ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

15ರ ಹರೆಯದ ಸ್ವಿಮ್ಮರ್‌ಗೆ ಕಿರುಕುಳ: ಗೋವಾ ಸ್ವಿಮ್ಮಿಂಗ್‌ ಕೋಚ್‌ ವಜಾ!

Goa swimming coach allegedly molests 15-yr-old swimmer, sacked

ಪಣಜಿ, ಸೆಪ್ಟೆಂಬರ್ 5: ಗೋವಾ ಸ್ವಿಮ್ಮಿಂಗ್‌ ಅಸೋಸಿಯೇಷನ್, ಸ್ವಿಮ್ಮಿಂಗ್‌ ಕೋಚ್‌ ಸುರಜಿತ್ ಗಂಗೂಲಿ ಅವರನ್ನು ಕೆಲಸದಿಂದ ಕಿತ್ತು ಹಾಕಿದೆ. ಅಭ್ಯಾಸಕ್ಕಾಗಿ ಬಂದ 15ರ ಹರೆದ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ ಸುರಜಿತ್ ಅವರೊಂದಿಗಿನ ಒಪ್ಪಂದವನ್ನು ಅಸೋಸಿಯೇಷನ್ ಕೊನೆಗೊಳಿಸಿದೆ.

ಯುಕೆಯಲ್ಲಿ ಬ್ರ್ಯಾಂಡ್‌ ಪ್ರಚಾರ ಮುಂದುವರೆಸಲಿದೆ ರಾಜಸ್ಥಾನ್ ರಾಯಲ್ಸ್ಯುಕೆಯಲ್ಲಿ ಬ್ರ್ಯಾಂಡ್‌ ಪ್ರಚಾರ ಮುಂದುವರೆಸಲಿದೆ ರಾಜಸ್ಥಾನ್ ರಾಯಲ್ಸ್

ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆ ಸಚಿವ ಕಿರೆನ್ ರಿಜು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸ್ವಿಮ್ಮಿಂಗ್‌ ಕೋಚ್ ಅವರನ್ನು ಕೆಲಸದಿಂದ ಕಿತ್ತೊಗೆದಿರುವುದನ್ನು ತಿಳಿಸಿದ್ದಾರೆ. ಬಾಲಕಿಗೆ ಕೋಚ್ ಕಿರುಕುಳ ನೀಡಿರುವ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಕ್ರೀಡಾ ಸಚಿವಾಲಯ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಂಡಿದೆ.

ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್

'ಈ ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಸುರಜಿತ್ ಗಂಗೂಲಿ ಅವರೊಂದಿಗಿನ ಒಪ್ಪಂದವನ್ನು ಗೋವಾ ಸ್ವಿಮ್ಮಿಂದ್ ಅಸೋಸಿಯೇಷನ್ ಕೊನೆಗೊಳಿಸಿದೆ. ಈ ಕೋಚ್‌ಗೆ ಭಾರತದ ಯಾವುದೇ ಸ್ವಿಮ್ಮಿಂಗ್ ಪ್ರಾಧಿಕಾರಗಳು ಕೆಲಸ ನೀಡಬಾರದು ಎಂದು ಕೇಳಿಕೊಳ್ಳುತ್ತೇನೆ. ಇದು ಎಲ್ಲಾ ಕ್ರೀಡಾ ಪ್ರಾಧಿಕಾರಿಗಳ ಶಿಸ್ತಿಗೆ ಅನ್ವಯಿಸಲಿದೆ,' ಎಂದು ರಿಜು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ನಡೆದಿದ್ದು ಗೋವಾದ ಮಾಪುಸಾದಲ್ಲಿ. ಘಟನೆಯ ನಿಖರ ದಿನಾಂಕ ಇನ್ನೂ ತಿಳಿದು ಬಂದಿಲ್ಲ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಅಭ್ಯಾಸದ ವೇಳೆ ಬಾಲಕಿ ಮಂಕಾಗಿದ್ದಿದ್ದನ್ನು ಬಾಲಕಿಯ ತಂದೆ ಗಮನಿಸಿದ್ದರು. ಆ ಬಳಿಕ ಅವರಿಗೆ ಘಟನೆಯ ಬಗ್ಗೆ ತಿಳಿದಿದೆ. ಬಾಲಕಿ ಮತ್ತು ಅವಳ ತಂದೆ ಬೆಂಗಾಲ್‌ನ ಹೂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಊರು ರಿಶ್ರಾಕ್ಕೆ ವಾಪಸ್ಸಾಗಿದ್ದಾರೆ.

Story first published: Thursday, September 5, 2019, 17:55 [IST]
Other articles published on Sep 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X