ಭಾರೀ ಪ್ರವಾಹ, ಗಗನ್ ನಾರಂಗ್ ಶೂಟಿಂಗ್ ಅಕಾಡೆಮಿಗೆ ಹಾನಿ

ಸಿಕಂದರಬಾದ್: ಬುಧವಾರ (ಅಕ್ಟೋಬರ್ 14) ಹೈದರಾಬಾದ್ ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭಾರತದ ಶೂಟರ್ ಗಗನ್ ನಾರಂಗ್ ಅವರ ಶೂಟಿಂಗ್ ಅಕಾಡೆಮಿ ಹಾನಿಗೀಡಾಗಿದೆ. ಗಗನ್‌ಗೆ ಸಿಕಂದರಬಾದ್‌ನ ತಿಮುಲ್‌ಘೆರಿಯಲ್ಲಿ ಗನ್ ಫಾರ್ ಗ್ಲೋರಿ ಶೂಟಿಂಗ್ ಅಕಾಡೆಮಿಯಿದೆ. ಈ ಅಕಾಡೆಮಿಗೆ ಹಾನಿಯಾಗಿದೆ.

ನಾರಂಗ್ ಅವರ ಟ್ರೇನಿಂಗ್ ಸೆಂಟರ್ ಇರುವ ಭಾಗದಲ್ಲಿ 3,000 ಚದರ ಅಡಿಯಷ್ಟು ನೀರಿನಿಂದ ಆವೃತವಾಗಿದೆ. ಟ್ರೇನಿಂಗ್ ಸೆಂಟರ್ ಒಳಗೆ ನೀರು ಪ್ರವೇಶಿಸಿರುವುದರಿಂದ ತರಬೇತಿ ಕೇಂದ್ರದಲ್ಲಿದ್ದ 80 ಬ್ರ್ಯಾಂಡ್‌ಗಳ ಹೊಸ ರೈಫಲ್ ಮತ್ತು ಪಿಸ್ತೂಲ್‌ಗಳು ತೊಂದರೆಗೀಡಾಗಿದೆ. ಸುಮಾರು 1.30 ಕೋ.ರೂ. ಬೆಲೆಯ ಪಿಸ್ತೂಲ್ ಮತ್ತು ರೈಫಲ್‌ಗಳು ಧ್ವಂಸವಾಗಿವೆ.

ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಜಯಭೇರಿ: ಎಬಿಡಿ ಭರ್ಜರಿ ಬೇಟೆ

ತರಬೇತಿ ಕೇಂದ್ರದಲ್ಲಿದ್ದ ಬಹುತೇಕ ಬಂದೂಕುಗಳನ್ನು ಜರ್ಮನಿ ಮತ್ತು ಇಟಲಿಯಿಂದ ಗಗನ್ ಖರೀದಿಸಿ ತಂದಿದ್ದರು. ಈ ರೈಫಲ್, ಪಿಸ್ತೂಲ್‌ಗಳ ಜೊತೆ 20 ವೈಯಕ್ತಿಕ ಶಸ್ತ್ರಾಸ್ತ್ರಗಳೂ ಇದ್ದವು. ಇವು ಕೆಲ ಶೂಟರ್‌ಗಳು ಸ್ವಿಟ್ಜರ್‌ಲ್ಯಾಂಡ್‌ನಿಂದ ಖರೀದಿಸಿ ತಂದಿದ್ದ ಶಸ್ತ್ರಾಸ್ತ್ರಗಳಾಗಿದ್ದವು.

'ಪ್ರವಾಹದಿಂದಾಗಿ ಇಡೀ ಸಿಟಿಯೇ ಕೆಟ್ಟ ಸ್ಥಿತಿಯಲ್ಲಿದೆ. ಮರ ಗಿಡಗಳು ರೋಡಿಗೆ ಬಿದ್ದಿವೆ. ಅಕಾಡೆಮಿ ತಲುಪಲು ನಾನು ಬಳಸು ದಾರಿಗಳನ್ನು ಬಳಸಬೇಕಾಯ್ತು. ಹೇಗೋ ಕಷ್ಟಪಟ್ಟು ಅಕಾಡೆಮಿ ತಲುಪಿದ್ದೇನೆ,' ಎಂದು ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ನಾರಂಗ್ ಮಾಹಿತಿ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, October 17, 2020, 19:59 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X