ಕಾಮನ್‌ವೆಲ್ತ್‌: 58 ವರ್ಷದ ನಂತರ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ

Posted By:

58 ವರ್ಷದ ಹಿಂದೆ ಭಾರತದ ಅಥ್ಲೀಟ್ ಮಿಲ್ಕಾ ಸಿಂಗ್ ಅವರು ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಯಾವೊಬ್ಬ ಅಥ್ಲೀಟ್ ಕೂಡಾ ಕಾಮನ್‌ವೆಲ್ತ್‌ ಅಥ್ಲೀಟ್ ವಿಭಾಗದಲ್ಲಿ ಚಿನ್ನ ಗೆದ್ದಿರಲಿಲ್ಲ, ಆದರೆ ಆ ಕೊರತೆ ಇಂದು ನೀಗಿದೆ.

ಭಾರತದ ನೀರಜ್ ಚೋಪ್ರಾ ಅವರು ಕಾಮನ್‌ವೆಲ್ತ್ ನ ಅಥ್ಲೆಟಿಕ್ಸ್ ವಿಭಾಗದ ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.

ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಇದಾಗಿದ್ದು, ಅಥ್ಲೀಟ್ ನೀರಜ್ ಚೋಪ್ರಾ ಅವರು ತಮ್ಮಚೊಚ್ಚಿಲ ಕಾಮನ್‌ವೆಲ್ತ್‌ ಟೂರ್ನಿಯಲ್ಲೇ ಚಿನ್ನದ ಸಾಧನೆ ಮಾಡಿದ ಕೆಲವೇ ಕೆಲವು ಭಾರತೀಯರ ಪಟ್ಟಿ ಸೇರಿ ಸಾಧನೆ ಮಾಡಿದ್ದಾರೆ.

ಚೋಪ್ರಾ ಅವರು ಜಾವೆಲಿನ್ ಅನ್ನು 86.47 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡರು. ಮೊದಲೆರಡು ಎಸೆತದಲ್ಲಿ ಅವರು ಕ್ರಮವಾಗಿ 85.50, 84.73 ಎಸೆದಿದ್ದರು. ಕೊನೆಯ ಪ್ರಯತ್ನದಲ್ಲಿ ಎಸೆದ 86.47 ಈ ಋತುವಿನ ಸರ್ವ ಶ್ರೇಷ್ಠ ಎಸೆತವಾಗಿದೆ.

ಹರಿಯಾಣ ರಾಜ್ಯದ ಪಾಣಿಪತ್ ಸಮೀಪದ ಕಾಂದ್ರ ಹಳ್ಳಿಯ ನೀರಜ್‌ ಅವರ ಹೆಸರಿನಲ್ಲಿ ಜಾವೆಲಿನ್ ಥ್ರೋನ ರಾಷ್ಟ್ರೀಯ ದಾಖಲೆ ಸಹ ಇದೆ.

ಜಾವೆಲಿನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಭಾರತೀಯ ವಿಪಿನ್ ಕಶನಾ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Story first published: Saturday, April 14, 2018, 12:48 [IST]
Other articles published on Apr 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ