ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದುಬೈ ಸೈಫಾ ವಾಲಿಬಾಲ್ ಪ್ರೀಮಿಯರ್ ಲೀಗ್‌: ಕಾನ್ಸೆಪ್ಟ್ ಕ್ರಿಯೇಷನ್ ಚಾಂಪಿಯನ್ಸ್

By ಆನಂದ್ ಪಿ ವಳಾಲ್, ದುಬೈ
Dubai Saifa Volleyball Premier League: Concept Creation Champions

ದುಬೈ: ಸೈಫಾ ವಾಲಿಬಾಲ್ ಪ್ರೀಮಿಯರ್ ಲೀಗ್ ನ 2ನೇ ಆವೃತಿಯ (ಎಸ್‌ವಿಎಲ್ 2020) ವಾಲಿಬಾಲ್ ಪಂದ್ಯಾಟವು ದುಬೈಯ ಲೈಸೆ ಫ್ರಾಂಕೈಸ್ ಇಂಟರ್‌ನ್ಯಾಷನಲ್ ಸ್ಕೂಲ್ ನ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪಂದ್ಯಾಟದಲ್ಲಿ ಕಾನ್ಸೆಪ್ಟ್ ಕ್ರಿಯೇಷನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!

ಯುಎಇಯ ವಿವಿಧ ಎಮಿರೇಟ್ಸ್ ಗಳಲ್ಲಿ ನೆಲೆಸಿರುವ ಭಾರತೀಯ ಆಯ್ದ ವಾಲಿಬಾಲ್ ಕ್ರೀಡಾಪಟುಗಳಿಗಾಗಿ ಆಯೋಜಿಸಲ್ಪಟ್ಟ ಈ ಪಂದ್ಯಾಟದಲ್ಲಿ ಒಟ್ಟು 8 ಫ್ರಾಂಚೈಸಿ ಗಳು (ಅಲ್ ಮದಿಹ ಟೆಕ್, ಗಂಗೊಳ್ಳಿ ಸ್ಟ್ರೈಕರ್ಸ್, ಹೀಟ್ ಶೀಲ್ಡ್ ಶಿಮಂತೂರ್, ಕಾನ್ಸೆಪ್ಟ್ ಕ್ರಿಯೇಶನ್ಸ್, ಜಾಸ್ಬಾ ಯಸ್ ಸಿ, ವೆಲ್ಸ್ ಗ್ಲಾಡೀಟರ್ಸ್, ಆಟೋ ಡೀಲ್ ಮೂಡಬಿದಿರೆ, ಡಿಎಂಎಸ್‌ಸಿ ಸ್ಟೀಲ್ ) ಭಾಗವಹಿಸಿದ್ದು, ಲೀಗ್ ಆಧಾರದಲ್ಲಿ ಪಂದ್ಯಾಟವನ್ನು ನಡೆಸಲಾಯಿತು.

ಕ್ರೀಡಾಕೂಟದ ಎಲ್ಲಾ ಪಂದ್ಯಾಟಗಳು ಬಹಳ ಪೈಪೋಟಿ ಯಿಂದ ಕೂಡಿದ್ದು, ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಕಾನ್ಸೆಪ್ಟ್ ಕ್ರಿಯೇಷನ್ ತಂಡವು ಗಂಗೊಳ್ಳಿ ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಎಸ್‌ವಿಎಲ್‌ 2020 ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮುಡಿಗೇರಿಸಿ ಕೊಂಡಿತು.

Dubai Saifa Volleyball Premier League: Concept Creation Champions

 ಹುಟ್ಟುಹಬ್ಬದಂದೇ ಯೋ ಮಹೇಶ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹುಟ್ಟುಹಬ್ಬದಂದೇ ಯೋ ಮಹೇಶ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ

ಕ್ರೀಡಾಕೂಟದ ಪ್ರಮುಖ ಪ್ರಾಯೋಜಕರಾಗಿ ಎಲೆಕ್ಟ್ರಿಕ್ ವೇವ್ಸ್ ಕಂಪನಿಯು ಮತ್ತು ಸಹ ಪ್ರಾಯೋಜಕರಾಗಿ ಬೆಸ್ಟ್ ಡಿಜಿಟಲ್ ಅಡ್ವರ್ಟೈಸ್ಮೆಂಟ್ ಹಾಗೂ ಎಂಸ್ಕ್ವಾರ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಕಂಪನಿಗಳು ಸಹಕರಿಸಿದ್ದವು. ಪಂದ್ಯಾಟದ ಆರಂಭದಿಂದ ಅಂತ್ಯದವರೆಗೂ ಸ್ಥಳೀಯ ಸರಕಾರದ ಕೋವಿಡ್-19 ನಿಯಮಾನುಸಾರ ಎಲ್ಲ ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಯ್ತು .

ಸರ್ಫ್ರಾಜ್ ಹಾಗೂ ಅವರ ಬಳಗದ ಎಸ್‌ವಿಎಲ್‌ 2020ವಾಲಿಬಾಲ್ ಪಂದ್ಯಾಟವು ಯುಎಇಯ ವಾಲಿಬಾಲ್ ಚರಿತ್ರೆಯಲ್ಲಿಯೇ ಮೊದಲ ಪ್ರಯೋಗವಾಗಿದ್ದು ಎರಡನೇ ವರ್ಷದ ಈ ಪಂದ್ಯಾಟವು ಪ್ರಥಮ ವರ್ಷದ ಪಂದ್ಯಾಟದಷ್ಟೇ ಯಶಶ್ವಿಯಾಗಿ ನಡೆಯಿತು.

Dubai Saifa Volleyball Premier League: Concept Creation Champions

ಪೃಥ್ವಿ ಶಾ ಬದಲು ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿ: ಸುನಿಲ್ ಗವಾಸ್ಕರ್ಪೃಥ್ವಿ ಶಾ ಬದಲು ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿ: ಸುನಿಲ್ ಗವಾಸ್ಕರ್

ಕುಂದಾಪುರ ಮೂಲದ ಖ್ಯಾತ ಹಿರಿಯ ಆಟಗಾರ ಸರ್ಫ್ರಾಜ್ ರವರ ನಾಯಕತ್ವದಲ್ಲಿ ಕ್ರೀಡಾ ಪೋಷಕರಾದ ಸಗೀರ್, ಆನಂದ್ ಪಿ ವಳಾಲ್, ಧೀರಜ್ ಬಂಗೇರ, ಶಫೀರ್, ಮೊಯಿದಿನ್, ಕೇದಾರ್ ಹಾಗು ಸರ್ಫ್ರಾಜ್ ಗೆಳೆಯರ ಬಳಗದ ಇಬ್ರಾಹಿಂ ಕರಣಿ, ರುವೆಫ್, ಹನೀಫ್ ಪಂದ್ಯಾಟ ವನ್ನು ಯಶಸ್ವಿಯಾಗಲು ಸಹಕರಿಸಿದರು.

Story first published: Monday, December 21, 2020, 18:08 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X