ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಸ್ಲಿಂಗ್ ಚಾಂಪಿಯನ್‌ಶಿಪ್ಸ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಬಜರಂಗ್

Bajrang wins silver to become first Indian with two WWC medals

ಬುಡಾಪೆಸ್ಟ್, ಅಕ್ಟೋಬರ್ 23: ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಬಜರಂಗ್ ಪೂನಿಯಾ ಅವರು ಬೆಳ್ಳಿ ಜಯಿಸಿದ್ದಾರೆ. ಈ ಮೂಲಕ ಬಜರಂಗ್, ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಕೀರ್ತಿಗೂ ಪಾತ್ರರಾಗಿದ್ದಾರೆ.

ಯೂತ್ ಒಲಿಂಪಿಕ್ಸ್: ರೈತನ ಮಗ ಆಕಾಶ್ ಮಲಿಕ್ ಗೆ ಆರ್ಚರಿಯಲ್ಲಿ ಬೆಳ್ಳಿಯೂತ್ ಒಲಿಂಪಿಕ್ಸ್: ರೈತನ ಮಗ ಆಕಾಶ್ ಮಲಿಕ್ ಗೆ ಆರ್ಚರಿಯಲ್ಲಿ ಬೆಳ್ಳಿ

ಸೋಮವಾರ (ಅಕ್ಟೋಬರ್ 22) ನಡೆದ ಪುರುಷರ 65 ಕೆಜಿ ಫ್ರೀ ಸ್ಟೈಲ್ ವಿಭಾಗದ ಫೈನಲ್ ಪಂದ್ಯದಲ್ಲಿ ಪೂನಿಯಾ, ಜಪಾನ್ ನ ಟಕುಟೊ ಒಟೊಗುರೊ ವಿರುದ್ಧ 9-16 ಅಂತರದಿಂದ ಹಿನ್ನಡೆ ಅನುಭವಿಸಿದರು. ಇದಕ್ಕೂ ಮೊದಲು ಬಜರಂಗ್ 2013ರ ಆವೃತ್ತಿಯಲ್ಲಿ ಕಂಚು ಜಯಿಸಿದ್ದರು.

ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ 24ರ ಹರೆಯದ ಪೂನಿಯಾ, 'ಫೈನಲ್ ಗೆ ಪ್ರವೇಶಿಸಿದಾಗ ಬಂಗಾರ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಸ್ಪಲ್ಪದರಲ್ಲಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡೆ' ಎಂದರು. ಈ ವಿಭಾಗದಲ್ಲಿ ಬಂಗಾರ ಗೆದ್ದ ಜಪಾನ್ ನ 19ರ ಹರೆಯದ ರಸ್ಲರ್ ಟಕುಟೊ, ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡು ಪದಕ ಗೆದ್ದ ವಿಶ್ವದ ಕಿರಿಯ ಕುಸ್ತಿಪಟು ಹಿರಿಮೆಗೆ ಪಾತ್ರರಾದರು.

Story first published: Tuesday, October 23, 2018, 17:45 [IST]
Other articles published on Oct 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X