ಫಾರ್ಮುಲಾ 1: 7 ಬಾರಿಯ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗೆ ಕೊರೊನಾ ವೈರಸ್ ದೃಢ

ಫಾರ್ಮುಲಾ 1ನ ಹಾಲಿ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಎಫ್‌1ನ ಅಧಿಕೃತ ಟ್ವಿಟ್ಟರ್‌ ಖಾತೆ ಈ ಬೆಳವಣಿಗೆಯನ್ನು ಖಚಿತಪಡಿಸಿದೆ. "ಲೂಯಿಸ್ ಹ್ಯಾಮಿಲ್ಟನ್ ವಾರಾಂತ್ಯದಲ್ಲಿ ಬಹ್ರೈನ್‌ನಲ್ಲಿ ನಡೆಯಲಿರುವ ಸಖಿರ್ ಗ್ರಾಂಡ್ ಪ್ರಿಕ್ಸ್‌ಅನ್ನು ಕಳೆದುಕೊಳ್ಳಲಿದ್ದಾರೆ. ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ" ಎಂದು ಟ್ವೀಟ್‌ನಲ್ಲಿ ಎಫ್‌1 ತಿಳಿಸಿದೆ.

ಕಳೆದ ವಾರ ಬಹ್ರೈನ್‌ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಮೊದಲನೆಯವರಾಗಿ ಗುರಿ ತಲುಪುವ ಮೂಲಕ ಹ್ಯಾಮಿಲ್ಟನ್ 2020ರ ಸಾಲಿನ ಎಫ್ 1 ಚಾಂಪಿಯನ್ ಪಟ್ಟವನ್ನು ತಮಗೆ ಖಚಿತಪಡಿಸಿಕೊಂಡಿದ್ದಾರೆ. ಸದ್ಯ 332 ಅಂಕಗಳನ್ನು ಹ್ಯಾಮಿಲ್ಟನ್ ತಮ್ಮ ಖಾತೆಯಲ್ಲಿ ಹೊಂದಿದ್ದು ಎರಡನೇ ಸ್ಥಾನದಲ್ಲಿರುವ ವಾಲ್ಟರಿ ಬೊಟ್ಟಾಸ್ 131 ಅಂಕಗಳನ್ನು ಹೊಂದಿದ್ದಾರೆ. ಈ ಮೂಲಕ ದೊಡ್ಡ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಫಾರ್ಮುಲಾ 1 ರೇಸ್‌ನಲ್ಲಿ ಭೀಕರ ಅಪಘಾತ, ಹೊತ್ತಿ ಉರಿದ ಕಾರು: ವಿಡಿಯೋ

ತನ್ನ ಹೇಳಿಕೆಯಲ್ಲಿ ಮರ್ಸಿಡೀಸ್ ಎಫ್ 1 ತಂಡ ಹ್ಯಾಮಿಲ್ಟನ್ ಅವರು ಸಣ್ಣ ಪ್ರಮಾಣದ ಕೊರೊನಾ ಲಕ್ಷಣಗಳನ್ನು ಹೊಂದಿದ್ದು ಉಳಿದಂತೆ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ. "ಕಳೆದ ವಾರ ಲೂಯಿಸ್ ಮೂರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ವರದಿಯನ್ನು ಪಡೆದಿದ್ದರು. ಭಾನುವಾರ ಮಧ್ಯಾಹ್ನದ ಬಳಿಕ ನಡೆದ ಪರೀಕ್ಷೆ ಕೊನೆಯದಾಗಿತ್ತು. ಈ ಮೂಲಕ ರೇಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದಿದ್ದರು" ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಹಾಗಿದ್ದರೂ ಸೋಮವಾರ ಬೆಳಗ್ಗೆ ಎದ್ದಾಗ ಅವರಲ್ಲಿ ಕೆಲ ಸಣ್ಣ ಲಕ್ಷಣಗಳು ಕಾಣಿಸಿದ ಕಾರಣ ತಕ್ಷಣವೇ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಅವರಿಗೆ ಕೊರೊನಾ ವೈಸರ್ ಇರುವುದು ಪತ್ತೆಯಾಯಿತು. ಬಳಿಕ ಮತ್ತೊಂದು ಪರೀಕ್ಷೆಯನ್ನು ನಡೆಸಲಾಗಿದ್ದು ಅದರಲ್ಲೂ ಪಾಸಿಟಿವ್ ಬಂದಿದ್ದು ವೈರಸ್‌ಗೆ ತುತ್ತಾಗಿರುವುದನ್ನು ಖಚಿತಪಡಿಸಲಾಗಿದೆ" ಎಂದು ಸ್ಟೇಟ್‌ಮೆಂಟ್‌ನಲ್ಲಿ ಮರ್ಸಿಡೀಸ್ ತಂಡ ಹೇಳಿಕೊಂಡಿದೆ.

ಆರ್ಚರ್ ಕಪಿಲ್‌ಗೆ ಕೊರೊನಾವೈರಸ್ ಸೋಂಕು ದೃಢ

ಹ್ಯಾಮಿಲ್ಟನ್ ಈ ವರ್ಷ ಪಾಲ್ಗೊಂಡ 15 ಫಾರ್ಮುಲಾ 1 ರೇಸ್‌ಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಈ ಋತುವಿನ ಐದು ರೇಸ್‌ಗಳು ಕೂಡ ಸೇರಿಕೊಂಡಿದೆ. ಕಳೆದ ಭಾನುವಾರ ನಡೆದ ಭೀಕರ ಅಪಘಾತದ ಕಾರಣಕ್ಕೆ ಬಗ್ರೈನ್ ಗ್ರಾಂಡ್ ಪ್ರಿಕ್ಸ್ ಹೆಚ್ಚು ಸುದ್ದಿಯಾಗಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, December 1, 2020, 14:34 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X