ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ವರ್ಣರಂಜಿತ ಆರಂಭೋತ್ಸವಕ್ಕೆ ಅದ್ದೂರಿ ಚಾಲನೆ

Asian Opening Ceremony: Neeraj Chopra to be Indias Flag Bearer

ಜಕಾರ್ತಾ, ಆಗಸ್ಟ್ 18: ಇಂಡೋನೇಷ್ಯಾದ ಜಕಾರ್ತಾದಲ್ಲಿ ಇಂದಿನಿಂದ (ಆಗಸ್ಟ್ 18) ಆರಂಭಗೊಳ್ಳುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಅದ್ದೂರಿ ಆರಂಭೋತ್ಸವಕ್ಕೆ ಇಂದು ಚಾಲನೆ ದೊರೆತಿದೆ. ಜಕಾರ್ತಾದ ಗೆಲೋರಾ ಬಂಗ್ ಕರ್ನೊ ಮುಖ್ಯ ಸ್ಟೇಡಿಯಂನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ವಿಯಾ ವಲ್ಲನ್ ಮಧುರ ಕಂಠದ ಗೀತೆ ನೆರೆದವರನ್ನು ರಂಜಿಸಿತು. ಆ ಬಳಿಕ ಇಂಡೋನೇಷ್ಯಾದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

572 ಸ್ಪರ್ಧಿಗಳಿರುವ ಭಾರತ ತಂಡವನ್ನು ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಮುನ್ನಡೆಸಿದರು. ವಿವಿಧ ರಾಷ್ಟ್ರಗಳ ಕ್ರೀಡಾಸ್ಪರ್ಧಿಗಳು ಮೆರವಣಿಯಲ್ಲಿ ತೊಡಗಿದ್ದಾರೆ. ದೀಪಗಳ ಅಲಂಕಾರ, ಸಂಗೀತದ ಇಂಪು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದೆ.

ಒಲಿಂಪಿಕ್ಸ್ ಬಳಿಕ ಹೆಚ್ಚು ಪೈಪೋಟಿಯಿಂದ ಕೂಡಿದ ಕ್ರೀಡಾಕೂಟವಾಗಿ ಏಷ್ಯನ್ ಗೇಮ್ಸ್ ಗುರುತಿಸಿಕೊಂಡಿದೆ. ಕಾರಣ ಇದರಲ್ಲಿ ಚೀನಾ, ಜಪಾನ್, ಸೌತ್ ಕೊರಿಯಾ, ನಾರ್ತ್ ಕೊರಿಯಾ, ಥಾಯ್ಲೆಂಡ್ ಮತ್ತು ಉಜ್ಬೇಕಿಸ್ತಾನ್ ನಂತ ಬಲಾಡ್ಯ ದೇಶಗಳು ಪಾಲ್ಗೊಳ್ಳುತ್ತಿವೆ. ಒಟ್ಟು 46 ರಾಷ್ಟ್ರಿಗಳು ಈ ಕ್ರೀಡಾಕೂಟದಲ್ಲಿ ಪದಕಕ್ಕಾಗಿ ಸ್ಪರ್ಧೆಗಿಳಿಯಲಿವೆ.

ಸುಮಾರು 4,000 ಇಂಡೋನೇಷ್ಯಾನ್ ನೃತ್ಯಕಲಾವಿದರು ನರ್ತನದ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವ 46 ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳನ್ನು ಬರ ಮಾಡಿಕೊಂಡರು. ಕ್ರೀಡಾಕೂಟದ ಆವರಣದಲ್ಲಿ ಹಬ್ಬದ ವಾತಾವರಣವಿದೆ.

ಹಾಡುಗಾರಿಕೆಯೊಂದಿಗೆ ಖ್ಯಾತ ತಾರೆಯಿಂದ ನೃತ್ಯ ಪ್ರದರ್ಶನ, ರೂಪಕಗಳು, ಮ್ಯಾಜಿಕ್ ಶೋ, ಕಲಾತ್ಮಕ ಕಾರ್ಯಕ್ರಮಗಳಂತಹ ಅಚ್ಚರಿಯ ಕಾರ್ಯಕ್ರಮಗಳೂ ಆರಂಭೋತ್ಸವ ಮತ್ತು ಕಾರ್ಯಕ್ರಮ ಮುಕ್ತಾಯ ಸಮಾರಂಭದಲ್ಲಿ ನಡೆಯುವುದರಲ್ಲಿದೆ ಎಂದು ಇಂಡೋನೇಷ್ಯಾದ ಎನ್ಇಟಿ ಟೆಲಿವಿಷನ್ ನ ಸ್ಥಾಪಕಾಧ್ಯಕ್ಷ ವಿಷ್ಣುತಾಮ ತಿಳಿಸಿದ್ದಾರೆ.

ಸೋನಿ ಟೆನ್ 1, ಸೋನಿ ಟೆನ್ 2, ಸೋನಿ ಇಎಸ್ಪಿಎನ್ ಚಾನೆಲ್ ಗಳು ಆರಂಭೋತ್ಸವದ ಕಾರ್ಯಕ್ರಮದ ನೇರಪ್ರಸಾರ ಮಾಡಲಿವೆ. ನೆಟ್ಟಿಗರಿಗಾಗಿ ಕಾರ್ಯಕ್ರಮ ಸೋನಿ ಲೈವ್ (Sony Liv) ನಲ್ಲಿ ನೇರ ಪ್ರಸಾರಗೊಳ್ಳಲಿದೆ.

Story first published: Saturday, August 18, 2018, 18:43 [IST]
Other articles published on Aug 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X