ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2018: ಹೆಚ್ಚಿನ ಬೆಲೆಗೆ ಹರಾಜಾದ ದುಬಾರಿ ಆಟಗಾರರು

Pro Kabaddi League 2018 : ಹೆಚ್ಚಿನ ಬೆಲೆಗೆ ಹರಾಜಾದ ದುಬಾರಿ ಆಟಗಾರರು | Oneindia Kannada
Pro Kabaddi League 2018: Most expensive buys from players auction

ನವದೆಹಲಿ, ಮೇ 31: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಟ್ಟರೆ ದೇಸಿ ಆಟ ಕಬ್ಬಡ್ಡಿಯೂ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಮೂಲಕ ಜನಪ್ರಿಯಗೊಳ್ಳುತ್ತಿದೆ. ಐಪಿಎಲ್ ಮುಗಿದು ಪಿಕೆಎಲ್ ಕಾವೇರುತ್ತಿರುವುದರಿಂದ ಕಬಡ್ಡಿ ಕಡೆಗೆ ಕ್ರೀಡಾಭಿಮಾನಿಗಳು ಲಕ್ಷ್ಯ ಹರಿಸುತ್ತಿದ್ದಾರೆ.

ಕೆಪಿಎಲ್ 2018ರ ಅಂಗವಾಗಿ ಬುಧವಾರ ಮೊದಲ ದಿನದ ಹರಾಜು ಮುಗಿದಿದ್ದು, ಅದರಲ್ಲಿ ಒಟ್ಟು ಆರು ಮಂದಿ ಆಟಗಾರರು ಭಾರೀ ಬೆಲೆಗೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 1 ಕೋಟಿ ರೂ.ಗೂ ಹೆಚ್ಚಿನ ಬೆಲೆಗೆ ಕಬಡ್ಡಿ ಆಟಗಾರರು ಹರಾಜಾಗಿದ್ದು ಭಾರತದ ಮಣ್ಣಿನ ಕ್ರೀಡೆಯಾದ ಕಬಡ್ಡಿ ಜನಪ್ರಿಯಗೊಳ್ಳುತ್ತಿರುವುದಕ್ಕೆ ಸಾಕ್ಷಿಯೂ ಆದಂತಾಯಿತು.

ಯೂಪಿ ಯೋಧ, ತೆಲುಗು ಟೈಟಾನ್ಸ್, ತಮಿಳ್ ತಲೈವಾಸ್, ಪೂಣೇರಿ ಪಲ್ತಾನ್, ಪಾಟ್ನಾ ಪೈರೇಟ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಹರ್ಯಾಣ ಸ್ಟೀಲರ್ಸ್, ಗುಜರಾತ್ ಫಾರ್ಚೂನ್ ಜೈಂಟ್ಸ್, ದಬಾಂಗ್ ಡೆಲ್ಲಿ ಕೆಸಿ, ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯಾರ್ಸ್, ಯು ಮುಂಬಾ ಹೀಗೆ ಒಟ್ಟು 12 ಬಲಿಷ್ಟ ತಂಡಗಳು ಈ ಸೀಸನ್ ನಲ್ಲಿ ಪಾಲ್ಗೊಳ್ಳುತ್ತಿವೆ.

ಮೊದಲ ದಿನದ ಹರಾಜಿನಲ್ಲಿ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಆಟಗಾರರ ಕಿರು ವಿವರ ಕೆಳಗಿದೆ..

ಮೋನು ಗೊಯಾಟ್

ಮೋನು ಗೊಯಾಟ್

ಈ ಪಿಕೆಎಲ್ ಸೀಸನ್ ನ ಮೊದಲ ದಿನ ದಾಖಲೆ ಬೆಲೆಗೆ ಮಾರಾಟವಾದವರ ಸಾಲಿನಲ್ಲಿ ರೈಡರ್ ಮೋನು ಗೊಯಾಟ್ ಅವರು ಮುಂಚೂಣಿಯಲ್ಲಿದ್ದಾರೆ. ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ ತಂಡದಲ್ಲಿದ್ದ ಮೋನು ಅವರನ್ನು ಈ ಬಾರಿ ಹರ್ಯಾಣ ಸ್ಟೀಲರ್ಸ್ 1.51 ಕೋ. ರೂ.ಗೆ ಖರೀದಿಸಿದೆ. ಈವರೆಗಿನ ಪ್ರೊ ಕಬಡ್ಡಿ ಹರಾಜು ಇತಿಹಾಸದಲ್ಲಿ ಇದು ದಾಖಲೆ ಬೆಲೆ.

ರಾಹುಲ್ ಚೌಧರಿ

ರಾಹುಲ್ ಚೌಧರಿ

ಮೊದಲ ದಿನ ಎರಡನೇ ಅತೀ ಹೆಚ್ಚಿನ ಬೆಲೆಗೆ ಖರೀದಿಯಾದ ಆಟಗಾರರಾಗಿ ರಾಹುಲ್ ಚೌಧರಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಈ ಸ್ಟಾರ್ ಆಟಗಾರನನ್ನು ತೆಲುಗು ಟೈಟಾನ್ಸ್ 1.29 ಕೋ.ರೂ.ಗೆ ತನ್ನಲ್ಲೇ ಉಳಿಸಿಕೊಂಡಿದೆ.

ನಿತಿನ್ ಟಾಮರ್

ನಿತಿನ್ ಟಾಮರ್

ರೈಡರ್ ನಿತಿನ್ ಟಾಮರ್ ಅವರೂ ಕೋಟಿಗೂ ಮಿಕ್ಕಿದ ಬೆಲೆಗೆ ಖರೀದಿಯಾಗುವ ಮೂಲಕ ಗಮನಸೆಳೆದರು. ಪೂಣೇರಿ ಪಾಲ್ಟಾನ್ ತಂಡ ನಿತಿನ್ ನಿತಿನ್ ಅವರನ್ನು 1.15 ಕೋ.ರೂ.ಗೆ ಖರೀದಿಸಿದೆ. ಕಳೆದ ಸೀಸನ್ ನಲ್ಲಿ ನಿತಿನ್ ಯೂಪಿ ಯೋಧ ತಂಡಕ್ಕೆ 93 ಲಕ್ಷ ರೂ.ಗೆ ಮಾರಾಟವಾಗಿದ್ದರು.

ದೀಪಕ್ ನಿವಾಜ್ ಹೂಡ

ದೀಪಕ್ ನಿವಾಜ್ ಹೂಡ

ಪೂಣೆರಿ ಪಾಲ್ಟಾನ್ ಫ್ರಾಂಚೈಸಿ ತನ್ನ ತಂಡದ ಮಾಜಿ ನಾಯಕ ಆಲ್ ರೌಂಡರ್ ದೀಪಕ್ ನಿವಾಜ್ ಹೂಡ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಪಾಟ್ನಾ ಪೈರೇಟ್ಸ್ ಫ್ರಾಂಚೈಸಿ 1.15 ಕೋ.ರೂ.ಗೆ ಬಿಡ್ ಮಾಡಿದಾಗ ಪೂಣೇರಿ ತಲೆಬಾಗಬೇಕಾಯ್ತು.

ರಿಶಾಂಕ್ ದೇವಾಡಿಗ

ರಿಶಾಂಕ್ ದೇವಾಡಿಗ

ಮಹಾರಾಷ್ಟ್ರದ ಸ್ಟಾರ್ ರೈಡರ್ ರಿಶಾಂಕ್ ದೇವಾಡಿಗ ಅವರನ್ನು ಯೂಪಿ ಯೋಧ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿದೆ. ಈ ಬಾರಿ 1.11 ಕೋಟಿ ರೂ.ಗೆ ರಿಶಾಂಕ್ ಖರೀದಿಯಾಗಿ ಗಮನ ಸೆಳೆದರು.

ಫಜಲ್ ಅಟ್ರಾಚಲಿ

ಫಜಲ್ ಅಟ್ರಾಚಲಿ

ಕಡಿಮೆ ಬೆಲೆಯ ಆಟಗಾರನೊಬ್ಬ ಅತೀ ಹೆಚ್ಚಿನ ಬೆಲೆಗ ಮಾರಾಟವಾಗಿದ್ದಕ್ಕೆ ಫಜಲ್ ಅಟ್ರಾಚಲಿ ಸಾಕ್ಷಿಯಾದರು. ಡಿಫೆಂಡರ್ ಆಟಗಾರನ ಪ್ರತಿಭೆಯನ್ನು ಅರಿತ ಮುಂಬೈ ಫ್ರಾಂಚೈಸಿ ಫಜಲ್ ಅವರನ್ನು 1 ಕೋ.ರೂ.ಗೆ ಖರೀದಿಸಿ ಗಮನ ಸೆಳೆಯಿತು. ಫಜಲ್ ಮೂಲಬೆಲೆ 20 ಲಕ್ಷ ರೂ. ಆಗಿತ್ತು.

Story first published: Tuesday, October 9, 2018, 16:18 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X