ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಆರಂಭೋತ್ಸವ: ಸಮಯ, ನೇರಪ್ರಸಾರ, ವಿಶೇಷತೆಗಳು

Asian Games Opening Ceremony: Date, Start Time, Live Streaming

ಜಕಾರ್ತಾ, ಆಗಸ್ಟ್ 17: 'ಎನರ್ಜಿ ಆಫ್ ಏಷ್ಯ' (ಏಷ್ಯಾದ ಶಕ್ತಿ) ಘೋಷಣಾ ವಾಕ್ಯದೊಂದಿದೆ ನಾಳೆ (ಶನಿವಾರ ಆಗಸ್ಟ್ 18) ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಪ್ರಾರಂಭಗೊಳ್ಳಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಕೂಟದ ಆರಂಭೋತ್ಸವ ಹಲವಾರು ವಿಶೇಷತೆಗಳಿಂದ ಕೂಡಿದೆ.

ಏಷ್ಯನ್ ಗೇಮ್ಸ್ 2018: ಭಾರತದ ಪದಕ ಭರವಸೆಯ ಟಾಪ್ ಸ್ಪರ್ಧಿಗಳಿವರುಏಷ್ಯನ್ ಗೇಮ್ಸ್ 2018: ಭಾರತದ ಪದಕ ಭರವಸೆಯ ಟಾಪ್ ಸ್ಪರ್ಧಿಗಳಿವರು

ಜಕಾರ್ತಾದ ಗೆಲೋರಾ ಬಂಗ್ ಕರ್ನೊ ಸ್ಟೇಡಿಯಂ ಈ ಕ್ರೀಡಾಕೂಟದ ಅದ್ದೂರಿ ಚಾಲನೆಗೆ ಸಜ್ಜಾಗಿ ನಿಂತಿದೆ. ಶನಿವಾರ ಸಂಜೆ 5.30pm ನಿಂದ ಆರಂಭೋತ್ಸವ ನಡೆಯಲಿದೆ. ಸೋನಿ ಟೆನ್ 1, ಸೋನಿ ಟೆನ್ 2, ಸೋನಿ ಇಎಸ್ಪಿಎನ್ ಚಾನೆಲ್ ಗಳು ಕಾರ್ಯಕ್ರಮದ ನೇರಪ್ರಸಾರ ಮಾಡಲಿವೆ. ನೆಟ್ಟಿಗರಿಗಾಗಿ ಕಾರ್ಯಕ್ರಮ ಸೋನಿ ಲೈವ್ (Sony Liv) ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಪ್ರತಿದಿನ ಬೆಳಿಗ್ಗೆ 7 am ನಿಂದ ರಾತ್ರಿ 7 pm ವರೆಗೆ ಕ್ರೀಡಾಸ್ಪರ್ಧೆಗಳು ನಡೆಯಲಿವೆ.

Asian Games Opening Ceremony: Date, Start Time, Live Streaming

ತಾರಾಗಣ ಮೆರಗು
ಆರಂಭೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ತಾರೆಯರ ಬಳಗ ಗಮನ ಸೆಳೆಯಲಿದೆ. ಇಂಡೋನೇಷ್ಯಾದ ಹೆಸರಾಂತ ಹಾಡುಗಾರರಾದ ಅಂಗುನ್, ರೈಸಾ, ತುಲಸ್, ಎಡೊ ಕೊಂಡೋಲಾಜಿಟ್, ಪುಟ್ರಿ ಆಯು, ಫಾಟಿನ್, ಜಿಎಸಿ, ಕಮೇಶನ್ ಮತ್ತು ವಿಯಾ ವಲ್ಲನ್ ಮೊದಲಾದವರು ಕಾರ್ಯಕ್ರಮವನ್ನು ಚಂದಗಾಣಿಸಲಿದ್ದಾರೆ.

ಹಾಡುಗಾರಿಕೆಯೊಂದಿಗೆ ಖ್ಯಾತ ತಾರೆಯಿಂದ ನೃತ್ಯ ಪ್ರದರ್ಶನ, ರೂಪಕಗಳು, ಮ್ಯಾಜಿಕ್ ಶೋ, ಕಲಾತ್ಮಕ ಕಾರ್ಯಕ್ರಮಗಳಂತಹ ಅಚ್ಚರಿಯ ಕಾರ್ಯಕ್ರಮಗಳೂ ಆರಂಭೋತ್ಸವ ಮತ್ತು ಕಾರ್ಯಕ್ರಮ ಮುಕ್ತಾಯ ಸಮಾರಂಭದಲ್ಲಿ ನಡೆಯುವುದರಲ್ಲಿದೆ ಎಂದು ಇಂಡೋನೇಷ್ಯಾದ ಎನ್ಇಟಿ ಟೆಲಿವಿಷನ್ ನ ಸ್ಥಾಪಕಾಧ್ಯಕ್ಷ ವಿಷ್ಣುತಾಮ ತಿಳಿಸಿದ್ದಾರೆ.

Asian Games Opening Ceremony: Date, Start Time, Live Streaming

ಸುಮಾರು 120 ಮೀ. ಉದ್ದ, 30 ಮೀ. ಅಗಲ, 26 ಮೀ ಎತ್ತರದ ಸ್ಟೇಜ್ ನಲ್ಲಿ ಏಷ್ಯನ್ ಗೇಮ್ಸ್ ನ ಆರಂಭಿಕ ಮತ್ತು ಮುಕ್ತಾಯ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 4,000 ಡ್ಯಾನ್ಸರ್ ಗಳು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು 18ನೇ ಏಷ್ಯನ್ ಗೇಮ್ಸ್ ನ ಆರಂಭಿಕ ಮತ್ತು ಮುಕ್ತಾಯ ಸಮಾರಂಭದ ಸೃಜನಾತ್ಮಕ ನಿರ್ದೇಶಕ ವಿಷ್ಣುತಾಮ ಮಾಹಿತಿ ನೀಡಿದ್ದಾರೆ.

ಇಂಥ ದೊಡ್ಡ ಮಟ್ಟದ ಕಾರ್ಯಕ್ರಮ ಎರಡು ತಾಣಗಳಲ್ಲಿ (ಜಕಾರ್ತಾ ಮತ್ತು ಪಾಲೆಂಬಾಂಗ್) ಆಯೋಜನೆಗೋಳ್ಳುತ್ತಿರುವುದು ಮೊದಲಬಾರಿ. ಆರಂಭಿಕ ಮತ್ತು ಮುಕ್ತಾಯ ಸಮಾರಂಭ ಮಾತ್ರ ಜಕಾರ್ತಾದಲ್ಲೇ ನಡೆಯಲಿದೆ. ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ 36 ವಿವಿಧ ಕ್ರೀಡಾಸ್ಪರ್ಧೆಗಳಿಗಾಗಿ ಒಟ್ಟು 572 ಕ್ರೀಡಾಳುಗಳನ್ನು ಹೆಸರಿಸಿದೆ.

Story first published: Friday, August 17, 2018, 20:12 [IST]
Other articles published on Aug 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X