ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ರೆಸ್ಲಿಂಗ್‌ನಲ್ಲಿ ಮತ್ತೆರಡು ಚಿನ್ನ: ಬಜರಂಗ್ ಪುನಿಯಾ ಬಳಿಕ ಚಿನ್ನದ ಪದಕ ಗೆದ್ದ ಸಾಕ್ಷಿ ಮಲಿಕ್, ದೀಪಕ್ ಪುನಿಯಾ!

CWG 2022 After Bajrang Punia Sakshi Malik and Deepak Punia also won Gold medal

ಭಾರತದ ಮಹಿಳಾ ಸ್ಟಾರ್ ರೆಸ್ಲರ್ ಸಾಕ್ಷಿ ಮಲಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಶುಕ್ರವಾರ ರೆಸ್ಲಿಂಗ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡಂತಾಗಿದೆ. ಬಜರಂಗ್ ಪುನಿಯಾ ಚಿನ್ನ ಗೆದ್ದ ಕೆಲವೇ ಕ್ಷಣಗಳ ಅಂತರದಲ್ಲಿ ಸಾಕ್ಷಿ ಮಲಿಕ್ ಕೂಡ ಅಂಥಾದ್ದೇ ಸಾಧನೆ ಮಾಡಿದ್ದಾರೆ. ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದು ಸಾಕ್ಷಿ ಮಲಿಕ್ ಅವರ ಮೂರನೇ ಕಾಮನ್‌ವೆಲ್ತ್ ಪದಕವಾಗಿದ್ದು ಮೊದಲ ಚಿನ್ನದ ಪದಕ ಎಂಬುದು ಗಮನಾರ್ಹ. ಇನ್ನು ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಕಂಚಿನ ಪದಕವನ್ನು ಗೆದ್ದ ಸಾಧನೆ ಮಾಡಿದ್ದರು. ಆದರೆ ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿ ನಿರಾಸೆ ಅನುಭವಿಸಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮತ್ತೊಂದು ಶ್ರೇಷ್ಠ ಸಾಧನೆ ಮಾಡಿದ್ದಾರೆ ಭಾರತದ ರೆಸ್ಲರ್.

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ 20 ವರ್ಷದ ಕೆಲ್ಸಿ ಬಾರ್ನೆ ಅವರನ್ನು ಸೋಲಿಸುವ ಮೂಲಕ ಸಾಕ್ಷಿ ತಮ್ಮ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿದರು. ಮಹಿಳಾ ಫ್ರೀಸ್ಟೈಲ್‌ನಲ್ಲಿ ಕ್ಯಾಮರೂನ್‌ನ ಎಟಾನೆ ನ್ಗೊಲ್ಲೆ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣೆಸಿ ಅದೇ ಫಲಿತಾಂಶವನ್ನು ಪುನರಾವರ್ತಿಸಿ ಫೈನಲ್‌ಗೆ ಪ್ರವೇಶಿಸಿದರು. ಫೈನಲ್‌ನಲ್ಲಿ ಕೆನಡಾದ ಅನಾ ಗೊನ್ಜಾಲೇಜ್ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ ಸಾಕ್ಷಿ ಮಲಿಕ್.

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು
1 ಸಂಕೇತ್ ಸರ್ಗರ್: ಬೆಳ್ಳಿ (ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್)
2 ಗುರುರಾಜ ಪೂಜಾರಿ: ಕಂಚು (ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್)
3 ಮೀರಾಬಾಯಿ : ಚಿನ್ನ (ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ )
4 ಬಿಂದ್ಯಾರಾಣಿ ದೇವಿ: ಬೆಳ್ಳಿ (ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ )
5 ಜೆರೆಮಿ ಲಾಲ್ರಿನ್ನುಂಗಾ: ಚಿನ್ನ (ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ )
6 ಅಚಿಂತಾ ಶೆಯುಲಿ: ಚಿನ್ನ (ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್ )
7 ಸುಶೀಲಾ ದೇವಿ ಲಿಕ್ಮಾಬಮ್: ಬೆಳ್ಳಿ (ಮಹಿಳೆಯರ 48 ಕೆಜಿ ಜೂಡೋ)
8 ವಿಜಯ್ ಕುಮಾರ್ ಯಾದವ್ :ಕಂಚು (ಪುರುಷರ 60 ಕೆಜಿ ಜೂಡೋ)
9 ಹರ್ಜಿಂದರ್ ಕೌರ್ :ಕಂಚು (ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್)
10 ಭಾರತೀಯ ಮಹಿಳಾ ತಂಡ: ಚಿನ್ನ (ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳು)
11 ವಿಕಾಸ್ ಠಾಕೂರ್ :ಬೆಳ್ಳಿ (ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್)
12 ಭಾರತೀಯ ಪುರುಷರ ತಂಡ: ಚಿನ್ನ (ಪುರುಷರ ತಂಡ ಟೇಬಲ್ ಟೆನಿಸ್)
13 ಭಾರತೀಯ ಮಿಶ್ರ ತಂಡ: ಬೆಳ್ಳಿ (ಮಿಶ್ರ ತಂಡ ಬ್ಯಾಡ್ಮಿಂಟನ್)
14 ಲವ್‌ಪ್ರೀತ್ ಸಿಂಗ್: ಕಂಚು (ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್)
15 ಸೌರವ್ ಘೋಸಲ್ :ಕಂಚು (ಪುರುಷರ ಸಿಂಗಲ್ಸ್ ಸ್ಕ್ವಾಷ್)
16 ತುಲಿಕಾ ಮಾನ್ :ಬೆಳ್ಳಿ (ಮಹಿಳೆಯರ +78 ಕೆಜಿ ಜೂಡೋ)
17 ಗುರ್ದೀಪ್ ಸಿಂಗ್: ಕಂಚು (ಪುರುಷರ +109 ಕೆಜಿ ವೇಟ್ ಲಿಫ್ಟಿಂಗ್)
18 ತೇಜಸ್ವಿನ್ ಶಂಕರ್: ಕಂಚು (ಪುರುಷರ ಹೈಜಂಪ್ ಅಥ್ಲೆಟಿಕ್ಸ್)
19 ಮುರಳಿ ಶ್ರೀಶಂಕರ್: ಬೆಳ್ಳಿ (ಪುರುಷರ ಲಾಂಗ್ ಜಂಪ್ ಅಥ್ಲೆಟಿಕ್ಸ್)
20 ಸುಧೀರ್: ಚಿನ್ನ (ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್)
21 ಅಂಶು ಮಲಿಕ್: ಬೆಳ್ಳಿ (ಮಹಿಳೆಯರ 57 ಕೆಜಿ ಕುಸ್ತಿ)
22 ಬಜರಂಗ್ ಪುನಿಯಾ: ಚಿನ್ನ (ಪುರುಷರ ರೆಸ್ಲಿಂಗ್)
23 ಸಾಕ್ಷಿ ಮಲಿಕ್: ಚಿನ್ನ(ಮಹಿಳೆಯರ ರೆಸ್ಲಿಂಗ್)

24 ದೀಪಕ್ ಪುನಿಯಾ: ಚಿನ್ನ (ಪುರುಷರ ರೆಸ್ಲಿಂಗ್ )

Story first published: Friday, August 5, 2022, 23:55 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X