ಕಾಮನ್‌ವೆಲ್ತ್ ಗೇಮ್ಸ್: ವೇಯ್ಟ್ ಲಿಫ್ಟಿಂಗ್‌ನಲ್ಲಿ ವಿಕಾಸ್ ಠಾಕೂರ್‌ಗೆ ಕಂಚು

Posted By:
CWG 2018: Vikas Thakur wins bronze medal in 94kg weightlifting

ಬೆಂಗಳೂರು, ಏಪ್ರಿಲ್ 08: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ವೇಯ್ಟ್ ಲಿಫ್ಟರ್ ವಿಕಾಸ್ ಠಾಕೂರ್ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.

ಪುರುಷರ 94 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

351 ಕೆಜಿ ತೂಕವನ್ನು ಎತ್ತಿದ ವಿಕಾಸ್, ವೇಯ್ಟ್ ಲಿಫ್ಟಿಂಗ್‌ನಲ್ಲಿ ದೇಶಕ್ಕೆ 8ನೇ ಪದಕ ಜಯಿಸಿದರು. ಲೂಧಿಯಾನಾದ ವಿಕಾಸ್, ಗ್ಲಾಸ್ಕೊದಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 85 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಆಗ ಅವರ ವಯಸ್ಸು ಕೇವಲ 20.

ಕಾಮನ್ ವೆಲ್ತ್ : ವೇಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಪೂನಮ್

ಈ ಬಾರಿ 94 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ವಿಕಾಸ್, ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನ್ಯಾಚ್ ವಿಭಾಗದಲ್ಲಿ 152 ಕೆಜಿ, 156 ಕೆಜಿ ಮತ್ತು 159 ಕೆಜಿಯನ್ನು ಸಲೀಸಾಗಿ ಎತ್ತಿದ್ದ ವಿಕಾಸ್, ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 192 ಕೆಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ 200 ಕೆಜಿ ತೂಕವನ್ನು ಎತ್ತಿದರೂ ಜರ್ಕ್‌ನಲ್ಲಿ ವಿಫಲರಾಗಿ ಕೈಚೆಲ್ಲಿದರು. ಮೂರನೇ ಪ್ರಯತ್ನದಲ್ಲಿ 200 ಕೆಜಿ ತೂಕವನ್ನು ಎತ್ತುವುದು ಅವರಿಂದ ಸಾಧ್ಯವಾಗಲಿಲ್ಲ. ಮೊದಲ ಸ್ಥಾನದಿಂದ 13 ಅಂಕಗಳಷ್ಟು ಹಿಂದುಳಿದಿದ್ದರು.

ಕಾಮನ್‌ವೆಲ್ತ್ ಗೇಮ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ 16ರ ಮಧು ಭಾಕೇರ್

ಅವರಿಗೆ ಪ್ರಬಲ ಪೈಪೋಟಿ ನೀಡಿದ ಪಪುವಾ ನ್ಯೂಗಿನಿಯ ಸ್ಟೀವರ್ ಕ್ಯಾರಿ 202 ಕೆಜಿ ಭಾರವನ್ನು ಎತ್ತುವ ಮೂಲಕ ಎರಡನೆಯ ಸ್ಥಾನಕ್ಕೆ ಏರಿದರು. ಹೀಗಾಗಿ ವಿಕಾಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಆಯಿತು.

Read more about: 2018 commonwealth games cwg medal
Story first published: Sunday, April 8, 2018, 13:02 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ