ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ 2020ನಿಂದ ಹೊರ ನಡೆದ ಮೊದಲ ದೇಶ ಕೆನಡಾ

Canada first nation to pull out of Tokyo 2020 Olympics amid coronavirus pandemic

ಒಟ್ಟಾವಾ, ಮಾರ್ಚ್ 23: ಟೋಕಿಯೋ ಒಲಿಂಪಿಕ್ಸ್‌ 2020ನಿಂದ ಹಿಂದೆ ಸರಿದ ಮೊದಲ ದೇಶವಾಗಿ ಕೆನಡಾ ಗುರುತಿಸಿಕೊಂಡಿದೆ. ಕೊರೊನಾವೈರಸ್‌ ಭೀತಿಯಿಂದಾಗಿ ಕೆನಡಿಯನ್ ಒಲಿಂಪಿಕ್ ಕಮಿಟಿ (ಸಿಒಸಿ) ಮತ್ತು ಕೆನಡಿಯನ್ ಪ್ಯಾರಾಲಂಬಿಕ್ ಕಮಿಟಿ (ಸಿಪಿಸಿ) ತಮ್ಮ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಭಾನುವಾರ (ಮಾರ್ಚ್ 22) ತಿಳಿಸಿದೆ.

ಜಾದೂಗಾರನಾಗಿ ಬದಲಾದ ಶ್ರೇಯಸ್ ಐಯ್ಯರ್: ವೈರಲ್ ವೀಡಿಯೋಜಾದೂಗಾರನಾಗಿ ಬದಲಾದ ಶ್ರೇಯಸ್ ಐಯ್ಯರ್: ವೈರಲ್ ವೀಡಿಯೋ

ಟೋಕಿಯೋ ಒಲಿಂಪಿಕ್ಸ್‌ಗೆ ಕೊರೊನಾವೈರಸ್ ಕಂಟಕ ಎದುರಾಗಿದೆ. ಈಗಾಗಲೇ ಒಲಿಂಪಿಕ್ ತಯಾರಿಯಲ್ಲಿರುವ ಜಪಾನ್‌ಗೆ ಮಾರಕ ಸೋಂಕು ತಲೆ ನೋವು ತಂದಿದೆ. ಬಹುತೇಕ ಒಲಿಂಪಿಕ್ ಕಮಿಟಿಗಳು ಪ್ರತಿಷ್ಠಿತ ಕ್ರೀಡಾಕೂಟವನ್ನು ಮುಂದೂಡುವಂತೆ ಹೇಳುತ್ತಿವೆ.

ಸಿಬ್ಬಂದಿ, ಕೋಚ್‌ಗಳಿಗೆ 4.5 ಕೋಟಿ ರೂ. ಸಂಬಳ ಬಾಕಿ ಉಳಿಸಿದ ಡೆಲ್ಲಿಸಿಬ್ಬಂದಿ, ಕೋಚ್‌ಗಳಿಗೆ 4.5 ಕೋಟಿ ರೂ. ಸಂಬಳ ಬಾಕಿ ಉಳಿಸಿದ ಡೆಲ್ಲಿ

ವಿಶ್ವದಾದ್ಯಂತ ಸುಮಾರು 3,37,553 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸುಮಾರು 14,000 ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. 98,000 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲೂ ಕೊರೊನಾವೈರಸ್ ಆತಂಕಕಾರಿ ಮಟ್ಟದಲ್ಲೇ ಇದೆ.

ಕೊರೊನಾ ವೈರಸ್: ಭಾರತದ ಮಾಜಿ ಕ್ರಿಕೆಟಿಗರ ಐತಿಹಾಸಿಕ ಜೊತೆಯಾಟ ನೆನಪಿಸಿದ ಪ್ರಧಾನಿ ಮೋದಿಕೊರೊನಾ ವೈರಸ್: ಭಾರತದ ಮಾಜಿ ಕ್ರಿಕೆಟಿಗರ ಐತಿಹಾಸಿಕ ಜೊತೆಯಾಟ ನೆನಪಿಸಿದ ಪ್ರಧಾನಿ ಮೋದಿ

'ಸಿಒಸಿ ಮತ್ತು ಸಿಪಿಸಿಯು ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಒಸಿ), ಇಂಟರ್ ನ್ಯಾಷನಲ್ ಪ್ಯಾರಾಲಂಪಿಕ್ ಕಮಿಟಿ (ಐಪಿಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (ಡಬ್ಲ್ಯೂಎಚ್‌ಒ) ಒಂದು ವರ್ಷದ ಮಟ್ಟಿಗೆ ಒಲಿಂಪಿಕ್ಸ್‌ ಗೇಮ್ ಅನ್ನು ಮುಂದೂಡುವಂತೆ ಕೋರಿಕೊಳ್ಳುತ್ತದೆ,' ಎಂದು ಕೆನಡಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Story first published: Monday, March 23, 2020, 11:11 [IST]
Other articles published on Mar 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X