For Quick Alerts
ALLOW NOTIFICATIONS  
For Daily Alerts

ಎನ್‌ಐಎಸ್‌ ಪಾಟಿಯಾಲದ 26 ಅಥ್ಲೀಟ್‌ಗಳಿಗೆ ಕೊರೊನಾ ಪಾಸಿಟಿವ್

26 Athletes Test Positive For Coronavirus At NIS Patiala

ಪಾಟಿಯಾಲ: ಪಂಜಾಬ್‌ನ ಪಾಟಿಯಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ (ಎನ್‌ಎಎಸ್) ಸಂಸ್ಥೆಯಲ್ಲಿನ ಒಟ್ಟು 26 ಮಂದಿ ಅಥ್ಲೀಟ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಈ ಸಂಗತಿಯನ್ನು ಪಿಟಿಐಗೆ ತಿಳಿಸಿದೆ.

ಕ್ಯಾಂಪ್‌ನಲ್ಲಿದ್ದ ಸುಮಾರು 380 ಕ್ರೀಡಾಪಟುಗಳು+ಸಿಬ್ಬಂದಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 26 ಅಥ್ಲೀಟ್‌ಗಳ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿರುವ ಕ್ರೀಡಾಪಟುಗಳಲ್ಲಿ ಯಾರೂ ಕೂಡ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಅಥ್ಲೀಟ್‌ಗಳಿಲ್ಲ ಎಂದು ಸಾಯ್ ಮಾಹಿತಿ ನೀಡಿದೆ.

ಕೋವಿಡ್-19 ಸೋಂಕಿತ ಅಥ್ಲೀಟ್‌ಗಳಲ್ಲಿ ಭಾರತೀಯ ಪುರುಷರ ಬಾಕ್ಸಿಂಗ್ ಕೋಚ್ ಸಿಎ ಕುಟ್ಟಪ್ಪ ಮತ್ತು ಶಾಟ್‌ಪುಟ್ ಕೋಚ್ ಮಹೀಂದರ್ ಸಿಂಗ್ ಧಿಲ್ಲಾನ್ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕಿತ ಅಥ್ಲೀಟ್‌ಗಳು ಸದ್ಯ ಐಸೊಲೇಶನ್‌ನಲ್ಲಿದ್ದಾರೆ.

'380 ಕೋವಿಡ್-19 ಪರೀಕ್ಷೆಗಳಲ್ಲಿ 26 ಅಥ್ಲೀಟ್‌ಗಳ ಫಲಿತಾಂಶ ಪಾಸಿಟಿವ್ ಬಂದಿದೆ. ಆದರೆ ಒಳ್ಳೆಯ ಸಂಗತಿ ಏನೆಂದರೆ ಅವರ್ಯಾರೂ ಒಲಿಂಪಿಕ್‌ ಬೌಂಡೆಡ್ ಅಥ್ಲೀಟ್‌ಗಳಲ್ಲ. ಪಾಸಿಟಿವ್ ಬಂದಿರುವ ಅಥ್ಲೀಟ್‌ಗಳು ಐಸೊಲೇಶನ್‌ನಲ್ಲಿದ್ದಾರೆ. ಇಡೀ ಕ್ಯಾಂಪಸ್ ಅನ್ನು ಸ್ಯಾನಿಟೈಸ್ಡ್ ಮಾಡಲಾಗಿದೆ,' ಎಂದು ಸಾಯ್, ಪಿಟಿಐಗೆ ಹೇಳಿದೆ.

Story first published: Thursday, April 1, 2021, 9:50 [IST]
Other articles published on Apr 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+