ಪ್ರೊ ಕಬಡ್ಡಿ ಲೀಗ್ 2021 ಆರಂಭದ ದಿನಾಂಕ, ತಾಣ ಅಧಿಕೃತ ಘೋಷಣೆ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್) 8ನೇ ಆವೃತ್ತಿ ಶೀಘ್ರ ಆರಂಭಗೊಳ್ಳಲಿದೆ. ಪಿಕೆಎಲ್ ಆಯೋಜಕರಾದ ಮಾಷಲ್ ಸ್ಪೋರ್ಟ್ಸ್ ಅಕ್ಟೋಬರ್ 5ರ ಮಂಗಳವಾರ ಪಿಕೆಎಲ್ 8ನೇ ಆವೃತ್ತಿಗಾಗಿ ಅಧಿಕೃತ ಆರಂಭದ ದಿನಾಂಕ ಮತ್ತು ತಾಣ ಪ್ರಕಟಿಸಿದೆ. ಡಿಸೆಂಬರ್ 22ರಂದು ಪಿಕೆಎಲ್ ಶುರುವಾಗಲಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪಿಕೆಎಲ್ ನೂತನ ಆವೃತ್ತಿ ಶುರುವಾಗಲಿದೆ.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಆಗಸ್ಟ್ 29ರಿಂದ 31ರ ವರೆಗೆ ಮುಂಬೈಯಲ್ಲಿ ಪಿಕೆಎಲ್ 8ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ಪಿಕೆಎಲ್ ಆಯೋಜಕರಾದ ಮಾಷಲ್ ಸ್ಪೋರ್ಟ್ಸ್ ಮಂಗಳವಾರ ಪಿಕೆಎಲ್ ಬಗೆಗಿನ ಚಿತ್ರಣ ನೀಡಿದೆ. ಈ ಬಾರಿ ಕಬಡ್ಡಿ ಸೀಸನ್‌ನಲ್ಲಿ ಕೋವಿಡ್ ಕಾರಣದಿಂದ ಮೈದಾನಕ್ಕೆ ಪ್ರೇಕ್ಷಕರ ಪ್ರವೇಶ ಇರುವುದಿಲ್ಲ ಎಂದು ಮಾಷಲ್ ಸ್ಪೋರ್ಟ್ಸ್ ಹೇಳಿದೆ.

ಪಿಕೆಎಲ್ 8ನೇ ಸೀಸನ್‌ ಬಗ್ಗೆ ಮಾಷಲ್ ಸ್ಪೋರ್ಟ್ಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಪಮ್ ಗೋಸ್ವಾಮಿ ಮಾತನಾಡಿ, "ಅತ್ಯುತ್ತಮ ಸುರಕ್ಷತೆಯೊಂದಿಗೆ ದೊಡ್ಡ ಮಟ್ಟದ ಸ್ಪರ್ಧಾತ್ಮಕ ಕ್ರೀಡಾಕೂಟ ನಡೆಸಲು ಬೆಂಗಳೂರು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ನಾವು ಪಿಕೆಎಲ್ 8ನೇ ಸೀಸನ್ ಅನ್ನು ಅಲ್ಲಿ ಆರಂಭಿಸಲು ಮುಂದಡಿಯಿಡುತ್ತಿದ್ದೇವೆ," ಎಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹೊರಕ್ಕೆ!ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹೊರಕ್ಕೆ!

ಕರ್ನಾಟಕದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಪಿಕೆಎಲ್ ಸೀಸನ್‌ ರಾಜ್ಯದಲ್ಲಿ ನಡೆಯುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ಕಬಡ್ಡಿ ಭಾರತದ ನಿಜವಾದ ಸ್ಥಳೀಯ ಕ್ರೀಡೆಯಾಗಿದ್ದು ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಸೀಸನ್ 8 ನಡೆಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ," ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ ನಡೆಸುವಾಗ ಕೋವಿಡ್ ಸಂಬಂಧ ಸರ್ಕಾರದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಬಯೋ ಬಬಲ್ ವಿಚಾರದಲ್ಲಿಯೂ ಎಚ್ಚರಿಕೆ ವಹಿಸುವುದಾಗಿ ಮಾಷಲ್ ಸ್ಪೋರ್ಟ್ಸ್ ತಿಳಿಸಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 18 - October 26 2021, 03:30 PM
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, October 5, 2021, 20:25 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X