ಅಥ್ಲೆಟಿಕ್ಸ್ ದಂತಕತೆ, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ನಿಧನ

ಚಂಡೀಗಢ: ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಭಾರತ ಶ್ರೇಷ್ಠ ಅಥ್ಲೀಟ್ ಮಿಲ್ಖಾ ಸಿಂಗ್ ಶುಕ್ರವಾರ (ಜೂನ್ 18) ನಿಧನರಾಗಿದ್ದಾರೆ. 91 ವರ್ಷ ವಯಸ್ಸಾಗಿದ್ದ ಮಿಲ್ಖಾಗೆ ಕೋವಿಡ್-19 ಸೋಂಕು ತಗುಲಿತ್ತು. ಶುಕ್ರವಾರ ಗಂಭೀರ ಸ್ಥಿತಿಗೆ ತಲುಪಿದ್ದ ಮಿಲ್ಖಾಗೆ ಆಮ್ಲಜನಕದ ಪ್ರಮಾಣ ತೀವ್ರ ಕಡಿಮೆಯಾಗಿತ್ತು.
ಮೇ ತಿಂಗಳ 24ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದ ಮಿಲ್ಖಾ ಸಿಂಗ್ ಅವರನ್ನು ಚಂಡೀಗಢದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವೇ ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದರು. ಬಳಿಕ ಮನೆಯಲ್ಲೇ ಚಿಕಿತ್ಸೆಯನ್ನು ಮುಂದುವರಿಸಲಾಗಿತ್ತು. ಕೊರೊನೋತ್ತರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್ 3 ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್ ಶುಕ್ರವಾರ ತಡರಾತ್ರಿ ನಿಧನರಾದರು. ಐದು ದಿನಗಳ ಹಿಂದೆಯಷ್ಟೇ ಮಿಲ್ಖಾಸಿಂಗ್ ಪತ್ನಿ ನಿರ್ಮಲ್ ಕೌರ್ ಅವರು ಕೊರೊನಾಕ್ಕೆ ಬಲಿಯಾಗಿದ್ದರು ಭಾರತ ಕ್ರೀಡಾ ಜಗತ್ತು ಕಂಡ ದಂತಕತೆ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಮಿಲ್ಖಾ ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಗೆದ್ದಿದ್ದರು. ಮಿಲ್ಖಾ ಜೀವನಾಧರಿಸಿ, ಅವರ ಕ್ರೀಡಾ ಸಾಧನೆಗಳನ್ನಾಧರಿಸಿ ಬಾಲಿವುಡ್‌ನಲ್ಲಿ 'ಭಾಗ್ ಮಿಲ್ಖಾ ಭಾಗ್' ಚಿತ್ರ ಭರ್ಜರಿ ಯಶಸ್ವಿ ಕಂಡಿತ್ತು. ಫರ್ಹಾನ್ ಅಖ್ತರ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications