ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದ್ರಾವಿಡ್ ರನ್ನು ಕೆವಿನ್ ಪೀಟರ್ಸನ್ ಹೊಗಳಿದ್ದೇಕೆ?

By Mahesh

ಲಂಡನ್, ಅ.13: ಇಂಗ್ಲೆಂಡಿನ ವಿವಾದಿತ ಆಟಗಾರ ಕೆವಿನ್ ಪೀಟರ್ಸನ್ ಅವರು ತಮ್ಮ ಹೊಚ್ಚ ಹೊಸ ಪುಸ್ತಕ 'ಕೆಪಿ' ದಲ್ಲಿ ಟೆಸ್ಟ್ ಕ್ರಿಕೆಟ್ ಜಗತ್ತಿನ ಜೀವಂತ ದಂತಕಥೆ ರಾಹುಲ್ ದ್ರಾವಿಡ್ ರನ್ನು ಹಾಡಿ ಹೊಗಳಿದ್ದಾರೆ. ಹತ್ತು ಹಲವು ಅಗ್ರಗಣ್ಯ ಬ್ಯಾಟ್ಸ್ ಮನ್ ಗಳಿದ್ದರೂ ಕೆಪಿ ಅವರು ದ್ರಾವಿಡ್ ಹೊಗಳಿದ್ದೇಕೆ? ಕೆಪಿ ಪುಸ್ತಕದ ತುಂಬಾ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಸಹ ಆಟಗಾರರ ಬಗ್ಗೆ ಬಂದಿರುವ ಅಧ್ಯಾಯಗಳು ಸಂಚಲನವನ್ನು ಸೃಷ್ಟಿಸಿದೆ.

ಸ್ವಿಚ್ ಹಿಟ್ ಮೂಲಕ ಎಲ್ಲಾ ಬಗೆಯ ಕ್ರಿಕೆಟ್ ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೆವಿನ್ ಪೀಟರ್ಸನ್ ಅವರು ರಾಹುಲ್ ದ್ರಾವಿಡ್ ರನ್ನು 'ನೈಜ ಗುರು' ಎಂದು ಬಣ್ಣಿಸಿದ್ದಾರೆ. ಸ್ಪಿನ್ನರ್ ಗಳನ್ನು ಎದುರಿಸುವಾಗ ನಾನು ಅನುಭವಿಸುತ್ತಿದ್ದ ತೊಂದರೆಯನ್ನು ಮನಗಂಡು ದ್ರಾವಿಡ್ ಅವರು ನನಗೆ ಇ ಮೇಲ್ ಬರೆದಿದ್ದರು. ನಂತರ ನನ್ನ ಆಟದ ಶೈಲಿ ಬದಲಿಸಿಕೊಂಡು ಯಶ ಪಡೆದೆ ಎಂದು ಕೆಪಿ ವಿವರಿಸಿದ್ದಾರೆ. [ಪೀಟರ್ಸನ್ ವೃತ್ತಿಗೆ ಅಂತ್ಯ ಹಾಡಿದ ಇಂಗ್ಲೆಂಡ್]

'Genuine guru' Dravid helped me improve my game: Pietersen

ಸ್ಪಿನ್ ಬೌಲರುಗಳನ್ನ ಎದುರಿಸುವುದು ಹೇಗೆ ಎಂದು ರಾಹುಲ್ ದ್ರಾವಿಡ್ ಅವರು ಹೇಳಿಕೊಟ್ಟು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಇದರಿಂದ ಅಟದ ಬಗ್ಗೆ ನನಗಿದ್ದ ಏಕಾಗ್ರತೆ, ಕೌಶಲ್ಯ ಅಭಿವೃದ್ಧಿ ಹೊಂದಲು ಕಾರಣವಾಯಿತು. ದ್ರಾವಿಡ್ ಅವರ ಮಾರ್ಗದರ್ಶನ ಮತ್ತು ಪ್ರೇರಣೆ ನನ್ನ ಯಶಸ್ಸಿಗೆ ಕಾರಣವಾಗಿದೆ. ತನ್ನ ಕಾಲದಲ್ಲಿ ಟಾಪ್ ಕ್ಲಾಸ್ ಆಟಗಾರರಾಗಿದ್ದ ರಾಹುಲ್ ಅವರು ಸಹ ಆಟಗಾರರ ಆಟದ ಅಭಿವೃದ್ಧಿಗೂ ಸಹಕರಿಸುವುದು ಬಹುದೊಡ್ಡ ವಿಷಯ ಅವರ ಉದಾರತೆ ನನ್ನನ್ನು ಮೂಕನಾಗಿಸಿದೆ ಎಂದು ಕೆವಿನ್ ಹೇಳಿದ್ದಾರೆ.

'ರಾಹುಲ್ ನನ್ನ ಕ್ರಿಕೆಟನ್ನ ಇನ್ನಷ್ಟು ಉತ್ತಮಗೊಳಿಸಿದರು. ಆಟದ ಬಗ್ಗೆ ನನ್ನ ದೃಷ್ಟಿಕೋನವನ್ನೇ ಬದಲಿಸಿದರು. ಅವರ ದಯಾಪರತೆಯನ್ನ ನಾನು ಮರೆಯಲು ಸಾಧ್ಯವೇ ಇಲ್ಲ. ಐಪಿಎಲ್ ನಲ್ಲಿ ಆಡಲು ಶುರು ಮಾಡಿದ ಬಳಿಕ, ಹಾಗೂ ರಾಹುಲ್ ದ್ರಾವಿಡ್ ಜೊತೆ ಮಾರ್ಗದರ್ಶನ ಪಡೆದ ಬಳಿಕ ನಾನು ಸ್ಪಿನ್ ಬೌಲಿಂಗ್ ಅನ್ನ ಬಹಳ ಚೆನ್ನಾಗಿ ಆಡಲು ಕಲಿತೆ" ಎಂದು ಕೆವಿನ್ ಪೀಟರ್ಸನ್ ಬರೆದುಕೊಂಡಿದ್ದಾರೆ. [ಆಂಗ್ಲರು ಮೈದಾನದಲ್ಲೇ ಸುಸು ಮಾಡ್ಬಿಟ್ಟರು]

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕೆವಿನ್ ಪೀಟರ್ಸನ್ ಅವರು ತಮ್ಮ ಕೆಪಿ ಪುಸ್ತಕದ ಮೂಲಕ ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್, ಈ ಹಿಂದಿನ ಕೋಚ್ ಆಂಡಿ ಫ್ಲವರ್ ಸೇರಿದಂತೆ ಅನೇಕ ಆಟಗಾರರ ನೈಜ ಬಣ್ಣ ಬಯಲು ಮಾಡಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಹುಳುಕುಗಳು ಹೊರಬಿದ್ದಿವೆ. ಇದೆಲ್ಲದರ ನಡುವೆ ರಾಹುಲ್ ದ್ರಾವಿಡ್ ರನ್ನು ಹೊಗಳಿರುವುದು ಇಂಗ್ಲೆಂಡ್ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೆನಿಸಿದೆ (ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X