ಕೊರೊನಾ ವೈರಸ್‌: ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2020 ರದ್ದು

ಕೊರೊನಾ ವೈರಸ್‌ನ ಕಾರಣದಿಂದಾಗಿ ಒಲಿಂಪಿಕ್ಸ್, ಟಿ20 ವಿಶ್ವಕಪ್ ಕ್ರಿಕೆಟ್ ಸೇರಿದಂತೆ ಈ ವರ್ಷ ನಡೆಯಬೇಕಿದ್ದ ಸಾಕಷ್ಟು ಪ್ರಮುಖ ಕ್ರೀಡಾಕೂಟಗಳು ರದ್ದಾಗಿದೆ. ಇದಕ್ಕೆ ಈಗ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಕೂಡ ಸೇರ್ಪಡೆಗೊಂಡಿದೆ.

ಈ ವರ್ಷ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಆಯೋಜನೆಗೆ ತೀರ್ಮಾನಿಸಲಾಗಿತ್ತು. ಜೂನಿಯರ್ ಹಾಗೂ ಸೀನಿಯರ್ ಎಂಬ ಎರಡು ವಿಭಾಗಗಳಲ್ಲಿ ನಡೆಯುವ ಈ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ಅನ್ನು ರದ್ದುಪಡಿಸಲಾಗಿದೆ. ಆದರೆ ಸೀನಿಯರ್ ವಿಶ್ವ ಚಾಂಪಿಯನ್‌ಶಿಪ್‌ಅನ್ನು ನಡೆಸಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೊನಾ ಪಾಸಿಟಿವ್: ತಂಡದಿಂದ ಹೊರಬಿದ್ದ ಸೂಪರ್‌ಸ್ಟಾರ್

ಕೊರೊನಾ ವೈರಸ್‌ನ ಕಾರಣದಿಂದಾಗಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ನಡೆಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ. ಹೀಗಾಗಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ವಿಶ್ವ ಕುಸ್ತಿ ಸಂಸ್ಥೆ ತಿಳಿಸಿದೆ

ಆದರೆ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ನಡೆಸಿದರೆ ಪಾಲ್ಗೊಳ್ಳಲು ಶೇಕಡಾ 70ಕ್ಕೂ ಹೆಚ್ಚಿನ ದೇಶಗಳು ಒಪ್ಪಿಗೆಯನ್ನು ನೀಡಿದೆ. ಹಾಗಾಗಿ ನಿರ್ಧರಿತ ಸಮಯದಲ್ಲಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಹಾಗಿದ್ದರೂ ಮುಂದಿನ ದಿನಗಳ ಪರಿಸ್ಥಿತಿಯನ್ನು ಅವಲೋಕಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವಿಶ್ವ ಕುಸ್ತಿ ಸಂಸ್ಥೆ ಹೇಳಿದೆ.

''ನೀವು ತೋರಿಸಿದ ದಾರಿಯಿಂದ, ನಾನು ಇಲ್ಲಿಗೆ ಬಂದು ತಲುಪಿದ್ದೇನೆ'': ನಿತೀಶ್ ರಾಣಾ ಸಂದೇಶ

ಡಿಸೆಂಬರ್ 12 ರಿಂದ 20ರವರೆಗೆ ಕುಸ್ತಿ ಚಾಂಪಿಯನ್ ಶಿಪ್ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ವಿಶ್ವ ಕುಸ್ತಿ ಸಂಸ್ಥೆ ನವೆಂಬರ್ 6 ರಂದು ಮತ್ತೊಮ್ಮೆ ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದು ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಮುಂದೂಡಲೇ ಬೇಕಾದ ಅನಿವಾರ್ಯತೆಯಿದ್ದಲ್ಲಿ ಅಂದು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 14, 2020, 19:05 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X