ಕಾಮನ್‌ವೆಲ್ತ್ ಗೇಮ್ಸ್: ಮಹಿಳೆಯರ ಟೇಬಲ್‌ ಟೆನ್ನಿಸ್‌ನಲ್ಲಿ ಭಾರತಕ್ಕೆ ಚಿನ್ನ

Posted By:
CWG 2018: manika batra won gold for india in table tennis

ಬೆಂಗಳೂರು, ಏಪ್ರಿಲ್ 08: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನ ನಾಲ್ಕನೇ ದಿನ ಭಾರತ ಪದಕಗಳ ಬೇಟೆ ನಡೆಸಿದೆ.

ಮಹಿಳೆಯರ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತದದ ವನಿತೆಯರು ಸಿಂಗಪುರದ ತಂಡಕ್ಕೆ ಆಘಾತ ನೀಡಿದ್ದಾರೆ. ಮಹಿಳಾ ತಂಡದ ಟೇಬಲ್ ಟೆನ್ನಿಸ್‌ನಲ್ಲಿ ಭಾರತೀಯ ತಂಡವು 3-1ರಿಂದ ಸಿಂಗಪುರವನ್ನು ಮಣಿಸಿತು.

ಕಾಮನ್ ವೆಲ್ತ್ : ವೇಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಪೂನಮ್

ಇದು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಟೇಬಲ್ ಟೆನ್ನಿಸ್‌ ವಿಭಾಗದಲ್ಲಿ ಭಾರತದ ಮೊದಲ ಪದಕವಾಗಿದ್ದು, ಇತಿಹಾಸ ಸೃಷ್ಟಿಸಿದೆ.

ತಮ್ಮ ಎರಡೂ ಸಿಂಗಲ್ ಪಂದ್ಯಗಳನ್ನು ಗೆಲ್ಲುವ ಮೂಲಕ ಮಣಿಕಾ ಬಾತ್ರಾ ಸ್ಟಾರ್ ಪರ್ಫಾರ್ಮರ್ ಎನಿಸಿಕೊಂಡರು. ಮವುಮಾ ದಾಸ್ ಮತ್ತು ಮಧುರಿಕಾ ಪಾಟ್ಕರ್ ತಮ್ಮ ಡಬಲ್ಸ್ ಮ್ಯಾಚ್ಅನ್ನು ಗೆದ್ದುಕೊಂಡರು.

ಇದು ಕ್ರೀಟಾಕೂಟದಲ್ಲಿ ಭಾರತಕ್ಕೆ ಒಲಿದ ಏಳನೇ ಚಿನ್ನವಾಗಿದೆ.

ದೆಹಲಿಯವರಾದ 22 ವರ್ಷದ ಮಣಿಕಾ ಬಾತ್ರಾ ಭಾರತದ ಅತ್ಯುನ್ನತ ಶ್ರೇಣಿಯ ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿದ್ದು, ವಿಶ್ವಮಟ್ಟದಲ್ಲಿ 58ನೇ ಶ್ರೇಯಾಂಕಿತರಾಗಿದ್ದಾರೆ. ಮೊದಲ ಪಂದ್ಯದಲ್ಲಿ
ತಿಯಾನ್ವೆ ಫೆಂಗ್ ಅವರನ್ನು ಬಾತ್ರಾ 48-46 ರಿಂದ ಮಣಿಸಿದರು.

ಕಾಮನ್‌ವೆಲ್ತ್ ಗೇಮ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ 16ರ ಮಧು ಭಾಕೇರ್

ಎರಡನೆಯ ಪಂದ್ಯದಲ್ಲಿ ತಿರುಗೇಟು ನೀಡಿದ ಸಿಂಗಪುರದ ಮೆಂಗ್ಯು ಯು ಅವರು ಭಾರತದ ಪಾಟ್ಕರ್ಅವರನ್ನು 35-19ರಿಂದ ಸೋಲಿಸಿ ಸಮಬಲ ಸಾಧಿಸಿದರು. ಬಳಿಕ ನಡೆದ ಡಬಲ್ಸ್‌ನಲ್ಲಿ ಪಾಟ್ಕರ್ ಮತ್ತು ದಾಸ್‌ ಜಯಗಳಿಸಿ ಮತ್ತೆ ಮುನ್ನಡೆ ತಂದಿಟ್ಟರು.

ನಾಲ್ಕನೇ ಪಂದ್ಯದಲ್ಲಿ ಬಾತ್ರಾ ಎದುರಾಳಿಗೆ ಪೈಪೋಟಿ ನೀಡುವ ಯಾವ ಅವಕಾಶವನ್ನೂ ನೀಡಲಿಲ್ಲ. ಯಿಯಾನ್ ಝೊವು ಅವರನ್ನು 33-18ರಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿದರು.

Story first published: Sunday, April 8, 2018, 18:11 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ