ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ : ಈಕ್ವೆಸ್ಟ್ರಿಯನ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

By Mahesh
 Equestrian: India’s Fouaad Mirza has finished with a SILVER medal

ಜಕಾರ್ತ, ಆಗಸ್ಟ್ 26: ಏಷ್ಯನ್ ಗೇಮ್ಸ್ 2018ರಲ್ಲಿ ಭಾನುವಾರದಂದು ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.

26 ವರ್ಷ ವಯಸ್ಸಿನ ಮಿರ್ಜಾ ಫೌದ್ ಅವರು ಸೈನರ್ ಮೆಡಿಕೋಟ್ ಕುದುರೆ ಏರಿ ರಜತ ಪದಕ ಕೊರಳಿಗೇರಿಸಿಕೊಂಡರು. ಜಪಾನ್ ನ ಯೋಶಿಕಿ ಅವರು ಚಿನ್ನದ ಪದಕ ಗೆದ್ದರು. ಥೈಲ್ಯಾಂಡ್ ನ ಸ್ಪರ್ಧಿ ಕಂಚಿನ ಪದಕ ಗಳಿಸಿದರು.



1982ರ ಏಷ್ಯನ್ ಗೇಮ್ಸ್ ನಂತರ ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ವೈಯಕ್ತಿಕ ಪದಕ ಲಭಿಸಿದೆ. ಈ ಪದಕದ ಮೂಲಕ ಭಾರತವು 7 ಚಿನ್ನ, 7 ಬೆಳ್ಳಿ, 17 ಕಂಚಿನ ಪದಕದೊಂದಿಗೆ 31 ಪದಕ ಗಳಿಸಿ ಪದಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.

ಇದಲ್ಲದೆ, ಭಾರತದ ಫವಾದ್ ಮಿರ್ಜಾ, ಆಕಾಶ್ ಮಲಿಕ್ ಹಾಗೂ ರಾಕೇಶ್ ಅವರನ್ನು ಒಳಗೊಂಡ ಕುದುರೆ ಸವಾರರುಳ್ಳ ತಂಡವು ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದೆ.

ಈಕ್ವೆಸ್ಟ್ರಿಯನ್ ಸ್ಪರ್ಧೆಯ ತಂಡವು ವಿಭಾಗದ ಸ್ಪರ್ಧೆಯಲ್ಲಿ ಭಾರತದ ತಂಡವು 121.30 ಅಂಕ ಗಳಿಸಿ, ಎರಡನೇ ಸ್ಥಾನಕ್ಕೇರಿತು.

Story first published: Sunday, August 26, 2018, 15:05 [IST]
Other articles published on Aug 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X