ಫಾರ್ಮುಲಾ-1 ಚಾಂಪಿಯನ್ ಹ್ಯಾಮಿಲ್ಟನ್‌ಗೆ ನೈಟ್‌ಹುಡ್ ಪ್ರಶಸ್ತಿ

ಲಂಡನ್: ಏಳು ಬಾರಿ ಫಾರ್ಮುಲಾ-1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗೆ ನೈಟ್‌ಹುಡ್ ಪ್ರಶಸ್ತಿ ಲಭಿಸಿದೆ. ಬುಧವಾರ (ಡಿಸೆಂಬರ್ 30) ಪ್ರಕಟವಾಗಿರುವ ಯುನೈಟೆಡ್ ಕಿಂಗ್ಡಮ್‌ನ ಹೊಸವರ್ಷದ ಗೌರವ ಪಟ್ಟಿಯಲ್ಲಿ ಹ್ಯಾಮಿಲ್ಟನ್‌ ಹೆಸರಿಸಲಾಗಿದೆ.

100 ಶೇ. ಫಿಟ್ ಇಲ್ಲದಿದ್ರೂ ಸಿಡ್ನಿಯಲ್ಲಿ ವಾರ್ನರ್ ಆಡ್ತಾರೆ: ಮೆಕ್‌ಡೊನಾಲ್ಡ್

35ರ ಹರೆಯದ ಲೂಯಿಸ್ ಹ್ಯಾಮಿಲ್ಟನ್ ಅವರು ಈ ವರ್ಷ ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಎಫ್‌-1 ಡ್ರೈವರ್ ಆಗಿ ಗುರುತಿಸಿಕೊಂಡಿದ್ದರು. ಹ್ಯಾಮಿಲ್ಟನ್ ಅವರು ಫೆರಾರಿ ಶ್ರೇಷ್ಠ ಡ್ರೈವರ್, ಮೈಕೆಲ್ ಷೂಮೇಕರ್ ಅವರ 7 ಪ್ರಶಸ್ತಿಗಳ ದಾಖಲೆಯನ್ನು ಸರಿದೂಗಿಸಿಕೊಂಡಿದ್ದರು. ಅಲ್ಲದೆ ಜರ್ಮನ್ 91 ರೇಸ್‌ನಲ್ಲಿ ಗೆದ್ದು ಷೂಮೇಕರ್ ಅನ್ನು ಕೂಡ ಸೋಲಿಸಿದ್ದರು.

ಫಾರ್ಮುಲಾ-1ನಲ್ಲಿ ಇರುವ ಕರಿಯ ಯಶಸ್ವಿ ಚಾಲಕರಲ್ಲಿ ಹ್ಯಾಮಿಲ್ಟನ್ ಮೊದಲಿಗರು. ಫಾರ್ಮುಲಾ-1ನಲ್ಲಿ ಜನಪ್ರಿಯರಾಗಿದ್ದ ಹ್ಯಾಮಿಲ್ಟನ್ ಜನಾಂಗೀಯ ಅನ್ಯಾಯದ ವಿರುದ್ಧ ಧ್ವನಿಯೆತ್ತುವುದಕ್ಕೂ ತನ್ನ ಜನಪ್ರಿಯತೆ ಬಳಸಿಕೊಂಡಿದ್ದರು.

ಮುಂದಿನ ದಶಕದಲ್ಲಿ ನನ್ನ ಪಾಲಿಗೆ ಏನೆಲ್ಲಾ ಇರಲಿದೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ: ಸ್ಟೀವ್ ಸ್ಮಿತ್

'ಲೂಯಿಸ್ ನಮ್ಮ ಕ್ರೀಡೆಯ ನಿಜವಾದ ಪ್ರತಿಭಾವಂತ. ಅವರ ಪ್ರಭಾವವು ಕಾರಿನ ಒಳಗೆ ಮತ್ತು ಹೊರಗೆ ದೊಡ್ಡದಾಗಿದೆ,' ಎಂದು ಫಾರ್ಮುಲಾ-1ಗೆ ನೂತನವಾಗಿ ಆಯ್ಕೆಯಾಗಿರುವ ಮುಖ್ಯ ನಿರ್ವಹಣಾಧಿಕಾರಿ ಸ್ಟೆಫಾನೊ ಡೊಮೆನಿಕಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, January 1, 2021, 13:01 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X