಯಿಂಟ್ ಗಳು ಸೇರಿಸಿ ಒಟ್ಟು 42 ಅಂಕಗಳು ಬೆಂಗಳೂರು ಖಾತೆ ಸೇರಿಕೊಂಡವು. ಇನ್ನು ಅಕ್ಟೋಬರ್ 31ರಂದು ಪಾಟ್ನಾದಲ್ಲಿ ಬೆಂಗಳೂರು ತಂಡ ಆತಿಥೇಯ ಪಾಟ್ನಾ ಸವಾಲು ಸ್ವೀಕರಿಸಲಿದೆ.

ಬೆಂಗಳೂರು ತಂಡ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲನ್ನು ಕಂಡಿದೆ. ಝೋನ್ ಬಿಯಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು 16 ಅಂಕಗಳನ್ನು ಪಡೆದಿದ್ದರೆ, ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್ ಕೂಡ 16 ಅಂಕ ಹಂಚಿಕೊಂಡಿವೆ. ಆದರೆ ಆಡಿರುವ ಪಂದ್ಯಗಳ ಆಧಾರದಲ್ಲಿದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.

ವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿ

ಎ ಝೋನ್ ನಲ್ಲಿ 10 ಪಂದ್ಯಗಳನ್ನಾಡಿರುವ ಪುಣೇರಿ ಪಲ್ಟಾನ್ ಭರ್ಜರಿ 32 ಅಂಕಗಳನ್ನು ಕಲೆ ಹಾಕಿದೆ. 10ರಲ್ಲಿ ಪುಣೆ 5 ಗೆಲುವು, 4 ಸೋಲು, 1 ಪಂದ್ಯವನ್ನು ಟೈ ಮಾಡಿಕೊಂಡಿದೆ. ಈ ಗುಂಪಿನಲ್ಲಿ 6ರಲ್ಲಿ ನಾಲ್ಕು ಪಂದ್ಯ ಗೆದ್ದಿರುವ ಯು ಮುಂಬಾ 24 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಬುಧವಾರ ನಡೆದ 6ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಯುಪಿ ಯೋಧ 29-23ರ ಜಯ ಸಾಧಿಸಿದೆ.

Story first published: Wednesday, October 24, 2018, 23:26 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X