ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂತರ್ ವಿವಿ ವೇಟ್ ಲಿಫ್ಟಿಂಗ್‌ನಲ್ಲಿ ಆಳ್ವಾಸ್‌ನ ಭವಿಷ್ಯ, ಲಾವಣ್ಯಗೆ ಪದಕ

By Kiran Sirsikar
Alvas college students shine in Inter University weight lifting championship

ಮಂಗಳೂರು, ಡಿಸೆಂಬರ್ 08: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್‍ ಕಾಲೇಜು ವಿದ್ಯಾರ್ಥಿನಿ ಭವಿಷ್ಯ ಪೂಜಾರಿಗೆ ಬೆಳ್ಳಿ ಪದಕ ದೊರೆತಿದೆ. ಆಂಧ್ರ ಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರಿನಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ ಭವಿಷ್ಯ ಬೆಳ್ಳಿ ಪದಕ ಜಯಿಸಿದರೆ, ಇದೇ ಕಾಲೇಜಿನ ಲಾವಣ್ಯ ರೈ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಬ್ಯಾಟ್‌ ಕೆಳಗಿಡುವ ಮುನ್ನ ಆಕರ್ಷಕ ಶತಕ ಬಾರಿಸಿದ ಗೌತಮ್ ಗಂಭೀರ್!ಬ್ಯಾಟ್‌ ಕೆಳಗಿಡುವ ಮುನ್ನ ಆಕರ್ಷಕ ಶತಕ ಬಾರಿಸಿದ ಗೌತಮ್ ಗಂಭೀರ್!

ಆಳ್ವಾಸ್ ನ ದ್ವಿತೀಯ ಬಿ.ಎ. ವಿದ್ಯಾರ್ಥಿನಿಯಾಗಿರುವ ಇವರಿಬ್ಬರು ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದರು. ಭವಿಷ್ಯ ಪೂಜಾರಿ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಶಿವನಗರದ ಪ್ರೇಮಾ-ನವೀನ್ ಪೂಜಾರಿ ದಂಪತಿಯ ಪುತ್ರಿ.

ಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲುಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲು

ಲಾವಣ್ಯ ರೈ ಅವರು ಅರಂಗೋಡು ಜಲಜಾಕ್ಷಿ ರೈ ಹಾಗೂ ರತ್ನಾಕರ ರೈ ದಂಪತಿಯ ಪುತ್ರಿ. ಪದಕ ವಿಜೇತ ವಿದ್ಯಾರ್ಥಿನಿಯರು ಡಿಸೆಂಬರ್ 14 ರಿಂದ ನಾಗ್ಪುರದಲ್ಲಿ ಜರಗಲಿರುವ ರಾಷ್ಟ್ರೀಯ ಜೂನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

Story first published: Saturday, December 8, 2018, 23:23 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X