ಫ್ಲ್ಯಾಶ್‌ಬ್ಯಾಕ್ 2021: ಈ ವರ್ಷ ಬದುಕಿಗೆ ವಿದಾಯ ಹೇಳಿದ ಭಾರತದ ಪ್ರಮುಖ ಕ್ರೀಡಾ ತಾರೆಯರು

ಭಾರತ ಈ ವರ್ಷ ಕ್ರೀಡಾಲೋಕದಲ್ಲಿ ಅನೇಕ ಸಂಭ್ರಮದ ಕ್ಷಣಗಳನ್ನು ಕಂಡಿದೆ. ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ನೀರಜ್ ಚೋಫ್ರಾ ಚಿನ್ನದ ಪದಕ ಗೆದ್ದು ಬೀಗಿದ್ದು, ಹಾಕಿಯಲ್ಲಿ ನಾಲ್ಕು ದಶಕದ ಬಳಿಕ ಭಾರತ ಪದಕಕ್ಕೆ ಕೊರಳೊಡ್ಡಿದ್ದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಪ್ರಮುಖವಾಗಿದೆ. ಇಂತಾ ಸಂಭ್ರಮದ ಕ್ಷಣಗಳಂತೆಯೇ ಭಾರತ ಅನೇಕ ಕಹಿ ನೆನಪುಗಳನ್ನು ಹೊಂದಿದೆ.

ಅದರಲ್ಲೂ ಈ ವರ್ಷ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ಕೆಲ ಕ್ರೀಡಾ ಲೋಕದ ದ್ರುವ ತಾರೆಗಳು ಬದುಕಿಗೆ ವಿದಾಯ ಹೇಳಿದ್ದಾರೆ. ಈ ಕ್ಯಾಲೆಂಡರ್ ವರ್ಷ ಅಂತ್ಯವಾಗುತ್ತಿರುವ ಸಂದರ್ಭದಲ್ಲಿ ಈ ವರ್ಷ ನಮ್ಮನ್ನು ಅಗಲಿದ ಕೆಲ ಕ್ರೀಡಾ ತಾರೆಗಳನ್ನು ಸ್ಮರಿಸೋಣ.

ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿದ್ರೆ ಭಾರತಕ್ಕೆ ಪ್ಲಸ್ ಪಾಯಿಂಟ್: MSK ಪ್ರಸಾದ್ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿದ್ರೆ ಭಾರತಕ್ಕೆ ಪ್ಲಸ್ ಪಾಯಿಂಟ್: MSK ಪ್ರಸಾದ್

ಮಿಲ್ಕಾ ಸಿಂಗ್: ಸ್ವತಂತ್ರ ಭಾರತದ ಅತಿದೊಡ್ಡ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರಾದ ದಿಗ್ಗಜ ಮಿಲ್ಕಾ ಸಿಂಗ್ ಜೂನ್ 19 ರಂದು ನಿಧನರಾದರು. ಕೊರೊನಾವೈರಸ್‌ಗೆ ತುತ್ತಾಗಿದ್ದ ಅವರು ಒಮದು ತಿಂಗಳ ಕಾಲ ಹೋರಾಡಿದ ನಂತರ ನಿಧನರಾದರು. ಇದೇ ಅವಧಿಯಲ್ಲಿ ಮಿಲ್ಖಾ ಸಿಂಗ್ ಅವರ ಪತ್ನಿ ಮಾಜಿ ರಾಷ್ಟ್ರೀಯ ವಾಲಿಬಾಲ್ ತಂಡದ ನಾಯಕಿಯೂ ಆದ ನಿರ್ಮಲ್ ಕೌರ್ ಕೂಡ ಕೊರೊನಾವೈರಸ್‌ಗೆ ನಿಧನರಾದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್ ಪಟ್ಟಕ್ಕೇರಿದ್ದ ಸಿಂಗ್ ನಾಲ್ಕು ಬಾರಿ ಏಷ್ಯನ್ ಗೇಮ್ಸ್‌ ಚಾಂಪಿಯನ್ ಆಗಿದ್ದರು. 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಕೇವಲ 1/100 ಸೆಕೆಂಡ್‌ಗಳ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿತ್ತು.

ನೋವಿ ಕಪಾಡಿಯಾ: ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಶ್ರಮವಹಿಸಿದ ಖ್ಯಾತ ಫುಟ್ಬಾಲ್ ಕಾಮೆಂಟೆಟರ್ ಹಾಗೂ ಪತ್ರಕರ್ತರಾಗಿದ್ದ ನೋವಿ ಕಪಾಡಿಯ ದೀರ್ಘಕಾಲದ ಅನಾರೋಗ್ಯದ ನಂತರ ನವೆಂಬರ್ 18 ರಂದು ದೆಹಲಿಯಲ್ಲಿ ನಿಧನರಾದರು. ನೋವಿ ಕಪಾಡಿಯಾ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಬೆನ್ನುಮೂಳೆ ಮತ್ತು ಮೆದುಳಿನ ನರಗಳು ಏಕ ಸಮಯದಲ್ಲಿ ಕಾರ್ಯವನ್ನು ಕಳೆದುಕೊಳ್ಳುವಂತೆ ಮಾಡುವ ಖಾಯಿಲೆಯಾಗಿತ್ತು. ಹೀಗೆ ಮೋಟಾರ್‌ ನ್ಯೂರನ್ ಖಾಯಿಲೆಯಿಂದ ಬಳಲುತ್ತಿದ್ದ ನೋವಿ ಕಪಾಡಿಯಾ ಮನೆಯಲ್ಲಿಯೇ ಕಳೆದೆರಡು ವರ್ಷಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನನ್ನ ಕ್ರಿಕೆಟ್ ಲೋಕ ಶುರುವಾಯಿತು ಎಂದ ಅನಿಲ್ ಕುಂಬ್ಳೆಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನನ್ನ ಕ್ರಿಕೆಟ್ ಲೋಕ ಶುರುವಾಯಿತು ಎಂದ ಅನಿಲ್ ಕುಂಬ್ಳೆ

ಓಂ ನಂಬಿಯಾರ್: ದೇಶ ಕಂಡ ಅತ್ಯುತ್ತಮ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿರುವ ಪಿಟಿ ಉಷಾ ಅವರನ್ನು ಕ್ರೀಡಾಪಟುವಾಗಿ ರೂಪಿಸಿದ ಕೋಚ್ ಒಎಂ ನಂಬಿಯಾರ್ ಆಗಸ್ಟ್ 19 ರಂದು ನಿಧನರಾದರು. 89 ವರ್ಷವಾಗಿದ್ದ ನಂಬಿಯಾರ್ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತವಾಗಿರುವ ಒಎಂ ನಂಬಿಯಾರ್ ಅವರು ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದರು. ಒಂದು ವಾರದ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ನಂಬಿಯಾರ್ ಅವರನ್ನು ಬಳಿಕ ಮನೆಗೆ ಕರೆತರಲಾಗಿತ್ತು.
ಮಾಜಿ ವಾಯು ಸೇನೆಯ ಅಧಿಕಾರಿಯಾಗಿದ್ದ ನಂಬಿಯಾರ್ ಬಳಿಕ ಕೋಚ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಲ್ಲದೆ ಸಾಕಷ್ಟು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ್ದಾರೆ. ಇದರಲ್ಲಿ ಪಿಟಿ ಉಷಾ ಅವರು ಕೂಡ ಸೇರಿದ್ದಾರೆ. 1932ರಲ್ಲಿ ಕಣ್ಣೂರಿನಲ್ಲಿ ಜನಿಸಿದ್ದ ನಂಬಿಯಾರ್ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿದ್ದರು.

ನಂದು ನಾಟೇಕರ್: ಭಾರತದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ಈ ವರ್ಷ ಜುಲೈ 28ರಂದು ಅಗಲಿದ್ದಾರೆ. ಸುದೀರ್ಘ ವೃತ್ತಿ ಜೀವನ ಕಂಡಿದ್ದ ನಂದು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.88 ವರ್ಷ ಪ್ರಾಯವಾಗಿದ್ದ ನಾಟೇಕರ್, ತನ್ನ ವೃತ್ತಿ ಬದುಕಿನಲ್ಲಿ 100ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರಿಗೆ 1961ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು.

ದಿಂಕೋ ಸಿಂಗ್: ಭಾರತದ ಪ್ರಸಿದ್ಧ ಮಾಜಿ ಬಾಕ್ಸರ್ ದಿಂಕೊ ಸಿಂಗ್ ದೀರ್ಘಕಾಲದ ಅನಾರೋಗ್ಯದ ನಂತರ ಜೂನ್ 10 ರಂದು ನಿಧನರಾದರು. 42 ವರ್ಷದ ದಿಂಕೊ ಸಿಂಗ್ ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬಾಕ್ಸರ್‌ ದಿಂಕೊ ಸಿಂಗ್ ಭಾರತದ ಪರ ಚಿನ್ನವನ್ನು ಗೆದ್ದಿದ್ದರು. ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಕ್ಸರ್ ದಿಂಕೊ ಸಿಂಗ್ 2017ರಲ್ಲಿ ಲಿವರ್ ಸಂಬಂಧಿತ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 2020ರಲ್ಲಿ ಮತ್ತೆ ಲಿವರ್ ಸಂಬಂಧಿತ ಕ್ಯಾನ್ಸರ್‌ನ ಚಿಕಿತ್ಸೆಗಾಗಿ ದಿಂಕೊ ಸಿಂಗ್‌ರನ್ನು ದೆಹಲಿಯ ಐಎಲ್‌ಬಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಸಮಯದಲ್ಲಿ ದಿಂಕೊ ಸಿಂಗ್‌ಗೆ ಕಾಮಾಲೆ ರೋಗ ಕೂಡ ಇದ್ದದ್ದು ಬೆಳಕಿಗೆ ಬಂದಿತ್ತು. ಇನ್ನು ದಿಂಕೊ ಸಿಂಗ್‌ಗೆ 1998ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಐಪಿಎಲ್ 2022 ಸಿದ್ಧತೆಗೂ ಮುನ್ನ ಹಿನ್ನಡೆ; ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಟೂರ್ನಿ!ಐಪಿಎಲ್ 2022 ಸಿದ್ಧತೆಗೂ ಮುನ್ನ ಹಿನ್ನಡೆ; ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಟೂರ್ನಿ!

ಯಶ್‌ಪಾಲ್ ಶರ್ಮಾ: ಟೀಮ್ ಇಂಡಿಯಾದ ವಿಶ್ವಕಪ್‌ ವಿಜೇತ ಮಾಜಿ ಕ್ರಿಕೆಟರ್ ಯಶ್‌ಪಾಲ್‌ ಶರ್ಮಾ ತೀವ್ರ ಹೃದಯಾಘಾತದಿಂದ ಶರ್ಮಾ ಜುಲೈ 13ರಂದು ನಿಧನರಾಗಿದ್ದಾರೆ. ಮೂಲತಃ ಪಂಜಾಬ್‌ನವರಾದ ಯಶ್‌ಪಾಲ್‌ಗೆ 66 ವರ್ಷ ವಯಸ್ಸಾಗಿತ್ತು. 70 ಮತ್ತು 80ನೇ ದಶಕದ ವೇಳೆ ಯಶ್‌ಪಾಲ್‌ ಶರ್ಮಾ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿದ್ದರು. 1983ರ ವಿಶ್ವಕಪ್‌ ವೇಳೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 61 ರನ್‌ ಬಾರಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಭಾರತ ತಂಡದ ಪರ ಯಶ್‌ಪಾಲ್ 37 ಟೆಸ್ಟ್‌ ಪಂದ್ಯ, 42 ಏಕದಿನ ಪಂದ್ಯಗಳನ್ನಾಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ಯಶ್‌ಪಾಲ್ 37 ಟೆಸ್ಟ್‌ ಪಂದ್ಯಗಳಲ್ಲಿ 1606 ರನ್, 2 ಶತಕ, 9 ಅರ್ಧ ಶತಕ, 42 ಏಕದಿನ ಪಂದ್ಯಗಳಲ್ಲಿ 883 ರನ್, 4 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಲಿಸ್ಟ್‌ ಎ 74 ಪಂದ್ಯಗಳಲ್ಲಿ 1859 ರನ್, 160 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 8933 ರನ್ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಮೂಲಕ 1979ರಲ್ಲಿ ಪಾದಾರ್ಪಣೆ ಮಾಡಿದ್ದ ಯಶ್‌ಪಾಲ್, 1978ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, December 23, 2021, 20:38 [IST]
Other articles published on Dec 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X