ಡೆಲ್ಲಿ ಎದುರು ಮತ್ತೆ ಮುಖಭಂಗ, ಬೆಂಗಳೂರು ಸೋಲಿನ ದಾರಿ ಹಿಡಿಯಿತೇಕೆ?!

ನವದೆಹಲಿ, ಡಿಸೆಂಬರ್ 6: ಬೆಂಗಳೂರು ಕಬಡ್ಡಿ ತಂಡ ಇತ್ತೀಚೆಗೆ ಪ್ರೊ ಕಬಡ್ಡಿಯ ಹೆಚ್ಚಿನ ಪಂದ್ಯಗಳಲ್ಲಿ ಸೋಲನ್ನು ಕಾಣುತ್ತಿದೆ. ಬುಧವಾರ (ಡಿಸೆಂಬರ್ 5) ದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬೆಂಗಳೂರು ಹಿನ್ನಡೆ ಅನುಭವಿಸಿತ್ತು; ಅದೂ ಕೇವಲ ಒಂದೇ ಅಂಕದಿಂದ!
ಪ್ರೊ ಕಬಡ್ಡಿ ಮುಖಪುಟ (ಅಂಕಪಟ್ಟಿ ಸೇರಿ ಹೆಚ್ಚಿನ ಮಾಹಿತಿಗಳು ಇಲ್ಲಿ ಸಿಗುತ್ತವೆ)
ಬುಧವಾರ ನಡೆದಿದ್ದ ಇಂಟರ್ ಝೋನ್ ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ , ದಬಾಂಗ್ ಡೆಲ್ಲಿ ವಿರುದ್ಧ 31-32ರ ಸೋಲೊಪ್ಪಿಕೊಂಡಿತ್ತು. ರೋಹಿತ್ ಕುಮಾರ್ ಮತ್ತು ಪವನ್ ಕುಮಾರ್ ಕ್ರಮವಾಗಿ 12, 10 ಅಂಕಗಳನ್ನು ಸೇರಿಸಿದರೂ ಬೆಂಗಳೂರು ಗೆಲುವಿನಂಚಿನಲ್ಲಿ ಎಡವಿತ್ತು.
ಹಾಗೆ ನೋಡಿದರೆ ಡೆಲ್ಲಿಯ ಮುಂಚೂಣಿ ಆಟಗಾರರಾದ ಚಂದ್ರನ್ ರಂಜಿತ್ ಮತ್ತು ಮೇರಜ್ ಶೈಖ್ ಕ್ರಮವಾಗಿ 9, 7 ಅಂಕಗಳನ್ನಷ್ಟೇ ಸೇರಿಸಿದ್ದು. ಬೆಂಗಳೂರು ಮುಂಚೂಣಿಯ ಆಟಗಾರರಿಗೆ ಹೋಲಿಸಿದರೆ ಇದು ಕಡಿಮೆಯೆ. ಆದರೆ ಡೆಲ್ಲಿಗೆ ಉಳಿದ ಆಟಗಾರರೂ ಸಣ್ಣಸಣ್ಣ ಅಂಕಗಳ ಕೊಡುಗೆ ನೀಡಿದ್ದು ತಂಡವನ್ನು ಮೇಲೆತ್ತಿತ್ತು.
ತಂಡದ ಮುಂಚೂಣಿಯ ಆಟಗಾರರ ಜೊತೆ ಇಡೀ ತಂಡದ ಆಟಗಾರರು ಅಂಕ ಕೂಡಿಸಲು ಯತ್ನಿಸಿದಷ್ಟೂ ಗೆಲುವು ತಂಡದ ಪರ ವಾಲಲಿದೆ. ಬೆಂಗಳೂರು ಎಡವುತ್ತಿರುವುದು ಇಲ್ಲೇ. ನವೆಂಬರ್ 25ರಂದು ಪಾಟ್ನಾ ಎದುರು ಸೋತಿದ್ದ ಬೆಂಗಳೂರು, ನವೆಂಬರ್ 29ರಂದು ಬೆಂಗಾಲ್ ವಾರಿಯರ್ಸ್‌ಗೆ ತಲೆ ಬಾಗಿತ್ತು. ಇದೀಗ ಡೆಲ್ಲಿ ವಿರುದ್ಧವೂ ಮುಖ ಭಂಗ ಅನುಭವಿಸಿದೆ.
ಆರಂಭಿಕ ಬಹುತೇಕ ಪಂದ್ಯಗಳನ್ನು ಗೆಲ್ಲುತ್ತಲೇ ಸಾಗಿ ಅಂಕ ಪಟ್ಟಿಯಲ್ಲಿ ದೊಡ್ಡ ಅಂಕ ಕಲೆ ಹಾಕಿದ್ದ ಬೆಂಗಳೂರು ಅಗ್ರ ಸ್ಥಾನಕ್ಕೇರಿತ್ತು. ಜೊತೆಗೆ ಕೆಳಗಿನ ತಂಡಗಳಿಗಿಂತ ಹೆಚ್ಚು ಅಂಕಗಳ ಅಂತರ ಕಾಯ್ದುಕೊಂಡಿತ್ತು. ಆದರೆ ಇತ್ತೀಚೆಗೆ ಬೆಂಗಳೂರು ಸೋಲಿನ ದಾರಿ ಹಿಡಿದಿರುವುದರಿಂದ ಬಿ ಝೋನ್‌ನಲ್ಲಿ ಪಾಟ್ನಾ ತಂಡ ಬೆಂಗಳೂರಿನ ಸಮೀಪಕ್ಕೆ ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications