ಮಹಿಳೆಯರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಹೀನಾ ಸಿಧು

Posted By:
CWG 2018: Heena Sidhu wins gold in 25M Pistol

ಬೆಂಗಳೂರು, ಏಪ್ರಿಲ್ 10: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಚಿನ್ನ ಗೆದ್ದಿದ್ದಾರೆ.

ಇದು ಕ್ರೀಡಾಕೂಟದಲ್ಲಿ ಹೀನಾ ಸಿಧು ಅವರ ಎರಡನೆಯ ಪದಕವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರು ಭಾನುವಾರ ಬೆಳ್ಳಿ ಪದಕ ಜಯಿಸಿದ್ದರು.

ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ

38 ಅಂಕ ಪಡೆದ ಹೀನಾ ಸಿಧು ಮೊದಲ ಸ್ಥಾನ ಗಳಿಸಿದರು. ಅವರಿಗೆ ಪೈಪೋಟಿ ನೀಡಿದ ಆಸ್ಟ್ರೇಲಿಯಾದ ಎಲೆನಾ ಗಲಿಯಾಬೊವಿಚ್ 35 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡರು. ಮಲೇಷ್ಯಾದ ಅಲಿಯಾ ಸಾಜನಾ ಅಜಹರಿ ಕಂಚಿನ ಪದಕ ಜಯಿಸಿದರು.

ಚಿನ್ನ ಗೆದ್ದ ಹೀನಾಗೆ ಲಕ್ಷ್ಮಣ್ ಶುಭಾಶಯ

ಇದು ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ 11ನೆಯ ಸ್ವರ್ಣ ಪದಕವಾಗಿದೆ. ಮತ್ತೊಬ್ಬ ಶೂಟರ್ ಅನ್ನುಸಿಂಗ್ ಆರನೇ ಸ್ಥಾನ ಪಡೆದರು.

ಕಾಮನ್‌ವೆಲ್ತ್ ಗೇಮ್ಸ್: 5ನೇ ದಿನದ ಆರಂಭದಲ್ಲಿಯೇ ಮೂರು ಪದಕ

ಕ್ರೀಡಾಕೂಟದ ಆರನೇ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು. ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಎಂಟು ಚಿನ್ನದ ಪದಕಗಳನ್ನು ತಂದಿದ್ದ ಶೂಟರ್ ಗಗನ್ ನಾರಂಗ್, ಪುರುಷರ 50 ಮೀಟರ್ ಏರ್ ರೈಫಲ್‌ನಲ್ಲಿ ಏಳನೇ ಸ್ಥಾನ ಪಡೆದರೆ, ಮತ್ತೊಬ್ಬ ಭಾರತೀಯ ಕ್ರೀಡಾಪಟು ಚೈನ್ ಸಿಂಗ್ ನಾಲ್ಕನೇ ಸ್ಥಾನ ಗಳಿಸಿದರು. ಈ ನಿರಾಶೆಯನ್ನು ಹೀನಾ ಮರೆಸಿದರು.

Story first published: Tuesday, April 10, 2018, 12:48 [IST]
Other articles published on Apr 10, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ