ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

WWE ಕುಸ್ತಿಗೆ ನಿವೃತ್ತಿ ಘೋಷಿಸಿದ 'ದಿ ರಾಕ್‌' ಖ್ಯಾತಿಯ ದಿಗ್ಗಜ

The Rock announces retirement 2019

ಹೊಸದಿಲ್ಲಿ, ಆಗಸ್ಟ್‌ 05: ಒಂದು ಕಾಲದಲ್ಲಿ 'ದಿ ರಾಕ್‌' ಎಂದೇ ಇಡೀ ಜಗತ್ತಿನ ಮನೆ ಮಾತಾಗಿದ್ದ ಕುಸ್ತಿಪಟು, ಇದೀಗ ಹಾಲಿವುಡ್‌ನ ಹೆಸರಾಂತ ನಟ ಡ್ವೇನ್‌ ಜಾನ್ಸನ್‌ ಇದೀಗ ವಿಶ್ವ ಮನರಂಜನಾ ಕುಸ್ತಿ(WWE)ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.

ಟೆಲಿವಿಷನ್‌ ಕಾರ್ಯಕ್ರಮವೊಂದರ ನೇರ ಪ್ರಸಾರದ ವೇಳೆ ಡ್ವೇನ್‌ ಜಾನ್ಸನ್‌, ತಾವು ಯಾರಿಗೂ ತಿಳಿಸದ ಹಾಗೆ ಸದ್ದಿಲ್ಲದೇ ವೃತ್ತಿಪರ ಕುಸ್ತಿಗೆ ನಿವೃತ್ತಿ ಘೋಸಿದ್ದ ವಿಚಾರವನ್ನು ಹೊರಹಾಕಿದ್ದಾರೆ. ಇದೇ ವೇಳೆ ನಿವೃತ್ತಿಯಿಂದ ಹೊರಬಂದು ಮತ್ತೆ ವಿಶ್ವ ಮನರಂಜನಾ (WWE) ಕುಸ್ತಿಯಲ್ಲಿ ಆಡುವ ಸಾಧ್ಯತೆಯನ್ನು ಜಾನ್ಸನ್‌ ಇದೇ ವೇಳೆ ತಳ್ಳಿಹಾಕಿಲ್ಲ.

ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!

ಚಾಟ್‌ ಶೋದಲ್ಲಿ ಮಾತನಾಡುವ ವೇಳೆ, "ಕುಸ್ತಿಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಕುಸ್ತಿ ಎಂದರೆ ನನಗೆ ಬಹಳ ಪ್ರಿಯವಾದದ್ದು. ಕುಸ್ತಿಯಲ್ಲಿ ಅತ್ಯುತ್ತಮ ವೃತ್ತಿ ಬದುಕು ಲಭ್ಯವಾಗಿದ್ದು ನನ್ನ ಅದೃಷ್ಟವೇ ಸರಿ. ಕುಸ್ತಿಯಲ್ಲಿ ನಾನು ಬಯಸಿದ್ದೆಲ್ಲವನ್ನೂ ಸಾಧಿಸಿದ್ದೇನೆ. ಹೀಗಾಗಿ ಸದ್ದಿಲ್ಲದೆ ನಿವೃತ್ತಿ ಹೊಂದಿದೆ. ಆದರೆ, ಪ್ರೇಕ್ಷಕರ ಎದುರು ಲೈವ್‌ ಕುಸ್ತಿಯ ಮಜವೇ ಬೇರೆ. ಲೈವ್‌ ಕ್ರೌಡ್‌, ಲೈವ್‌ ಮೈಕ್ರೊಫೋನ್‌. ಎಲ್ಲವೂ ಅದ್ಭುತ," ಎಂದು ಕುಸ್ತಿ ಮೇಲಿನ ತಮ್ಮ ಅಘಾದ ಪ್ರೀತಿಯನ್ನು 47 ವರ್ಷದ ಗ್ಲೋಬಲ್‌ ಸ್ಟಾರ್‌ ಡ್ವೇನ್‌ ಜಾನ್ಸನ್‌ ಹೊರಹಾಕಿದ್ದಾರೆ.

ರಾಕ್‌ ಕುಸ್ತಿ ವಿವರ ಮತ್ತು ಅಂಕಿ ಅಂಶ
ಎತ್ತರ: 6.5 ಅಡಿ
ತೂಕ: 119 ಕೆಜಿ
ಹುಟ್ಟಿದ ಸ್ಥಳ: ಮಿಯಾಮಿ, ಫ್ಲೋರಿಡಾ
ರಿಂಗ್‌ ಹೆಸರುಗಳು: ದಿ ರಾಕ್‌, ಡ್ವೇನ್‌ ಜಾನ್ಸನ್‌, ಫ್ಲೆಕ್ಸ್‌ ಕವಾನ, ರಾಕಿ ಮೇವಿಯಾ.
ವೃತ್ತಿಪರ ಕುಸ್ತಿಗೆ ಪದಾರ್ಪಣೆ: 1996
WWE ಚಾಂಪಿಯನ್‌: 8 ಬಾರಿ
WCW ಚಾಂಪಿಯನ್‌: 2 ಬಾರಿ
ರಾಯಲ್‌ ರಂಬಲ್‌: 2000ರಲ್ಲಿ ಗೆಲುವು

ರಾಕ್‌ ಕುಸ್ತಿ ವೃತ್ತಿಬದುಕಿನ ಕಿರು ಪರಿಚಯ

ಡ್ವೇನ್‌ ಜಾನ್ಸನ್‌ ಅವರ ತಂದೆ ರಾಕಿ ಜಾನ್ಸನ್‌ ಕೂಡ ವೃತ್ತಿಪರ ಕುಸ್ತಿಪಟು. ಹೀಗಾಗಿ ಬಾಲ್ಯದಿಂದಲೇ ಕುಸ್ತಿ ಎಂದರೆ ರಾಕ್‌ ಅವರಿಗೆ ಅಚ್ಚುಮೆಚ್ಚು. ಇನ್ನು ರಾಕ್‌ ಅವರ ತಾತ ಕೂಡ ಕುಸ್ತಿಪಟು ಎಂಬುದು ವಿಶೇಷ. ಮನರಂಜನಾ ಕುಸ್ತಿಯ ಸಾರ್ವಕಾಲಿಕ ಶ್ರೇಷ್ಠ ಹಾಗೂ ದೈತ್ಯ ಕುಸ್ತಿಪಟು 'ಆಂಡ್ರೆ ದಿ ಜಯಂಟ್‌' ಅವರೊಟ್ಟಿಗೆ ಕುಸ್ತಿಯಲ್ಲಿ ಪಾಲ್ಗೊಂಡ ಖ್ಯಾತಿ ರಾಕ್‌ ಅವರ ತಾತನದ್ದು. ಇನ್ನು ತಂದೆ ರಾಕಿ ಜಾನ್ಸನ್‌ ನಿವೃತ್ತಿ ನಂತರ ವೃತ್ತಿ ಬದುಕು ಕಟ್ಟಿಕೊಳ್ಳಲು ಹರಸಾಹಸ ನಡೆಸಿದ ಡ್ವೇನ್‌ ಜಾನ್ಸನ್‌, ಅಮೆರಿಕನ್‌
ಫುಟ್ಬಾಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಷ್ಟ್ರೀಯ ಲೀಗ್‌ನಲ್ಲಿ ಡಿಫೆಂಡರ್‌ ಆಗಿ ಆಡಿದ ಸಾಧನೆಯನ್ನೂ ಮಾಡಿದ್ದಾರೆ. ಕೊನೆಗೆ 1996ರಲ್ಲಿ ವಿಶ್ವ ಮನರಂಜನಾ ಕುಸ್ತಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ರಾಕ್‌ ಬೆಳೆದುಬಂದ ಹಾದಿಯೇ ಇತಿಹಾಸ. WWE ಕುಸ್ತಿಯ ಅತ್ಯಂತ ಜನಪ್ರಿಯ ಹಾಗೂ ಸಾರ್ವಕಾಲಿಕ ಪ್ರೇಕ್ಷಕರ ಅಚ್ಚುಮೆಚ್ಚಿನ ಕುಸ್ತಿಪಟು ಎಂದರೆ ಅದು ದಿ ರಾಕ್‌. ರಾಕ್‌ ಅಂಗಣಕ್ಕೆ ಕಾಲಿಡುತ್ತಿದ್ದರೆ ಅಲ್ಲಿ ಮಿಂಚಿನ ಸಂಚಲನವಾಗುತ್ತದೆ. ಆದ್ದರಿಂದಲೇ ಅವರನ್ನು ದಿ ಮೋಸ್ಟ್‌ ಎಲೆಕ್ಟ್ರಿಫೈಯಿಂಗ್‌ ಕುಸ್ತಿ ಪಟು ಎಂದೇ ಕರೆಯಲಾಗುತ್ತದೆ.

2016ರಲ್ಲಿ ಕೊನೆಯ ಕುಸ್ತಿ ಪಂದ್ಯ

ದಿ ರಾಕ್‌ WWE ಅಂಗಣದಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದು 2016ರಲ್ಲಿ. 32ನೇ ಆವೃತ್ತಿಯ ರೆಸಲ್‌ಮೇನಿಯಾ ಕುಸ್ತಿಯಲ್ಲಿ ಕಣಕಿಳಿದಿದ್ದ ರಾಕ್‌, ವ್ಯಾಟ್‌ ಬ್ರದರ್ಸ್‌ನ ಪ್ರಮುಖ ಫೈಟರ್‌ ಎರಿಕ್‌ ರೋವ್ಮನ್‌ ವಿರುದ್ಧ ಜಯ ದಾಖಲಿಸಿದ್ದರು. ಎದುರಾಳಿಯನ್ನು ತಮ್ಮ ಸಿಗ್ನೇಚರ್‌ ಹೊಡೆತ ರಾಕ್‌ ಬಾಟಮ್‌ ಮೂಲಕ ಹೊಡೆದುರುಳಿಸಿದ್ದ ರಾಕ್‌ ಕೇವಲ 6 ಸೆಕೆಂಡ್‌ಗಳಲ್ಲಿ ಪಂದ್ಯ ಗೆದ್ದಿದ್ದರು. ಇದು ರೆಸಲ್‌ಮೇನಿಯಾ ಇತಿಹಾಸದಲ್ಲಿನ ಅತ್ಯಂತ ವೇಗದ ಗೆಲುವಾಗಿದೆ.

ಹಾಬ್ಸ್‌ ಅಂಡ್‌ ಶಾವ್‌ ಸಿನಿಮಾಗೆ 878 ಕೋಟಿ ರೂ. ಸಂಭಾವನೆ

WWE ಕುಸ್ತಿ ಮೂಲಕ ಜನಪ್ರಿಯತೆ ಗಿಟ್ಟಿಸಿದ ದಿ ರಾಕ್‌, 'ದಿ ಮಮ್ಮಿ ರಿಟರ್ನ್ಸ್‌' ಹಾಲಿವುಡ್‌ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ದಿ ಸ್ಕಾರ್ಪಿಯನ್‌ ಕಿಂಗ್‌ ಹೆಸರಿನ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಆಕ್ಷನ್‌ ಹೀತೊ ಆಗಿ ಹಾಲಿವುಡ್‌ಗೆ ಕಾಲಿಟ್ಟರು. ಬಳಿಕ ಹಾಲಿವುಡ್‌ನಲ್ಲೂ ರಾಕ್‌ ಆರ್ಭಟ ಶುರುವಾಗಿ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದರು. ಸದ್ಯ ಹಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆಯಲ್ಲಿ ಇರುವ ಆಕ್ಷನ್‌ ಹೀರೊ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಅವರ 'ಹಾಬ್ಸ್‌ ಅಂಡ್‌ ಶಾವ್‌' ಚಿತ್ರ ಬಾಕ್ಸ್‌ಆಫಿಸ್‌ನಲ್ಲಿ ಲೂಟಿ ಮಾಡುತ್ತಿದೆ. ಈ ಸಿನಿಮಾ ಸಲುವಾಗಿ ರಾಕ್‌ ಪಡೆದ ಸಂಭಾವನೆ ಬರೋಬ್ಬರಿ 878 ಕೋಟಿ ರೂ. ಆಗಿದೆ. ಈ ಮೂಲಕ ಹಾಲಿವುಡ್‌ನ ಅತ್ಯಂತ ದುಬಾರಿ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಚೊಚ್ಚಲ ಪಂದ್ಯವನ್ನು ನೆನೆದ ರಾಕ್‌

ನಿವೃತ್ತಿ ಸಂಗತಿ ಹೊರಹಾಕಿದ ಬಳಿಕ ಮಾತನಾಡಿದ ರಾಕ್‌ ತಮ್ಮ ಮೊದಲ ವೃತ್ತಿಪರ ಕುಸ್ತಿ ಪಂದ್ಯದ ನೆನಪಿನಾಳವನ್ನು ಕೆದಕಿದ್ದಾರೆ. "1997ರ ಸರ್‌ವೈವರ್‌ ಸೀರೀಸ್‌ ಕುಸ್ತಿಯದು. ಮ್ಯಾಡಿಸ್ಸನ್‌ ಸ್ಕ್ವೇರ್‌ ಗರ್ಡನಲ್ಲಿ ನನ್ನ ಮೊದಲ ಪಂದ್ಯ. ಅತ್ಯಂತ ಮೌಲ್ಯಯುತ ಪಂದ್ಯವದು. ಆ ಪಂದ್ಯದ ಮೂಲಕ ನನ್ನ ವೃತ್ತಿ ಬದುಕಿನ ದಿಕ್ಕು ಬದಲಾಯ್ತು. ಈಗ ನಾನೇನೇ ಸಾಧಿಸಿದ್ದರೂ ಅದು ಆ ಪಂದ್ಯ ನೀಡಿದ ತಿರುವಿನಿಂದ," ಎಂದು ಹೇಳಿದ್ದಾರೆ.

Story first published: Monday, August 5, 2019, 19:52 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X