ಫಾರ್ಮುಲಾ ಒನ್: ಮಾರ್ಚ್‌ನಿಂದ ನವೆಂಬರ್‌ಗೆ ಮುಂದೂಡಿಕೆಯಾದ ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ಸ್

ಮಾರ್ಚ್ 21 ರಿಂದ ಆರಂಭವಾಗಬೇಕಿದ್ದ ಫಾರ್ಮುಲಾ ಒನ್ ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ಸ್ ಮುಂದೂಡಿಕೆಯಾಗಿದೆ. ಮಾರ್ಚ್ ಬದಲಿಗೆ ನವೆಂಬರ್‌ನಲ್ಲಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು ನವೆಂಬರ್ ತಿಂಗಳಿನ 21ಕ್ಕೆ ಚಾಲನೆ ಪಡೆದುಕೊಳ್ಳಲಿದೆ. ಹೀಗಾಗಿ ಈ ಆವೃತ್ತಿಯ ಉದ್ಘಾಟನಾ ಟೂರ್ನಿ ಸಾಖಿರ್‌ನಲ್ಲಿ ನಡೆಯಲಿರುವ ಬಹ್ರೇನ್ ಗ್ರ್ಯಾಂಡ್ ಫಿಕ್ಸ್ ಆಗಿರಲಿದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಮೆಲ್ಬರ್ನ್‌ನಲ್ಲಿ ಪ್ರಯಾಣ ನಿರ್ಬಂಧವನ್ನು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಮುಲಾ ಒನ್ ರೇಸ್‌ನ ವೇಳಾಪಟ್ಟಿಯಲ್ಲಿ ಈ ಪ್ರಮುಖ ಬೆಳವಣಿಗೆಯಾಗಿದೆ.

ಮಂಗಳವಾರ ಫಾರ್ಮುಲಾ ಒನ್ 2021ರ ಕ್ಯಾಲೆಂಡರ್‌ನಲ್ಲಿನ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. ಇದರಲ್ಲಿ ಪ್ರಮುಖವಾಗಿ ಚೈನೀಸ್ ಗ್ರಾಂಡ್ ಪ್ರಿಕ್ಸ್ ಮುಂದೂಡಿರುವುದನ್ನು ಕೂಡ ತಿಳಿಸಲಾಗಿದೆ. ಚೈನೀಸ್ ಜಿಪಿಯ ಯಾವಾಗ ನಡೆಯಲಿದೆ ಎಂಬುದನ್ನು ಮಾತ್ರ ಇನ್ನಷ್ಟೇ ಘೋಷಣೆ ಮಾಡಬೇಕಿದೆ.

ಈ ಬಾರಿಯ ಫಾರ್ಮುಲಾ ಒನ್ ಆವೃತ್ತಿ ಸಾಖಿರ್‌ನಲ್ಲಿ ನಡೆಯಲಿರುವ ಬಹ್ರೇನ್ ಗ್ರ್ಯಾಂಡ್ ಫಿಕ್ಸ್‌ನಿಂದಿಗೆ ಆರಂಭವಾಗಲಿದೆ. ಈ ಮೂಲಕ ನಾಲ್ಕು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಎರಡು ರೇಸ್‌ಗಳು ನಡೆದಂತಾಗಲಿದೆ. ಕಳೆದ ವರ್ಷಾಂತ್ಯದಲ್ಲಿ ಬಹ್ರೇನ್ ಗ್ರ್ಯಾಂಡ್ ಪ್ರಿಕ್ಸ್ ಸಾಖಿರ್‌ನಲ್ಲಿ ನಡದಿತ್ತು.

ಕೊರೊನಾ ವೈರಸ್ ಎರಡು ವರ್ಷಗಳ ಫಾರ್ಮುಲಾ ಒನ್ ಕ್ಯಾಲೆಂಡರ್ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕುದ್ದ ರೇಸ್ ತಂಡವೊಂದರ ಸದಸ್ಯರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದ ಕಾರಣ ರದ್ದುಗೊಳಿಸಲಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Tuesday, January 12, 2021, 17:01 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X