ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು ಲೋಕನಾಥ ಬೋಳಾರ್ ನಿಧನ

ಮಂಗಳೂರು: ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು, ಕರ್ನಾಟಕದ ಮಂಗಳೂರಿನವರಾದ ಲೋಕನಾಥ್ ಬೋಳಾರ್ ನಿಧನರಾಗಿದ್ದಾರೆ. ಶನಿವಾರ (ಅಕ್ಟೋಬರ್ 3) ಕೊನೆಯುಸಿರೆಳೆದಿರುವ ಅವರಿಗೆ 73 ವರ್ಷ ವಯಸ್ಸಾಗಿತ್ತು. ಕಬಡ್ಡಿ ಮತ್ತು ಪವರ್ ಲಿಫ್ಟಿಂಗ್‌ನಲ್ಲಿ ಬೋಳಾರ್ ಪ್ರಶಸ್ತಿಗಳನ್ನು ಗೆದ್ದಿದ್ದರು.

ಸಂಜು ಸ್ಯಾಮ್ಸನ್ ಔಟಾ, ನಾಟೌಟಾ?: ವಿವಾದ ಸೃಷ್ಠಿಸಿದೆ ಅಂಪೈರ್ ತೀರ್ಪು!

ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವ ಲೋಕನಾಥ್ ಬೋಳಾರ್ 1971 ರಲ್ಲಿ ಪದವಿ ಪಡೆದಿದ್ದರು. ಕಬಡ್ಡಿಯಲ್ಲಿ ಮಿಂಚಿದ್ದ ಬೋಳಾರ್, ಪವರ್ ಲಿಫ್ಟಿಂಗ್‌ನಲ್ಲೂ ರಾಷ್ಟ್ರಮಟ್ಟದಲ್ಲಿ 6 ಚಿನ್ನದ ಪದಕಗಳನ್ನು ಗೆದ್ದಿದ್ದರು.

ಲಿಪ್ಟಿಂಗ್‌ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಬೋಳಾರ್ ಭಾರತೀಯ ಪವರ್‌ ಲಿಫ್ಟಿಂಗ್‌ ತಂಡದ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಕ್ರೀಡಾ ಪ್ರತಿಭೆಯಾಗಿ ಗಮನ ಸೆಳೆದಿದ್ದ ಲೋಕನಾಥ್ ಬೋಳಾರ್‌ಗೆ 1978ರಲ್ಲಿ ಮೈಸೂರು ದಸರ ಪ್ರಶಸ್ತಿ ಮತ್ತು 1980ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ದಿನೇಶ್ ಕಾರ್ತಿಕ್ ಕೆಳಗಿಳಿಸಿ

ಇಂಡಿಯನ್ ರೈಲ್ವೇನಲ್ಲೂ ಉದ್ಯೋಗಿಯಾಗಿ ಸೇವೆ ಸಲ್ಲಿಸಿರುವ ಲೋಕನಾಥ್, ರೈಲ್ವೇಸ್ ನಿವೃತ್ತಿಯ ಬಳಿಕ ಮೀನುಗಾರಿಕೆ ಉದ್ಯಮದತ್ತ ಆಸಕ್ತಿ ತಾಳಿದರು. ಮೀನುಗಾರಿಕೆ ಉದ್ಯಮದಲ್ಲೂ ಬೋಳಾರ್ ಗಮನಾರ್ಹ ಕೊಡುಗೆ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, October 4, 2020, 16:45 [IST]
Other articles published on Oct 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X