ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ ಗೆ 'ಪವರ್' ತಂದ ಸ್ಟಾರ್ ಪುನೀತ್

By Mahesh

ಬೆಂಗಳೂರು, ಜೂನ್ 23: ಹಿಂದಿಯಲ್ಲಿ ಸಲ್ಮಾನ್ ಖಾನ್, ಅಭಿಶೇಕ್ ಬಚ್ಚನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಸೇರಿದಂತೆ ಹಲವಾರು ತಾರೆಯರು ಅಚ್ಚು ಮೆಚ್ಚಿನ ಪ್ರೊ ಕಬಡ್ಡಿ ಲೀಗ್ ಪರ ತೊಡೆ ತಟ್ಟಿದ್ದರು. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಮೂರನೇ ಆವೃತ್ತಿಯ ರಾಯಭಾರಿಯಾಗಿದ್ದರು. ಈಗ ಸ್ಟಾರ್ ಸ್ಫೋರ್ಟ್ಸ್ ಪ್ರೊ ಕಬಡ್ಡಿ ಆಟಕ್ಕೆ ಪುನೀತ್ ಅವರು 'ಪವರ್' ತಂದುಕೊಡಲಿದ್ದಾರೆ.

ಸ್ಟಾರ್ ಸ್ಫೋರ್ಟ್ಸ್ ಪ್ರೊ ಕಬಡ್ಡಿ ಸೀಸನ್ 4 ರ ರಾಯಭಾರಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಸ್ಪಷ್ಟವಾಗಿದೆ ಗುರಿ.. ಸಿದ್ಧವಾಗಿದೆ ಗರಡಿ.. ಎದೆಗೆ ಬಿದ್ದ ಕಿಚ್ಚಿಗೆ ಗೆಲುವಿನ ಮಳೆ ಸುರಿಯೋ ಕಾಲ ಬಂದಾಯ್ತು ..ಇನ್ನು ಕಬ್ಬಡ್ಡಿ ಕಬಡ್ಡಿ ಕಬಡ್ಡಿ ಅಷ್ಟೇ. ತಪ್ಪದೇ ನೋಡಿ Star Sports​ ProKabaddi​ Season 4, ಜೂನ್ 25 ರಿಂದ ರಾತ್ರಿ 7:30 only on Star Sports, Suvarna Plus #hotstar.#AsliPanga ಎಂಬ ಒಕ್ಕಣೆಯೊಂದಿಗೆ ಪುನೀತ್ ಅವರಿರುವ ಜಾಹೀರಾತು ವಿಡಿಯೋ ಕ್ಲಿಪ್ಪಿಂಗ್ ಹಂಚಿಕೆಯಾಗುತ್ತಿದೆ. [ಪ್ರೋ ಕಬಡ್ಡಿ ಲೀಗ್ ಮತ್ತೆ ಶುರು, ವೇಳಾಪಟ್ಟಿ ನೋಡಿ]

Puneeth Rajkumar

ಮೊದಲ ಎರಡು ಸೀಸನ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ವರ್ಷಕ್ಕೆ ಒಮ್ಮೆ ನಡೆಯುತ್ತಿದ್ದ ಕಬಡ್ಡಿ ಲೀಗ್ ಈಗ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ಕ್ರಿಕೆಟ್ ನಂತರ ಕಬಡ್ಡಿಗೆ ಅತಿ ಹೆಚ್ಚು ಕ್ರೀಡಾ ಪ್ರೇಮಿಗಳು ಇದ್ದಾರೆ ಹಾಗೂ ಟಿವಿಯಲ್ಲಿ ವೀಕ್ಷಣೆ ಹೆಚ್ಚಾಗಿದೆ.

ಹೀಗಾಗಿ ಮೂರನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್(ಪಿಕೆಎಲ್) ಮುಗಿದ ಮೂರು ತಿಂಗಳೊಳಗೆ ಮತ್ತೊಮ್ಮೆ ಪಿಕೆಎಲ್ ಆರಂಭವಾಗುತ್ತಿದೆ. ಪಿಕೆಎಲ್ ಸೀಸನ್ 4- ಜೂನ್ 25ರಿಂದ ಜುಲೈ 31ರ ತನಕ ನಡೆಯಲಿದೆ. [ಕನ್ನಡದಲ್ಲೂ ಪ್ರೋ ಕಬಡ್ಡಿ ಲೀಗ್ ವೀಕ್ಷಕ ವಿವರಣೆ]

ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಕಾಮೆಂಟರಿ ಫೀಡ್ ಸಿಗುತ್ತಿದೆ. ಸುಮಾರು 100ಕ್ಕೂ ಅಧಿಕ ದೇಶಗಳಿಗೆ ಸ್ಟಾರ್ ಇಂಡಿಯಾದ ಪ್ರಸಾರ ತಲುಪುತ್ತಿದೆ.

ನಾಲ್ಕನೇ ಸೀಸನ್ ಜೂನ್ 25ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈನಲ್ಲಿ ನಡೆಯಲಿದ್ದು, ಪುಣೇರಿ ಪಲ್ಟಾನ್ ಹಾಗೂ ತೆಲುಗು ಟೈಟನ್ಸ್ ತಂಡ ಸೆಣಸಲಿವೆ.

7 ವಿವಿಧ ಕ್ರೀಡಾಂಗಣಗಳಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿದ್ದು, 8 ತಂಡಗಳು ಸ್ಪರ್ಧಿಸಲಿವೆ. ಪಟ್ನಾ ಪೈರೇಟ್ಸ್ ಹಾಲಿ ಚಾಂಪಿಯನ್ ಆಗಿದೆ.

ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಮಧ್ಯಪ್ರಾಚ್ಯ ಹಾಗೂ ಲ್ಯಾಟಿನ್ ಅಮೆರಿಕಕ್ಕೂ ಕಬಡ್ಡಿ ರಂಗು ತುಂಬುವಲ್ಲಿ ಮೊದಲ ಮೂರು ಲೀಗ್ ಯಶಸ್ವಿಯಾಗಿದೆ.

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X