ಇದ್ದಕ್ಕಿದ್ದಂತೇ ಬದಲಾದ ಹವಾಮಾನ ; ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 21 ಓಟಗಾರರ ಸಾವು

ಚೀನಾದಲ್ಲಿ 100 ಕಿಲೋಮೀಟರ್ ಕ್ರಾಸ್‌ಕಂಟ್ರಿ ಪರ್ವತ ಓಟವನ್ನು ಏರ್ಪಡಿಸಲಾಗಿತ್ತು. ಈ ಮ್ಯಾರಥಾನ್ ನಡೆಯುವ ವೇಳೆಯೇ ದಿಢೀರನೆ ಸಂಭವಿಸಿದ ಹವಾಮಾನ ವ್ಯತ್ಯಾಸದಿಂದ 21 ಆಟಗಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸಿ ಜೀವ ಉಳಿಸಿದ ಕರ್ನಾಟಕದ ವಾಲಿಬಾಲ್ ಆಟಗಾರ್ತಿ

ಮ್ಯಾರಥಾನ್ ವೇಳೆ ದಿಢೀರನೆ ಸುರಿದ ದೊಡ್ಡ ಆಲಿಕಲ್ಲಿನ ಮಳೆ ಹಾಗೂ ಹೆಚ್ಚಿನ ಗಾಳಿಯಿಂದ 21 ಓಟಗಾರರು ಮೃತಪಟ್ಟಿದ್ದಾರೆ. ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಬಳಿಯ ಯೆಲ್ಲೋ ರಿವರ್ ಸ್ಟೋನ್ ಬಳಿಯ ಅರಣ್ಯ ಭಾಗದ ಎತ್ತರದ ಪ್ರದೇಶದಲ್ಲಿ ಶನಿವಾರ ಈ ಮ್ಯಾರಥಾನ್ ನಡೆದಿತ್ತು. ಮ್ಯಾರಥಾನ್ ನಡೆಯುತ್ತಿದ್ದ ಮಧ್ಯಾಹ್ನದ ವೇಳೆಗೆ ತೀವ್ರ ಹವಾಮಾನವು ದಿಢೀರನೆ ಅಪ್ಪಳಿಸಿದೆ.

ಇಂಗ್ಲೆಂಡನ್ನು 5-0ಯಿಂದ ಸೋಲಿಸುವ ಸಾಮರ್ಥ್ಯ ಭಾರತಕ್ಕಿದೆ: ಪನೇಸರ್

ಘಟನೆಯ ಕುರಿತು ಮಾತನಾಡಿದ ಬೈಯಿನ್ ನಗರದ ಮೇಯರ್ ಜಾಂಗ್ ಕ್ಸುಚೆನ್ ಅವರು, ಮಧ್ಯಾಹ್ನ ಸುಮಾರು 20 ರಿಂದ 31 ಕಿಲೋಮೀಟರ್‌ಗಳ ನಡುವಿನ ಅಲ್ಟ್ರಾಮಾರಾಥಾನ್ ಕೋರ್ಸ್‌ನ ಒಂದು ಭಾಗವು ಹಠಾತ್ತನೆ ಹಾನಿಕಾರಕ ಹವಾಮಾನದಿಂದ ಪ್ರಭಾವಿತವಾಗಿದೆ ಎಂದು ತಿಳಿಸಿದರು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 172 ಓಟಗಾರರ ಪೈಕಿ 18 ಓಟಗಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಉಳಿದ ಆಟಗಾರರನ್ನು ರಕ್ಷಿಸುವುದಾಗಿ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್ ಮುಂದುವರಿಯುವುದು ಅನುಮಾನ; ಪ್ರಮುಖ ಕಾರಣ ಬಿಚ್ಚಿಟ್ಟ ವೃದ್ಧಿಮಾನ್ ಸಾಹ

'ನನ್ನ ಬೂಟು ಮತ್ತು ಸಾಕ್ಸ್ ಸೇರಿದಂತೆ ಇಡೀ ದೇಹವೇ ನೆನೆದು ಹೋಗಿತ್ತು, ಗಾಳಿಯ ರಭಸಕ್ಕೆ ನನಗೆ ನಿಲ್ಲಲು ಕೂಡ ಆಗುತ್ತಿರಲಿಲ್ಲ. ಮಳೆ ಹೆಚ್ಚಾದಷ್ಟೂ ತಡೆದುಕೊಳ್ಳಲಾರದಷ್ಟು ಶೀತ ಹೆಚ್ಚಾಗಿ ಉಸಿರಾಟದ ಸಮಸ್ಯೆ ಕೂಡ ಉಂಟಾಯಿತು, ನಿಜಕ್ಕೂ ನಾನು ಬದುಕುಳಿದಿದ್ದೇ ದೊಡ್ಡ ಚಮತ್ಕಾರ' ಎಂದು ಅವಘಡದಲ್ಲಿ ಬದುಕುಳಿದ ಆಟಗಾರರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡರು.

For Quick Alerts
ALLOW NOTIFICATIONS
For Daily Alerts
Story first published: Sunday, May 23, 2021, 11:56 [IST]
Other articles published on May 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X